ಕರ್ನಾಟಕ

karnataka

ETV Bharat / business

ಸರ್ಕಾರಿ ಸ್ವಾಮ್ಯದ 3 ವಿಮಾ ಕಂಪನಿಗಳಿಗೆ ₹12,450 ಕೋಟಿ ಬಂಡವಾಳ ನೀಡಲು ಕ್ಯಾಬಿನೆಟ್ ಅಸ್ತು - ಕ್ಯಾಬಿನೆಟ್ ಸಭೆ

ಓರಿಯೆಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (2019-20ರ ಹಣಕಾಸು ವರ್ಷದಲ್ಲಿ 2,500 ಕೋಟಿ ರೂ. ಸೇರಿ) ಸಾರ್ವಜನಿಕ ವಲಯದ ಮೂರು ವಿಮಾ ಕಂಪನಿಗಳಿಗೆ 12,450 ಕೋಟಿ ರೂ. ಬಂಡವಾಳ ಹೂಡಿಕೆಯಡಿ ನೀಡಲಾಗುತ್ತಿದೆ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

capital infusion
ಬಂಡವಾಳ ಹೂಡಿಕೆ

By

Published : Jul 8, 2020, 5:15 PM IST

ನವದೆಹಲಿ :ಸರ್ಕಾರಿ ಸ್ವಾಮ್ಯದ ಮೂರು ವಿಮಾ ಕಂಪನಿಗಳಲ್ಲಿ ₹12,450 ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ.

ನ್ಯಾಷನಲ್​ ವಿಮಾ ಕಂಪನಿ, ಓರಿಯಂಟಲ್ ವಿಮಾ ಕಂಪನಿ ಮತ್ತು ಯುನೈಟೆಡ್ ಇನ್ಶುರೆನ್ಸ್ ಕಂಪನಿಗಳು ಕೇಂದ್ರದಿಂದ ಹೆಚ್ಚುವರಿ ಬಂಡವಾಳ ಪಡೆಯಲಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಓರಿಯೆಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (2019-20ರ ಹಣಕಾಸು ವರ್ಷದಲ್ಲಿ 2,500 ಕೋಟಿ ರೂ. ಸೇರಿ) ಸಾರ್ವಜನಿಕ ವಲಯದ ಮೂರು ವಿಮಾ ಕಂಪನಿಗಳಿಗೆ ₹12,450 ಕೋಟಿ ಬಂಡವಾಳ ಹೂಡಿಕೆಯಡಿ ನೀಡಲಾಗುತ್ತಿದೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಮರು ಬಂಡವಾಳೀಕರಣವು ಮೂರು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳನ್ನು ಹೆಚ್ಚು ಸ್ಥಿರಗೊಳಿಸುತ್ತದೆ ಎಂದು ಸಚಿವರು ಹೇಳಿದರು.

ABOUT THE AUTHOR

...view details