ನವದೆಹಲಿ: ಸರ್ಕಾರಿ ಆಡಳಿತ ಯಂತ್ರದ ಇಲಾಖೆಗಳು ಮತ್ತು ನ್ಯಾಯಾಂಗದ ವಿಡಿಯೋ ಕಾನ್ಫರೆನ್ಸ್ಗಳಿಗೆ ವಿದೇಶಗಳಲ್ಲಿ ಅಭಿವೃದ್ಧಿಪಡಿಸಲಾದ ಸಾಫ್ಟವೇರ್ ಹಾಗೂ ಅಪ್ಲಿಕೇಷನ್ಗಳನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಆರ್ಎಸ್ಎಸ್ನ ಮಾಜಿ ಪ್ರಚಾರಕ ಕೆ.ಎನ್. ಗೋವಿಂದಾಚಾರ್ಯ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಪ್ರಯುಕ್ತ ಮಾರ್ಚ್ 25 ರಂದು ದೇಶದಲ್ಲಿ ಮೊದಲ ಹಂತದ ಲಾಕ್‌ಡೌನ್ ಆರಂಭವಾದ ಬಳಿಕ ಬಹುತೇಕ ನ್ಯಾಯಾಲಯಗಳು ಹಾಗೂ ಸರ್ಕಾರಿ ಇಲಾಖೆಗಳು ಮನೆಯಿಂದಲೇ ವರ್ಕ್ ಫ್ರಮ್ ಹೋಂ ನಿರ್ವಹಿಸುತ್ತಿವೆ.