ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ (ಸಿಪಿಎಸ್ಇ) ಬಂಡವಾಳ ವೆಚ್ಚದ ಪರಿಶೀಲನೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, 'ಮಾರಾಟಗಾರರ ಮತ್ತು ಗುತ್ತಿಗೆದಾರರ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪಾವತಿಸಲು ಕೇಂದ್ರೋದ್ಯಮಗಳಿಗೆ (ಸಿಪಿಎಸ್ಇ) ಸೂಚಿಸಿದರು.
ಗುತ್ತಿಗೆದಾರರ, ಮಾರಾಟಗಾರರ ಬಾಕಿ ಹಣ ನೀಡಿ: ಪಾವತಿಕೇಂದ್ರೋದ್ಯಮಕ್ಕೆ ವಿತ್ತ ಸಚಿವೆ ಸೂಚನೆ - ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ
ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ (ಸಿಪಿಎಸ್ಇ) ಬಂಡವಾಳ ವೆಚ್ಚದ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನಗದು ಬಿಕ್ಕಟ್ಟು ಬಗೆಹರಿಸಲು ಬಾಕಿ ಪಾವತಿಸುವಂತೆ ವಿವಿಧ ವಲಯಗಳ ಮುಖ್ಯಸ್ಥರಿಗೆ ಅಕ್ಟೋಬರ್15ರ ಒಳಗೆ ಬಾಕಿ ಹಣ ಪಾವತಿಸಬೇಕು ಎಂದು ಕೇಂದ್ರೋದ್ಯಮಗಳಿಗೆ (ಸಿಪಿಎಸ್ಇ) ಸೂಚಿಸಿದರು.
ನಗದು ಬಿಕ್ಕಟ್ಟು ಬಗೆಹರಿಸಲು ಬಾಕಿ ಪಾವತಿಸುವಂತೆ ವಿವಿಧ ವಲಯಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಅಕ್ಟೋಬರ್ 15ರ ಒಳಗೆ ಬಾಕಿ ಹಣ ಪಾವತಿಸಬೇಕು. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು 6 ವರ್ಷಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಕುಸಿದಿದೆ. ಹೀಗಾಗಿ, ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮ್ ಅವರು ತಿಳಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹೂಡಿಕೆ ಹೆಚ್ಚಿಸುವಂತೆಯೂ ಕಂಪನಿಗಳಿಗೆ ಸೂಚನೆ ನೀಡಲಾಗುವುದು. ಮುಂದಿನ ನಾಲ್ಕು ತ್ರೈಮಾಸಿಗಳಿಗೆ ಮಾಡಲಿರುವ ವೆಚ್ಚದ ವಿವರ ನೀಡುವಂತೆಯೂ ಕೇಳಲಾಗಿದೆ. ಹೂಡಿಕೆ ಚಟುವಟಿಕೆ ಸಕ್ರಿಯವಾಗಿರುವಂತೆ ಮಾಡಲು ಎಂಎಸ್ಎಂಇ, ಮಾರಾಟಗಾರರು, ಗುತ್ತಿಗೆದಾರರಿಗೆ ನೀಡಬೇಕಿರುವ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವಂತೆ ತಿಳಿಸಿಲಾಗಿದೆ ಎಂದು ಅವರು ಮಾಹಿತಿ ನೀಡಿದರು.