ನವದೆಹಲಿ:ದೇಶದ ಆಕ್ವಾ ರೈತರ ಮತ್ತು ಮೀನುಗಾರರನ್ನು ಖರೀದಿದಾರ ಮತ್ತು ರಫ್ತುದಾರರ ಜತೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ-ಸ್ಯಾಂಟಾ ಎಂಬ ಇ-ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ.
ಖರೀದಿದಾರರಿಗೆ ಉತ್ಪನ್ನದ ಮೂಲ ಕಂಡು ಹಿಡಿಯುವ ಸಾಮರ್ಥ್ಯದೊಂದಿಗೆ ಮಾರಾಟಗಾರರಿಂದ ನೇರವಾಗಿ ಕೊಳ್ಳಲು ಅವಕಾಶ ನೀಡುತ್ತದೆ. ಇದು ಉತ್ಪನ್ನದ ಜಾಗತಿಕ ವ್ಯಾಪಾರದ ಪ್ರಮುಖ ಅಂಶವಾಗಿದೆ.
ಇ-ಸ್ಯಾಂಟಾ ಪೋರ್ಟಲ್ ಅಕ್ವಾಕಲ್ಚರ್‌ನಲ್ಲಿ ಎನ್ಸಿಎಸ್ಎ (NaCSA) ರೈತರ ವ್ಯಾಪಾರ ಹೆಚ್ಚಿಸಲು ಎಲೆಕ್ಟ್ರಾನಿಕ್ ಪರಿಹಾರ ಸೂಚಿಸುತ್ತದೆ. ಇದರ ನೋಡಲ್ ಬಾಡಿ, ನ್ಯಾಷನಲ್ ಸೆಂಟರ್ ಫಾರ್ ಸಸ್ಟೈನಬಲ್ ಅಕ್ವಾಕಲ್ಚರ್ (ನಾಸಿಎಸ್ಎ) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಸಾಗರೋತ್ತರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಂಪಿಇಡಿಎ) ಭಾಗವಾಗಿದೆ.
ಇ-ಸ್ಯಾಂಟಾ ಆದಾಯ, ಜೀವನಶೈಲಿ, ಸ್ವಾವಲಂಬನೆ, ಗುಣಮಟ್ಟ, ಉತ್ಪನ್ನಗಳ ಪತ್ತೆಹಚ್ಚುವಿಕೆ ವೃದ್ಧಿಸುತ್ತದೆ ಮತ್ತು ನಮ್ಮ ಆಕ್ವಾ ರೈತರಿಗೆ ಹೊಸ ಆಯ್ಕೆಗಳನ್ನು ಒದಗಿಸುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದರು.