ನವದೆಹಲಿ:ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಚಾಲನಾ ಪರವಾನಗಿ (ಡಿಎಲ್), ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಮೋಟಾರು ವಾಹನ ದಾಖಲೆಗಳ ಮಾನ್ಯತೆಯನ್ನು 2021ರ ಜೂನ್ 30ರವರೆಗೆ ಸರ್ಕಾರ ವಿಸ್ತರಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (ಮೊಆರ್‌ಟಿಎಚ್) ಫಿಟ್‌ನೆಸ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ನೋಂದಣಿ ಮತ್ತು ಇತರ ದಾಖಲೆಗಳ ಸಿಂಧುತ್ವ ಅವಧಿಯನ್ನು ವಿಸ್ತರಿಸುತ್ತಿದೆ ಎಂದು ಹೇಳಿದೆ. 2020ರ ಫೆಬ್ರವರಿ 1 ಅಥವಾ 2021ರ ಮಾರ್ಚ್ 31ರೊಳಗೆ ಮುಕ್ತಾಯಗೊಳ್ಳುವ ದಾಖಲೆಗಳಿಗೆ ಇದು ಅನ್ವಯಿಸಲಿದೆ.
ಇದನ್ನೂ ಓದಿ: 1,036 ರೂ. ಜಿಗಿದ ಬೆಳ್ಳಿ: ಬಂಗಾರದ ಬೆಲೆ ಇಳಿಕೆ
ರಾಜ್ಯಗಳಿಗೆ ನೀಡಿದ ಸಲಹೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಫಿಟ್‌ನೆಸ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ನೋಂದಣಿ ಮತ್ತು ಇತರ ದಾಖಲೆಗಳ ಸಿಂಧುತ್ವವನ್ನು ವಿಸ್ತರಿಸುತ್ತಿದೆ. ಲಾಕ್‌ಡೌನ್ ಕಾರಣದಿಂದಾಗಿ ಮಾನ್ಯತೆ ವಿಸ್ತರಿಸಲು ಸಾಧ್ಯವಿಲ್ಲ ಎಂದಿದೆ.
ಫೆಬ್ರವರಿ 1ರಿಂದ ಅವಧಿ ಮೀರಿದ ದಾಖಲೆಗಳ ಸಿಂಧುತ್ವವನ್ನು 2021ರ ಜೂನ್ 30 ರವರೆಗೆ ಮಾನ್ಯ ಎಂದು ಪರಿಗಣಿಸಬಹುದು ಎಂದು ಸಚಿವಾಲಯ ರಾಜ್ಯಗಳಿಗೆ ನೀಡಿದ ಸಲಹೆಯಲ್ಲಿ ತಿಳಿಸಿದೆ. ಅಂತಹ ದಾಖಲೆಗಳನ್ನು 2021ರ ಜೂನ್ 30 ರವರೆಗೆ ಮಾನ್ಯವಾಗಿ ಪರಿಗಣಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದು ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು ನಾಗರಿಕರಿಗೆ ಸಹಾಯ ಮಾಡುತ್ತದೆ ಎಂದಿದೆ.
ಈ ಮೊದಲು ವಿವಿಧ ಅಧಿಸೂಚನೆಗಳ ಮೂಲಕ ಫಿಟ್‌ನೆಸ್, ಪರ್ಮಿಟ್ (ಎಲ್ಲಾ ಪ್ರಕಾರ), ಪರವಾನಗಿ, ನೋಂದಣಿ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳ ಮಾನ್ಯತೆಯನ್ನು 2021ರ ಮಾರ್ಚ್ 31ರ ರವರೆಗೆ ಮಾನ್ಯ ಎಂದು ಪರಿಗಣಿಸಬಹುದು ಎಂದು ಸೂಚಿಸಲಾಗಿತ್ತು. ಇದನ್ನು ಜೂನ್ 30ರ ತನಕ ವಿಸ್ತರಿಸಿದೆ.