ಕರ್ನಾಟಕ

karnataka

By

Published : Jul 21, 2020, 7:48 PM IST

ETV Bharat / business

ಕೃಷಿ ಉತ್ಪನ್ನಗಳ ಮುಕ್ತ ವ್ಯಾಪಾರಕ್ಕೆ ಎರಡು ಸುಗ್ರೀವಾಜ್ಞೆ: ನಿಯಮ ಮುರಿದರೆ ₹ 50,000- 1 ಲಕ್ಷ ತನಕ ದಂಡ

ಕೃಷಿ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ, ರಾಜ್ಯ ಸರ್ಕಾರಗಳು ಮಂಡಿಗಳ ಹೊರಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ತೆರಿಗೆ ವಿಧಿಸುವುದನ್ನು ನಿಷೇಧಿಸುತ್ತದೆ.

farm trading
ಕೃಷಿ ಉತ್ಪನ್ನ

ನವದೆಹಲಿ: ಕೃಷಿ ಮಂಡಿಗಳ​ ಹೊರಗೆ ರೈತರ ಉತ್ಪನ್ನಗಳಿಗೆ ಮುಕ್ತ ವ್ಯಾಪಾರ ಒದಗಿಸಲು ಎರಡು ಸುಗ್ರೀವಾಜ್ಞೆಗಳನ್ನು ಸರ್ಕಾರ ಸೂಚಿಸಿದೆ. ಇವು ಉತ್ಪನ್ನಗಳ ಮಾರಾಟಕ್ಕಾಗಿ ಉತ್ಪಾದನೆಗೂ ಮುನ್ನ ಖಾಸಗಿ ಉದ್ಯಮಿಗಳ ಜೊತೆ ಕೃಷಿ ಒಪ್ಪಂದ ಮಾಡಿಕೊಳ್ಳಲು ರೈತರಿಗೆ ಅಧಿಕಾರ ನೀಡಲಿದೆ.

ಕೃಷಿ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ, ರಾಜ್ಯ ಸರ್ಕಾರಗಳು ಮಂಡಿಗಳ ಹೊರಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ತೆರಿಗೆ ವಿಧಿಸುವುದನ್ನು ನಿಷೇಧಿಸುತ್ತದೆ. ಮತ್ತು ರೈತರಿಗೆ ತಮ್ಮ ಉತ್ಪನ್ನಗಳನ್ನು ಸಂಭಾವನೆ ದರದಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯ ನೀಡುತ್ತದೆ. ಈ ಒಪ್ಪಂದವನ್ನು 2020ರ ಜೂನ್ 5ರಂದು ಘೋಷಿಸಲಾಗಿದೆ. ಆದರೆ, ಕೇಂದ್ರ ಕೃಷಿ ಸಚಿವಾಲಯವು ಜುಲೈ 20ರಂದು ಎರಡು ಸುಗ್ರೀವಾಜ್ಞೆಗಳಿಗೆ ಸೂಚನೆ ನೀಡಿತ್ತು.

ಅಧಿಸೂಚನೆಯ ಪ್ರಕಾರ, ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆಯು ಸರ್ಕಾರದ ಅಧಿಸೂಚನೆ ಮಂಡಳಿಯ ಹೊರಗೆ ರೈತರ ಉತ್ಪನ್ನಗಳ ಅಂತರರಾಜ್ಯ ಮತ್ತು ಅಂತರರಾಜ್ಯ ವ್ಯಾಪಾರಗಳಿಗೆ ಅನುಮತಿಸುತ್ತದೆ.

ಕೃಷಿ ಗೇಟ್‌, ಕಾರ್ಖಾನೆ ಆವರಣ, ಗೋದಾಮು, ಕೋಲ್ಡ್ ಸ್ಟೋರೇಜ್‌ ಸೇರಿದಂತೆ ರೈತರ ತಮ್ಮ ಉತ್ಪನ್ನಗಳನ್ನು ಯಾವುದೇ ಉತ್ಪಾದನಾ ಸ್ಥಳ, ಸಂಗ್ರಹ ಕೇಂದ್ರಗಳಲ್ಲಿ ವ್ಯಾಪಾರ ಮಾಡಲು ಅವಕಾಶವಿದೆ. ನಿಗದಿತ ವ್ಯಾಪಾರ ಪ್ರದೇಶದಲ್ಲಿ ರೈತರ ಉತ್ಪನ್ನಗಳ ಎಲೆಕ್ಟ್ರಾನಿಕ್ ವ್ಯಾಪಾರಕ್ಕೂ ಸಹ ಈ ಸುಗ್ರೀವಾಜ್ಞೆ ಅನುಮತಿಸುತ್ತದೆ. ಖಾಸಗಿ ಉದ್ಯಮಿಗಳು, ರೈತ ಉತ್ಪಾದಕ ಸಂಸ್ಥೆಗಳು ಅಥವಾ ಕೃಷಿ ಸಹಕಾರಿ ಸಂಘಗಳಂತಹ ವೇದಿಕೆಗಳನ್ನು ಸ್ಥಾಪಿಸಬಹುದು ಮತ್ತು ನಿರ್ವಹಿಸಬಹುದು.

ಪ್ಲಾಟ್‌ಫಾರ್ಮ್ ಅನ್ನು ನಿರ್ವಹಿಸುವ ವ್ಯಕ್ತಿಗೆ ಇ-ಟ್ರೇಡಿಂಗ್ ನಿಬಂಧನೆಗಳನ್ನು ಪಾಲಿಸದಿದ್ದಕ್ಕಾಗಿ 50,000 ರಿಂದ 10 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ. ನಿರಂತರ ಉಲ್ಲಂಘನೆ ನಡೆದರೆ ದಿನಕ್ಕೆ 10,000 ರೂ. ದಂಡ ವಿಧಿಸಬಹುದು.

ABOUT THE AUTHOR

...view details