ಕರ್ನಾಟಕ

karnataka

ETV Bharat / business

2ನೇ ಬಾರಿ ಆರ್ಥಿಕ ಉತ್ತೇಜಕ ಪ್ಯಾಕೇಜ್​ ಘೋಷಣೆ ಸಾಧ್ಯತೆ: ಸುಳಿವು ಕೊಟ್ಟ ವಿತ್ತ ಅಧಿಕಾರಿ - ಹಣಕಾಸು ಸಚಿವಾಲಯ

ಶೇ 40ರಷ್ಟು ನಗದು ವರ್ಗಾವಣೆ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಇತ್ತೀಚೆಗೆ ಉಳಿಸಿಕೊಳ್ಳಲಾಗಿದೆ. ಇದು ಉತ್ತೇಜಕ ಕ್ರಮಗಳ ಮಿತಿಗಳಡಿ ಇದೆ ಎಂಬ ಭಾವ ವ್ಯಕ್ತವಾಗುತ್ತಿದೆ ಎಂದು ಕೇಂದ್ರದ ಖರ್ಚು ವೆಚ್ಚಗಳ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಹೇಳಿದರು.

stimulus package
ಉತ್ತೇಜಕ ಪ್ಯಾಕೇಜ್​

By

Published : Aug 25, 2020, 7:49 PM IST

ನವದೆಹಲಿ: ಕೋವಿಡ್​-19 ಸೋಂಕು ಕ್ಷೀಣಿಸಿ ಜನರ ಮನಸ್ಸಿನಲ್ಲಿನ ಮಾನಸಿಕ ಆತಂಕಗಳು ಉಲ್ಬಣಗೊಂಡ ಬಳಿಕ ಹಣಕಾಸಿನ ಉತ್ತೇಜಕ ಕ್ರಮಗಳ ಎರಡನೇ ಪ್ಯಾಕೇಜ್​​ನತ್ತ ಸರ್ಕಾರ ಗಮನಹರಿಸಬಹುದು ಎಂದು ವಿತ್ತ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೇ 40ರಷ್ಟು ನಗದು ವರ್ಗಾವಣೆ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಇತ್ತೀಚೆಗೆ ಉಳಿಸಿಕೊಳ್ಳಲಾಗಿದೆ. ಇದು ಉತ್ತೇಜಕ ಕ್ರಮಗಳ ಮಿತಿಗಳಡಿ ಇದೆ ಎಂಬ ಭಾವ ವ್ಯಕ್ತವಾಗುತ್ತಿದೆ ಎಂದು ಕೇಂದ್ರದ ಖರ್ಚು ವೆಚ್ಚಗಳ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಹೇಳಿದರು.

ಸರ್ಕಾರದ ಮೊದಲ ಸುತ್ತಿನ ಹಣಕಾಸಿನ ಉತ್ತೇಜಕವನ್ನು ಮಾರ್ಚ್ ಅಂತ್ಯದಲ್ಲಿ ಘೋಷಿಸಲಾಯಿತು. ಜಿಡಿಪಿಯ ಸುಮಾರು 2 ಪ್ರತಿಶತದಷ್ಟು ಹೆಚ್ಚುವರಿ ಖರ್ಚು ಒಳಗೊಂಡಿದೆ. ಎಲ್ಲರನ್ನು ಅಚ್ಚರಿಗೊಳುವಂತೆ ಆರ್‌ಬಿಐ ಎರಡು ಬಾರಿ ದರ ಕಡಿತ ಘೋಷಿಸಿತು. ಕೆಲವು ವಿಶ್ಲೇಷಕರು ಸರ್ಕಾರವು ಈಗ ತಾನು ಭಾರವಾದ ಹೊಣೆ ಹೊರಬೇಕು ಎಂಬ ಅಭಿಪ್ರಾಯಪಟ್ಟಿದ್ದಾರೆ.

ಡನ್ ಮತ್ತು ಬ್ರಾಡ್‌ಸ್ಟ್ರೀಟ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮನಾಥನ್, ಸಾಮಾನ್ಯ ಆರ್ಥಿಕ ಚಟುವಟಿಕೆಗಳು ಇದೀಗ 'ಅಡೆತಡೆ'ಯಲ್ಲಿವೆ (ಅಬಿಯೆನ್ಸ್). ಸರ್ಕಾರವು ಏನು ಮಾಡಿದೆ ಅಥವಾ ಮಾಡಿಲ್ಲ ಎಂಬುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಜನರಲ್ಲಿ ಹಲವು ಆತಂಕಗಳಿವೆ ಎಂದರು.

ಸರ್ಕಾರ ಏನಾದರೂ ಮಾಡುತ್ತದೆ ಎಂದು ಜನರು ಕಾಯುತ್ತಿದ್ದಾರೆ. ಈ ಬಳಿಕ ಅವರು ಹೊರಗೆ ಹೋಗಿ ಸಾಮಾನ್ಯ ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.

ದೇಶದ ಹಲವು ಭಾಗಗಳಲ್ಲಿ ಆರೋಗ್ಯ ಪರಿಸ್ಥಿತಿ ತುಂಬಾ ದುರ್ಬಲವಾಗಿದೆ. ಸಿನಿಮಾ ಮಂದಿರ, ಮಾಲ್‌ಗಳು ಮತ್ತು ರೆಸ್ಟೋರೆಂಟ್‌ ಸೇರಿದಂತೆ ಎಲ್ಲಾ ಸೇವಾ ಚಟುವಟಿಕೆಗಳು ಮೇಲೆ ತೀವ್ರ ಪರಿಣಾಮ ಬೀರಿದೆ ಎಂದರು.

ABOUT THE AUTHOR

...view details