ಕರ್ನಾಟಕ

karnataka

ETV Bharat / business

ಕೇಂದ್ರ ಆಯವ್ಯಯ​ 2021-22: ಸೀತಾರಾಮನ್​ರ ಬಜೆಟ್ ಭಾರ ತಗ್ಗಿಸುತ್ತೆ ತೈಲ ದರ ಸ್ಥಿರತೆ! - 2020ರ ಹಣಕಾಸು ವರ್ಷದ ಬಜೆಟ್

ಮುಂದಿನ ವರ್ಷ ಫೆಬ್ರವರಿಯಲ್ಲಿ 2021-22ರ ಬಜೆಟ್ ಮಂಡಿಸುವ ಮುನ್ನ ಹಣಕಾಸು ಸಚಿವಾಲಯವು ತೈಲ ಸಬ್ಸಿಡಿ ಬಗ್ಗೆ ಲೆಕ್ಕಾಚಾರ ಹಾಕುತ್ತಿದೆ. ಪೆಟ್ರೋಲಿಯಂ ಸಬ್ಸಿಡಿ ಹೊರೆ 2021ರ ಆರ್ಥಿಕ ವರ್ಷದಲ್ಲಿನ 40,915 ಕೋಟಿ ರೂ.ಯ ಅರ್ಧಕ್ಕಿಂತಲೂ ಕಡಿಮೆ ಆಗಬಹುದು ಎಂದು ಮೂಲಗಳು ತಿಳಿಸಿವೆ.

Fuel
ಇಂಧನ

By

Published : Dec 25, 2020, 8:47 PM IST

ನವದೆಹಲಿ:ತೈಲ ಬೆಲೆಗಳ ಸ್ಥಿರವಾಗಿದ್ದರಿಂದ ಮುಂದಿನ ವರ್ಷದ ಬಜೆಟ್‌ನಲ್ಲಿ ತೈಲ ಸಬ್ಸಿಡಿ ಹಂಚಿಕೆಯಲ್ಲಿ ದೊಡ್ಡ ಕಡಿತ ಮಾಡಲು ಸರ್ಕಾರಕ್ಕೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮುಂದಿನ ವರ್ಷ ಫೆಬ್ರವರಿಯಲ್ಲಿ 2021-22ರ ಬಜೆಟ್ ಮಂಡಿಸುವ ಮುನ್ನ ಹಣಕಾಸು ಸಚಿವಾಲಯವು ಈ ಬಗ್ಗೆ ಲೆಕ್ಕಾಚಾರ ಹಾಕುತ್ತಿದೆ. ಪೆಟ್ರೋಲಿಯಂ ಸಬ್ಸಿಡಿ ಹೊರೆ 2021ರ ಆರ್ಥಿಕ ವರ್ಷದಲ್ಲಿನ 40,915 ಕೋಟಿ ರೂ.ಯ ಅರ್ಧಕ್ಕಿಂತಲೂ ಕಡಿಮೆ ಆಗಬಹುದು ಎಂದು ಮೂಲಗಳು ತಿಳಿಸಿವೆ.

ದೇಶೀಯ ಎಲ್​ಪಿಜಿ ಸಿಲಿಂಡರ್​ಗಳಿಗೆ ಸರ್ಕಾರದ ಬೆಂಬಲ ಕಡಿಮೆ ಆಗುವುದರಿಂದ ಸಬ್ಸಿಡಿಯಲ್ಲಿ ಹೆಚ್ಚಿನ ಉಳಿತಾಯ ನಿರೀಕ್ಷಿಸಲಾಗಿದೆ. ಅನುಕೂಲಕರ ಜಾಗತಿಕ ತೈಲ ಮಾರುಕಟ್ಟೆ, ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಈ ವರ್ಷದ ಸೆಪ್ಟೆಂಬರ್‌ನಿಂದ ಅರ್ಹ ದೇಶೀಯ ಗ್ರಾಹಕರಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಅಡಿ ನೀಡುವ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಸರ್ಕಾರಕ್ಕೆ ನೆರವಾಗಿತು.

ಜಾಗತಿಕ ತೈಲ ಬೆಲೆಗಳ ಅನಿಶ್ಚಿತತೆಯು ದೇಶೀಯ ಎಲ್​ಪಿಜಿ ಬೆಲೆ (ಸಬ್ಸಿಡಿ ರಹಿತ) ಡಿಸೆಂಬರ್‌ನಲ್ಲಿ 14.2 ಕೆಜಿ ಸಿಲಿಂಡರ್‌ಗೆ 100 ರೂ.ಯಷ್ಟು ಹೆಚ್ಚಳವಾಗಿ 694 ರೂ.ಗೆ ತಲುಪಿದೆ. ಆದರೆ, 2022ರ ಹಣಕಾಸು ವರ್ಷದ ಅವಧಿಯಲ್ಲಿ ಸರ್ಕಾರವು ಪ್ರತಿ ಸಿಲಿಂಡರ್ ಸಬ್ಸಿಡಿಗೆ 100 ರೂ. ನೀಡಿದರೂ 14,000 ಕೋಟಿ ರೂ.ಯಷ್ಟಾಗುತ್ತದೆ.

ಇದನ್ನೂ ಓದಿ: ಗುಡ್​​ ಬೈ 2020: ಕೊರೊನಾಗ್ನಿಕುಂಡ ದಾಟಿ ಬಂದ ವಾಹನೋದ್ಯಮ.. 3.5 ಲಕ್ಷ ನೌಕರರು ಬೀದಿಪಾಲು

2021ರ ಹಣಕಾಸು ವರ್ಷಕ್ಕೆ ಸರ್ಕಾರ ಪೆಟ್ರೋಲಿಯಂ ಸಬ್ಸಿಡಿಯಾಗಿ 40,915 ಕೋಟಿ ರೂ. ಮೀಸಲಿಟ್ಟಿದ್ದು, ಕಳೆದ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ 38,569 ಕೋಟಿ ರೂ.ಯಿಂದ ಶೇ 6ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಎಲ್‌ಪಿಜಿ ಸಬ್ಸಿಡಿ ಹಂಚಿಕೆ ಪ್ರಸಕ್ತ ವರ್ಷದಲ್ಲಿ 37,256.21 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಭಾರತದಲ್ಲಿ ಸುಮಾರು 28.65 ಕೋಟಿ ಎಲ್‌ಪಿಜಿ ಗ್ರಾಹಕರಿದ್ದಾರೆ. ಈ ಪೈಕಿ ವಾರ್ಷಿಕ 10 ಲಕ್ಷ ರೂ. ಇರುವ ಸುಮಾರು 1.5 ಕೋಟಿ ಜನರು 2016ರ ಡಿಸೆಂಬರ್‌ನಿಂದ ಎಲ್‌ಪಿಜಿ ಸಬ್ಸಿಡಿ ಪಡೆಯಲು ಅರ್ಹರಾಗಿಲ್ಲ.

ABOUT THE AUTHOR

...view details