ನವದೆಹಲಿ:ಹೊಸ ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ) ಸ್ಥಾಪಿಸಲು ಸರ್ಕಾರವು 2021ರ ಹಣಕಾಸು ಮೂಲಸೌಕರ್ಯ ಮತ್ತು ಅಭಿವೃದ್ಧಿ (ನಾಬಿಎಫ್‌ಐಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.
ಮೂಲಸೌಕರ್ಯ ಯೋಜನೆಗಳಿಗೆ ಧನಸಹಾಯ ನೀಡಲು ಸರ್ಕಾರಿ ಸ್ವಾಮ್ಯದ ಡಿಎಫ್‌ಐ ಸ್ಥಾಪಿಸಲು ದಾರಿ ಮಾಡಿಕೊಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್ಫ್ರಾಸ್ಟ್ರಕ್ಚರ್ ಅಂಡ್ ಡೆವಲಪ್‌ಮೆಂಟ್ (ನಾಬಿಎಫ್‌ಐಡಿ) ಮಸೂದೆ 2021ಅನ್ನು ಸೋಮವಾರ ಪರಿಚಯಿಸಿದ್ದಾರೆ.
ಇದನ್ನೂ ಓದಿ: ಕಚ್ಚಾ ತೈಲ ಬಿದ್ದರೂ ಒಂದು ಪೈಸೆಯೂ ಕೆಳಗಿಳಿಯದ ಪೆಟ್ರೋಲ್, ಡೀಸೆಲ್: ಮೆಟ್ರೋ ನಗರಗಳ ಇಂಧನ ಬೆಲೆ ಹೀಗಿದೆ!
ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ) ಸ್ಥಾಪಿಸುವ ಬಜೆಟ್ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಕಳೆದ ವಾರ ಅನುಮೋದನೆ ನೀಡಿತ್ತು. ಇದು ಹೂಡಿಕೆದಾರರಿಂದ ಹಣ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ.
ಮೂಲಸೌಕರ್ಯ ಮತ್ತು ಅಭಿವೃದ್ಧಿಯ ರಾಷ್ಟ್ರೀಯ ಬ್ಯಾಂಕ್ 20,000 ಕೋಟಿ ರೂ. ಸಂಗ್ರಹ ನಿಧಿಯೊಂದಿಗೆ ಸ್ಥಾಪನೆಯಾಗಲಿದೆ. ಸರ್ಕಾರವು 5,000 ಕೋಟಿ ರೂ. ಆರಂಭಿಕ ಅನುದಾನ ನೀಡಲಿದೆ. ಮುಂದಿನ ಕೆಲವು ವರ್ಷಗಳಲ್ಲಿ ಡಿಎಫ್‌ಐ ಈ ನಿಧಿಯನ್ನು 3 ಲಕ್ಷ ಕೋಟಿ ರೂ. ತನಕ ಸಂಗ್ರಹಿಸುತ್ತದೆ ಎಂದು ಸರ್ಕಾರ ನಿರೀಕ್ಷೆ ಇರಿಸಿಕೊಂಡಿದೆ.