ಕರ್ನಾಟಕ

karnataka

By

Published : Apr 9, 2020, 6:00 PM IST

ETV Bharat / business

ಕೊರೊನಾ ಸೋಂಕಿತರ ಚಿಕಿತ್ಸೆ: ಎಲ್ಲ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ. ವಿಮೆ

ಕೊರೊನಾ ವೈರಸ್‌ನಿಂದಾಗಿ ಅಥವಾ ಸೋಂಕಿತರ ಚಿಕಿತ್ಸೆ ವೇಳೆ ಆರೋಗ್ಯ ಕಾರ್ಯಕರ್ತರ ಪ್ರಾಣಕ್ಕೆ ಎರವಾದರೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ವಿಮಾ ಯೋಜನೆಯ ವ್ಯಾಪ್ತಿ ಅಡಿ 50 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುವುದು. ಈ ಯೋಜನೆಯಡಿ 22.12 ಲಕ್ಷ ಸಾರ್ವಜನಿಕ ಆರೋಗ್ಯ ಸೇವೆ ಒದಗಿಸುವವರು ಮತ್ತು ಸಮುದಾಯ ಆರೋಗ್ಯ ಕಾರ್ಯಕರ್ತರು ಬರುತ್ತಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Coronavirus
ಕೊರೊನಾ

ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ಜೀವ ವಿಮಾ ರಕ್ಷಣೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಕೊರೊನಾ ವೈರಸ್‌ನಿಂದಾಗಿ ಅಥವಾ ಸೋಂಕಿತರ ಚಿಕಿತ್ಸೆ ವೇಳೆ ಆರೋಗ್ಯ ಕಾರ್ಯಕರ್ತರ ಪ್ರಾಣಕ್ಕೆ ಎರವಾದರೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ವಿಮಾ ಯೋಜನೆಯ ವ್ಯಾಪ್ತಿ ಅಡಿ 50 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಯೋಜನೆಯಡಿ 22.12 ಲಕ್ಷ ಸಾರ್ವಜನಿಕ ಆರೋಗ್ಯ ಸೇವೆ ಒದಗಿಸುವವರು ಮತ್ತು ಸಮುದಾಯ ಆರೋಗ್ಯ ಕಾರ್ಯಕರ್ತರು ಬರುತ್ತಾರೆ.

ವಿಮಾ ರಕ್ಷಣೆಯು ಖಾಸಗಿ ಆಸ್ಪತ್ರೆ ಸಿಬ್ಬಂದಿ, ನಿವೃತ್ತ ಸಿಬ್ಬಂದಿ, ಸ್ವಯಂ ಸೇವಕರು, ಗುತ್ತಿಗೆ ಕಾರ್ಮಿಕರು, ದೈನಂದಿನ ಆರೋಗ್ಯ ಸೇವೆಯ ಕಾರ್ಯನಿರತರು ಹಾಗೂ ಕೇಂದ್ರ/ ರಾಜ್ಯ ಸರ್ಕಾರಗಳು ಮತ್ತು ಸ್ವಾಯತ್ತ ಆರೋಗ್ಯ ಸಂಸ್ಥೆಗಳು ನೇಮಕ ಮಾಡಿಕೊಂಡ ಹೊರಗುತ್ತಿಗೆ ಸಿಬ್ಬಂದಿಗೂ ಅನ್ವಯಿಸಲಿದೆ ಎಂದು ತಿಳಿಸಿದೆ

ಈ ವಿಮಾ ಯೋಜನೆಯು ಕೋವಿಡ್​ 19 ಸೋಂಕಿನಿಂದ ಉಂಟಾದ ಪ್ರಾಣಹಾನಿ ಮತ್ತು ಈ ಸಂಬಂಧ ಕರ್ತವ್ಯದ ಕಾರಣದಿಂದ ಆಕಸ್ಮಿಕ ಸಾವು ಸಂಭವವಿದ್ದರೂ ವಿಮೆ ಪರಿಹಾರ ಮೊತ್ತ ಸಿಗಲಿದೆ ಎಂದಿದೆ.

ಸಮುದಾಯ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಒಟ್ಟು 22.12 ಲಕ್ಷ ಸಾರ್ವಜನಿಕ ಆರೋಗ್ಯ ಸೇವೆ ಸಲ್ಲಿಸುವವರಿಗೆ 50 ಲಕ್ಷ ರೂ. ವಿಮೆ ಪರಿಹಾರ ಲಭ್ಯವಾಗಲಿದೆ. ಮಾರ್ಚ್​ 30ರಿಂದ ಆರಂಭವಾದ ಪಾಲಿಸಿಯ ಅವಧಿಯು ಮುಂದಿನ 90 ದಿನಗಳವರೆಗೆ ಇರಲಿದೆ. ಈ ಯೋಜನೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ವೈಯಕ್ತಿಕ ದಾಖಲಾತಿ ಅಗತ್ಯವಿಲ್ಲ. ಸಂಪೂರ್ಣ ಪ್ರೀಮಿಯಂ ಅನ್ನು ಆರೋಗ್ಯ ಸಚಿವಾಲಯ ಭರಿಸುತ್ತಿದೆ. ಇದಕ್ಕಾಗಿ ಆರೋಗ್ಯ ಸಚಿವಾಲಯ ನಿರ್ವಹಿಸುವ ಎನ್‌ಡಿಆರ್‌ಎಫ್ ಮೂಲಕ ಹಣ ನೀಡಲಿದೆ ಎಂದು ವಿವರಿಸಿದೆ.

ABOUT THE AUTHOR

...view details