ನವದೆಹಲಿ:ಕೇಂದ್ರ ಸರ್ಕಾರವು ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಿಸಿದ್ದು, ಈ ವೇಳೆಯಲ್ಲಿ ಆರೋಗ್ಯ ಹಾಗೂ ವಾಹನ ವಿಮಾ ಪಾವತಿ ಕಂತಿಗೆ ವಿನಾಯ್ತಿ ನೀಡಿರುವುದಾಗಿ ಹೇಳಿದೆ.
ವಾಹನ, ಆರೋಗ್ಯ ವಿಮೆ ಕಂತು ಪಾವತಿ ಮೇ 15ರ ತನಕ ವಿನಾಯ್ತಿ - ವಾಣಿಜ್ಯ ಸುದ್ದಿ
ದಿಗ್ಬಂಧನ ಅವಧಿಯಲ್ಲಿ ಇಎಂಐ ಸೇರಿದಂತೆ ಇತರ ಸಾಲದ ಸೇವೆಗಳಿಗೆ ರಿಯಾಯಿತಿ ಕೊಟ್ಟ ಕೇಂದ್ರ, ಈಗ ವಿಮೆಗೂ ವಿನಾಯ್ತಿ ನೀಡಿದೆ. ಮಾರ್ಚ್ 25ರಿಂದ ಮೇ 3ರ ನಡುವೆ ಕಂತು ಪಾವತಿಸಬೇಕಿದ್ದ ಪಾಲಿಸಿಗೆ ಅನ್ವಯವಾಗುತ್ತದೆ.
ದಿಗ್ಬಂಧನ ಅವಧಿಯಲ್ಲಿ ಇಎಂಐ ಸೇರಿದಂತೆ ಇತರ ಸಾಲದ ಸೇವೆಗಳಿಗೆ ರಿಯಾಯಿತಿ ಕೊಟ್ಟ ಕೇಂದ್ರ, ಈಗ ವಿಮೆಗೂ ವಿನಾಯ್ತಿ ನೀಡಿದೆ. ಮಾರ್ಚ್ 25ರಿಂದ ಮೇ 3ರ ನಡುವೆ ಕಂತು ಪಾವತಿಸಬೇಕಿದ್ದ ಪಾಲಿಸಿಗೆ ಅನ್ವಯವಾಗುತ್ತದೆ. ಕಂತು ವಿನಾಯ್ತಿ ಅವಧಿಯಲ್ಲಿ ವಿಮಾ ಕಂಪನಿಗಳು ಕ್ಲೇಮ್‌ಗಳ ಪ್ರಕ್ರಿಯೆಯನ್ನು ಎಂದಿನಂತೆ ನಡೆಸಬೇಕು ಎಂದು ಅಧಿಸೂಚನೆ ಮೂಲಕ ತಿಳಿಸಿದೆ.
ಆರೋಗ್ಯ ಮತ್ತು ಮೋಟಾರು (ಥರ್ಡ್ ಪಾರ್ಟಿ) ವಿಮಾ ಪಾಲಿಸಿಗಳು ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಕಂತು ಕ್ಲೇಮ್ಗಳಿಂದ ಪಾಲಿಸಿದಾರರಿಗೆ ಉಂಟಾಗಲಿರುವ ತೊಂದರೆಗಳನ್ನು ತಗ್ಗಿಸುವ ಉದ್ದೇಶದಿಂದ ಸರ್ಕಾರವು ಪಾಲಿಸಿಗಳ ನವೀಕರಣದ ಅವಧಿಯನ್ನು 2020ರ ಮೇ 15ರ ವರೆಗೆ ಅವಕಾಶ ನೀಡುವ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.