ಕರ್ನಾಟಕ

karnataka

ETV Bharat / business

ಸ್ವಂತ ಮನೆ ಖರೀದಿ ಈಗ ಇನ್ನಷ್ಟು ಸರಳ... ಆನ್​ಲೈನ್​ನಲ್ಲಿ ಸರ್ಕಾರಿ ಮನೆ ಬುಕ್ಕಿಂಗ್ - ವಾಣಿಜ್ಯ ಸುದ್ದಿ

ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರ ಅವರು ಇ- ಕಾಮರ್ಸ್​ ಹೌಸಿಂಗ್​ ಪೋರ್ಟಲ್​ ಹೌಸಿಂಗ್​ಫಾರ್​​.ಕಾಮ್​ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, 'ಹೌಸಿಂಗ್​ಫಾರ್​ಆಲ್.ಕಾಮ್​ ಪೋರ್ಟಲ್ ಚಾಲನೆಯಿಂದ ಪ್ರಮಾಣಿಕ ಮತ್ತು ಪಾರದರ್ಶಕತೆ ಕಂಡು ಬರಲಿದೆ. ಗ್ರಾಹಕರ ಕುಂದುಕೊರತೆಗಳಿಗೆ ಪರಿಹಾರ ನೀಡುವ ವ್ಯವಸ್ಥೆಯೂ ಇರಬೇಕು. ರಿಯಾಲ್ಟರ್‌ಗಳ ಬಾಡಿಯ ಕ್ರೆಡೈ ಕೂಡ ಇದೇ ರೀತಿಯ ಪೋರ್ಟಲ್ ಆರಂಭಿಸಲಿದೆ ಎಂದರು.

housing
ಹೌಸಿಂಗ್

By

Published : Jan 14, 2020, 9:09 PM IST

ನವದೆಹಲಿ: ರಾಷ್ಟ್ರೀಯ ರಿಯಲ್​ ಎಸ್ಟೇಟ್​ ಅಭಿವೃದ್ಧಿ ಮಂಡಳಿ (ಎನ್​​ಎಆರ್​ಇಡಿಸಿಒ) ಮಂಗಳವಾರ ಇ ಕಾಮರ್ಸ್​ ಹೌಸಿಂಗ್​ ಪೋರ್ಟಲ್​ 'ಹೌಸಿಂಗ್​ಫಾರ್​ಆಲ್​​.ಕಾಮ್​ಗೆ' (HousingForAll.Com) ಚಾಲನೆ ನೀಡಲಾಯಿತು.

ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರ ಅವರು ಈ ಪೋರ್ಟಲ್​ಗೆ ಚಾಲನೆ ನೀಡಿದರು. 'ಹೌಸಿಂಗ್​ಫಾರ್​ಆಲ್.ಕಾಮ್​ ಪೋರ್ಟಲ್ ಚಾಲನೆಯಿಂದ ಪ್ರಮಾಣಿಕ ಮತ್ತು ಪಾರದರ್ಶಕತೆ ಕಂಡು ಬರಲಿದೆ. ಗ್ರಾಹಕರ ಕುಂದುಕೊರತೆಗಳಿಗೆ ಪರಿಹಾರ ನೀಡುವ ವ್ಯವಸ್ಥೆಯೂ ಇರಬೇಕು. ರಿಯಾಲ್ಟರ್‌ಗಳ ಬಾಡಿಯ ಕ್ರೆಡೈ ಕೂಡ ಇದೇ ರೀತಿಯ ಪೋರ್ಟಲ್ ಆರಂಭಿಸಲಿದೆ ಎಂದರು.

ಫೆಬ್ರವರಿ 14ರಿಂದ 45 ದಿನಗಳ ಮಾರಾಟದ ಅವಧಿಯೊಂದಿಗೆ ಮನೆ ಖರೀದಿದಾರರಿಗೆ ಈ ಪೋರ್ಟಲ್ ತೆರೆದಿರುತ್ತದೆ. ಇ-ಕಾಮರ್ಸ್ ಹೌಸಿಂಗ್ ಪೋರ್ಟಲ್ ಆರಂಭವಾಗಲಿದ್ದು, 45 ದಿನಗಳ 'ಅಖಿಲ ಭಾರತ ಆನ್‌ಲೈನ್ ಮನೆ ಖರೀದಿ ಉತ್ಸವ' ಕೂಡ ಸಿದ್ಧವಾಗಲಿದೆ. 1,000ಕ್ಕೂ ಹೆಚ್ಚು ಯೋಜನೆಗಳನ್ನು ಪಟ್ಟಿ ಮಾಡುವ ನಿರೀಕ್ಷೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರ ಅವರು ಇ- ಕಾಮರ್ಸ್​ ಹೌಸಿಂಗ್​ ಪೋರ್ಟಲ್​ ಹೌಸಿಂಗ್​ಫಾರ್​​.ಕಾಮ್​ಗೆ ಚಾಲನೆ ನೀಡಿದರು

ಡೆವಲಪರ್‌ಗಳು ತಮ್ಮ ಯೋಜನೆಗಳನ್ನು ನೋಂದಾಯಿಸಲು ಪೋರ್ಟಲ್ ಜನವರಿ 14ರಿಂದ ಫೆಬ್ರವರಿ 13ರವರೆಗೆ ಅಂದರೆ, ಒಂದು ತಿಂಗಳವರೆಗೆ ತೆರೆದಿರಲಿದೆ. ಮಾರ್ಚ್‌ನಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ಬಳಿಕ ಖರೀದಿಸಲು ಸಾಧ್ಯವಾಗುತ್ತದೆ. ಆಕ್ಯುಪೆನ್ಸಿ ಸರ್ಟಿಫಿಕೇಟ್​​ಯೊಂದಿಗಿನ (ಒಸಿ) ಸೈಟ್‌ಗಳು ಖರೀದಿಗೆ ಲಭ್ಯವಿರುತ್ತವೆ. ಖರೀದಿದಾರರು ನೆಲದ ಯೋಜನೆ, ಕೋಣೆಯ ಆಯಾಮ, ಘಟಕಗಳ ವೀಡಿಯೊ ಮತ್ತು ಬಾಹ್ಯ ಮಾಹಿತಿಯನ್ನು ವೀಕ್ಷಿಸಲು ಸಾಧ್ಯವಾಗಲಿದೆ.

ಪೋರ್ಟಲ್​​ನಲ್ಲಿ ಕೇವಲ 25 ಸಾವಿರ ರೂ. ಪಾವತಿಯೊಂದಿಗೆ ಒಂದು ಘಟಕ ಕಾಯ್ದಿರಿಸಬಹುದು. ಬುಕ್ಕಿಂಗ್​ ಕ್ಯಾನ್ಸಲ್​ ಮಾಡಿದರೆ 'ಮನಿ-ಬ್ಯಾಕ್ ಗ್ಯಾರಂಟಿ' ಸಹ ದೊರೆಯಲಿದೆ.

ABOUT THE AUTHOR

...view details