ನವದೆಹಲಿ: ದೇಶಿಯ ಉತ್ಪಾದಕರಿಗೆ ನೆರವಾಗಲು ಮತ್ತು ಚೀನಾದ ಆಮದಿಗೆ ತಡೆಯೊಡ್ಡಲು ಸೌರ ವಿದ್ಯುತ್ ಉಪಕರಣಗಳ ಮೇಲೆ ಶೇ.20ರಷ್ಟು ಕಸ್ಟಮ್ಸ್ ಸುಂಕ ವಿಧಿಸಲಾಗುವುದು ಎಂದು ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಶೇ.20ರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸುವ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (ಎಂಎನ್‌ಆರ್‌ಇ) ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆ ಎಂದರು.
ಕಳೆದ ಕೆಲವು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಸಾಮರ್ಥ್ಯ ವೃದ್ಧಿಸಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸೌರ ಉಪಕರಣ ಮತ್ತು ಘಟಕಗಳ ಆಮದಿನ ಮೇಲಿನ ಅವಲಂಬನೆ, ವಿಶೇಷವಾಗಿ ಚೀನಾದಿಂದ ಕಡಿತಗೊಳಿಸುವ ಸಮಯ ಇದೀಗ ಬಂದಿದೆ ಎಂದು ಸಚಿವರು ಹೇಳಿದರು.