ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ಖರೀದಿಗಾಗಿ ಎಕ್ಸ್‌ಪ್ರೆಷನ್ಸ್ ಆಫ್ ಇಂಟರೆಸ್ಟ್(ಇಒಐ) ಸಲ್ಲಿಸುವ ಅವಧಿಯನ್ನು ನವೆಂಬರ್ 16ಕ್ಕೆ ಮುಂದೂಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಹೀಗೆ ಮುಂದೂಡಿಕೆ ಮಾಡಿರುವುದು ಇದು 4ನೇ ಬಾರಿ. ಈ ಮೊದಲು ಮೇ 2 ರಂದು ಬಿಡ್‌ಗೆ ಆಹ್ವಾನ ನೀಡಿತ್ತು. ಬಳಿಕ ಜೂನ್ 13, ಆ ನಂತರ ಜುಲೈ 31 ಹಾಗೂ ಸೆಪ್ಟೆಂಬರ್ 30ಕ್ಕೆ ಮುಂದೂಡತ್ತಲೇ ಬಂದಿತ್ತು. ಇದೀಗ ನಾಲ್ಕನೇ ಬಾರಿ ಕೂಡ ಬಿಡ್ ಅನ್ನು ಮುಂದೂಡಿದೆ.
ಈ ಸಂಬಂಧ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಬಿಡ್ ಕೂಗುವವರ ಮನವಿ ಹಾಗೂ ಕೋವಿಡ್-19 ನಿಂದಾಗಿ ಬಿಡ್ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಿದೆ.