ಕರ್ನಾಟಕ

karnataka

ETV Bharat / business

ಬಡವರು, ಕೃಷಿಕರಿಗೆ 7,500 ರೂ. ನೀಡಿ; ಕಾಂಗ್ರೆಸ್​ ಆಗ್ರಹ - ಕೋವಿಡ್ 19

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಪುನರುಜ್ಜೀವನಕ್ಕಾಗಿ ಕಾಂಗ್ರೆಸ್ ಶೀಘ್ರದಲ್ಲೇ ವಿವರವಾದ ಯೋಜನೆಯನ್ನು ಸಿದ್ಧಪಡಿಸಲಿದೆ. ಸುಗಮ ಬೆಳೆ ಸಂಗ್ರಹಣೆ ಮತ್ತು ವಲಸಿಗರ ಸಮಸ್ಯೆಗಳನ್ನು ಪರಿಹರಿಸುವ ಕ್ರಮಗಳನ್ನು ಕೈಗೊಳ್ಳಲಿದೆ. ಇದನ್ನು ಕೇಂದ್ರ ಸರ್ಕಾರದ ಮುಂದೆ ಇಡಲಾಗುವುದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.

former PM Manmohan Singh
ಮಾಜಿ ಪ್ರಧಾನಿ ಮನಮೋಹನ್ ಸಿಂಗ್

By

Published : Apr 20, 2020, 5:34 PM IST

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸಮಿತಿ ಸೋಮವಾರ ಮೊದಲ ಬಾರಿಗೆ ಸಭೆ ಸೇರಿದ್ದು, ಎಂಎಸ್‌ಎಂಇ ಕ್ಷೇತ್ರದ ಪುನರುಜ್ಜೀವನ, ಸುಗಮ ಬೆಳೆ ಖರೀದಿ ಮತ್ತು ವಲಸೆ ಸಮಸ್ಯೆಗಳಂತಹ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿತು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಪುನರುಜ್ಜೀವನಕ್ಕಾಗಿ ಕಾಂಗ್ರೆಸ್ ಶೀಘ್ರದಲ್ಲೇ ವಿವರವಾದ ಯೋಜನೆಯನ್ನು ಸಿದ್ಧಪಡಿಸಲಿದೆ. ಸುಗಮ ಬೆಳೆ ಸಂಗ್ರಹಣೆ ಮತ್ತು ವಲಸಿಗರ ಸಮಸ್ಯೆಗಳನ್ನು ಪರಿಹರಿಸುವ ಕ್ರಮಗಳನ್ನು ಕೈಗೊಳ್ಳಲಿದೆ. ಇದನ್ನು ಕೇಂದ್ರ ಸರ್ಕಾರದ ಮುಂದೆ ಇಡಲಾಗುವುದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.

ಜನ ಧನ್ ಖಾತೆಯ ಎಲ್ಲ ಪಿಂಚಣಿದಾರರಿಗೆ ಮತ್ತು ಪಿಎಂ ಕಿಸಾನ್ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯ ಮೂಲಕ ತಲಾ 7,500 ರೂ. ನೀಡುವಂತೆ ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಎಂಎಸ್ಎಂಇ ವಲಯವು ಸಾಮಾಜಿಕ ಮತ್ತು ಆರ್ಥಿಕ ಪ್ರಾಮುಖ್ಯತೆ ದೃಷ್ಟಿಯಿಂದ ದೇಶದ ಅತಿದೊಡ್ಡ ಉದ್ಯೋಗ ಪೂರೈಕೆದಾರರಲ್ಲಿ ಒಂದಾಗಿದೆ. ಹೀಗಾಗಿ ಈ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಮೇಶ್ ಆಗ್ರಹಿಸಿದರು. ಸಹಾನುಭೂತಿ, ಜವಾಬ್ದಾರಿಯುತ ಸರ್ಕಾರವು ದುರ್ಬಲರಿಗೆ ಹಣ ಒದಗಿಸಲು ಮುಂದಾಗಲಿದೆ ಎಂಬ ಖಾತ್ರಿಯಿದೆ. ಕಾಂಗ್ರೆಸ್ ಮಂಡಿಸಿದ ಸಲಹೆಗಳನ್ನು ಕೇಂದ್ರ ಸರ್ಕಾರ ರಚನಾತ್ಮಕವಾಗಿ ಸ್ವೀಕರಿಸಲಿ ಎಂದು ಅವರು ಆಶಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಸಭೆಯಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details