ಕರ್ನಾಟಕ

karnataka

ETV Bharat / business

ಗುಲಾಬಿ ಈರುಳ್ಳಿ ರಫ್ತಿಗೆ ಷರತ್ತು ಬದ್ಧ ಅನುಮತಿ: ರಾಜ್ಯದ ರೈತರೀಗ ನಿರಾಳ - ಈರುಳ್ಳಿ ರಫ್ತು ನಿಷೇಧ ತೆರವು

ಈರುಳ್ಳಿ ರಫ್ತುದಾರರಿಗೆ ಕೆಲವು ವಿಧದ ವಸ್ತುಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸುವ ಮೂಲಕ ಭಾಗಶಃ ಪರಿಹಾರ ನೀಡಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಅದರಂತೆ, ಬೆಂಗಳೂರು ರೋಸ್ ಆನಿಯನ್' ಮತ್ತು 'ಕೃಷ್ಣಪುರಂ' ತಳಿಗಳನ್ನು ತಲಾ 10,000 ಮೆಟ್ರಿಕ್​ ಟನ್​ವರೆಗೂ ರಫ್ತು ಮಾಡಬಹುದು. ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಸೂಚಿಸಿದೆ.

onion export
ಈರುಳ್ಳಿ

By

Published : Oct 9, 2020, 4:00 PM IST

ನವದೆಹಲಿ: ಕರ್ನಾಟಕದ ಚಿಕ್ಕಬಳ್ಳಾಪುರ ಹಾಗೂ ಕೋಲಾರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಬೆಳೆಯು ಗುಲಾಬಿ ಈರುಳ್ಳಿ (ಬೆಂಗಳೂರು ರೋಸ್​ ಆನಿಯನ್​) ರಫ್ತಿಗೆ ಕೇಂದ್ರ ಸರ್ಕಾರ ವಿಧಿಸಿದ್ದ ನಿಷೇಧದಲ್ಲಿ ಕೊಂಚ ವಿನಾಯಿತು ನೀಡಿದೆ.

ಈರುಳ್ಳಿ ರಫ್ತುದಾರರಿಗೆ ವಿದೇಶಿ ಸಾಗಣೆಗೆ ಕೆಲವು ವಿಧದ ವಸ್ತುಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸುವ ಮೂಲಕ ಭಾಗಶಃ ಪರಿಹಾರ ನೀಡಲು ಕೇಂದ್ರವು ನಿರ್ಧರಿಸಿದೆ. ಅದರಂತೆ, ಬೆಂಗಳೂರು ರೋಸ್ ಆನಿಯನ್' ಮತ್ತು 'ಕೃಷ್ಣಪುರಂ' ತಳಿಗಳನ್ನು ತಲಾ 10,000 ಮೆಟ್ರಿಕ್​ ಟನ್​ವರೆಗೂ ರಫ್ತು ಮಾಡಬಹುದು. ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಸೂಚಿಸಿದೆ.

'ಬೆಂಗಳೂರು ಗುಲಾಬಿ' ಈರುಳ್ಳಿಯ ರಫ್ತು ಸಾಗಣೆಯನ್ನು ಚೆನ್ನೈ ಬಂದರು ಹಾಗೂ ರಫ್ತು ವಹಿವಾಟನ್ನು 2021ರ ಮಾರ್ಚ್ 31ರೊಳಗೆ ಪೂರ್ಣಗೊಳಿಸಲು ಅನುಮತಿಸಲಾಗುವುದು ಎಂದು ವಿದೇಶಾಂಗ ವಾಣಿಜ್ಯ ನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ಆದೇಶ ಪ್ರತಿ

ರಫ್ತುದಾರನು ಕರ್ನಾಟಕ ಸರ್ಕಾರದ ತೋಟಗಾರಿಕೆ ಆಯುಕ್ತರಿಂದ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಉತ್ಪನ್ನ ಮತ್ತು ರಫ್ತು ಮಾಡಬೇಕಾದ 'ಬೆಂಗಳೂರು ಗುಲಾಬಿ' ಈರುಳ್ಳಿಯ ಪ್ರಮಾಣ ಪ್ರಮಾಣೀಕರಿಸಬೇಕು ಎಂದು ಹೇಳಿದೆ.

'ಕೃಷ್ಣಪುರಂ' ತಳಿಯನ್ನು ರಫ್ತುದಾರರು ಆಂಧ್ರಪ್ರದೇಶ ಸರ್ಕಾರದ ಕಡಪ ತೋಟಗಾರಿಕೆ ಸಹಾಯಕ ನಿರ್ದೇಶಕರಿಂದ ರಫ್ತು ಮಾಡುವವರು ಪರವಾನಗಿ ಪಡೆಯಬೇಕು. ರಫ್ತು ಉದ್ದೇಶಗಳಿಗಾಗಿ ಈರುಳ್ಳಿಯ ಪ್ರಮಾಣವನ್ನು ಪ್ರಮಾಣೀಕರಿಸಬೇಕು ಎಂದು ಡಿಜಿಎಫ್‌ಟಿ ಆದೇಶಿಸಿದೆ.

ಆದೇಶ ಪ್ರತಿ

ಕಳೆದ ತಿಂಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತು ಮಾಡುವುದನ್ನು ಕೇಂದ್ರ ನಿಷೇಧಿಸಿತ್ತು. ಸೆಪ್ಟೆಂಬರ್‌ನಲ್ಲಿ ಹೊರಡಿಸಲಾದ ಪರಿಷ್ಕೃತ ನೀತಿಯಲ್ಲಿ 'ಬೆಂಗಳೂರು ಗುಲಾಬಿ' ಮತ್ತು 'ಕೃಷ್ಣಪುರಂ' ಈರುಳ್ಳಿ ಸೇರಿದಂತೆ ಎಲ್ಲ ತಳಿಗಳ ರಫ್ತು ನಿಷೇಧಿಸಲಾಗಿತ್ತು.

ನಿಷೇಧದ ಪರಿಣಾಮ ಕೊಲಂಬೊ ಮತ್ತು ಮಲೇಷ್ಯಾಗೆ ರಫ್ತಾಗಲು ಸಾಗಿಸಿದ್ದ ಬೆಂಗಳೂರು ರೋಸ್‌ ಈರುಳ್ಳಿ ಮತ್ತು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಭಾಗದ ಸಹಸ್ರಾರು ಟನ್‌ ಈರುಳ್ಳಿ ಬಂದರುಗಳಲ್ಲಿ ಸಿಲುಕಿತ್ತು. ತೋಟಗಳಲ್ಲಿರುವ ಈರುಳ್ಳಿ ಬೆಳೆ ಖರೀದಿಸುವವರಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.

ABOUT THE AUTHOR

...view details