ಸ್ಯಾನ್ ಫ್ರಾನ್ಸಿಸ್ಕೋ:ಗೂಗಲ್ ತನ್ನ ಬೆಳೆಯುತ್ತಿರುವ ಗೇಮಿಂಗ್ ವಿಭಾಗಕ್ಕೆ ಹೊಸ 'ಕೇಜ್ & ವೈಲ್ಡ್ ಮಾಸ್ಕ್' ಸೇರಿಸುವ ಮೂಲಕ ಸ್ಟೇಡಿಯಾ ಗೇಮಿಂಗ್ ಲೈಬ್ರರಿ ವ್ಯಾಪ್ತಿ ವಿಸ್ತರಿಸಿದೆ.
ಪಿಎಸ್ 4, ಎಕ್ಸ್ಬಾಕ್ಸ್ ಒನ್, ನಿಂಟೆಂಡೊ ಸ್ವಿಚ್ ಮತ್ತು ಪಿಸಿಯಲ್ಲಿ ಗೇಮಿಂಗ್ ಬಿಡುಗಡೆಯಾಗಿದೆ. ಪಿಕ್ಸೆಲ್‌ಹೈವ್ ಅಭಿವೃದ್ಧಿಪಡಿಸಿರುವ 'ಕೇಜ್ & ವೈಲ್ಡ್ ಮಾಸ್ಕ್' ಸ್ಟೇಡಿಯಾ ಮೇಕರ್ಸ್ ಶೀರ್ಷಿಕೆಯ ಮೊದಲ ಬ್ಯಾಚ್‌ನ ಭಾಗವಾಗಿದೆ. ಸ್ಟೇಡಿಯಾ ಆವೃತ್ತಿ ಒದಗಿಸುವ ಬದಲು ನೇರವಾಗಿ ತಾಂತ್ರಿಕ ನೆರವು, ಡೆವಲಪ್ಮೆಂಟ್ ಹಾರ್ಡ್ವೇರ್ ಮತ್ತು ಗೂಗಲ್‌ನಿಂದ ಧನಸಹಾಯ ಪಡೆದು ಅಭಿವೃದ್ಧಿಪಡಿಸಲಾಗಿದೆ ಎಂದು 9ಟೂ5ಗೂಗಲ್ ವರದಿ ಮಾಡಿದೆ.
ಇದನ್ನೂ ಓದಿ: ತೀರಾ ಅಹಿತಕರ ಮಟ್ಟ ತಲುಪಿದ ಹಣದುಬ್ಬರ: RBIನ ದರ ಕಡಿತಕ್ಕೆ ತಡೆಗೋಡೆ- ಮೂಡಿಸ್ ವಿಶ್ಲೇಷಣೆ
'ಕೇಜ್ & ವೈಲ್ಡ್ ಮಾಸ್ಕ್' ಕಲರ್ಫುಲ್ 16-ಬಿಟ್ ದೃಶ್ಯದ ಸ್ಫೂರ್ತಿ ಪಡೆದುಕೊಳ್ಳಲಾಗಿದೆ. ಅದನ್ನು ಮತ್ತಷ್ಟು ಆಧುನೀಕರಿಸಿ, ಕೈಯಿಂದ ಎಳೆಯುವ ಪಿಕ್ಸೆಲ್-ಆರ್ಟ್ ಗ್ರಾಫಿಕ್ಸ್‌ನೊಂದಿಗೆ ವೈಯಕ್ತಿಕರಿಸಲಾಗಿದೆ. ಈ ಆಟವು ಸರಳ ಮತ್ತು ಸುಲಭವಾಗಿ ಅರ್ಥವಾಗುವ ಯಾಂತ್ರಿಕ ಭಾಷೆ, ಕಠಿಣ ಸವಾಲು, ಐಕಾನಿಕ್ ಬಾಸ್, ಸುಗಮ ಪ್ಲಾಟ್‌ಫಾರ್ಮಿಂಗ್ ಮತ್ತು ವೇಗವನ್ನು ಒಳಗೊಂಡಿದೆ.
ಕೇಜ್ & ವೈಲ್ಡ್ ಮಾಸ್ಕ್ ಗೇಮ್
ಗೂಗಲ್ ತನ್ನ ಗೇಮಿಂಗ್ ಅನುಯಾಯಿಗಳಿಗೆ 100ಕ್ಕೂ ಹೆಚ್ಚು ಗೇಮ್ಗಳನ್ನು ಸ್ಟೇಡಿಯಾ ಸ್ಟೋರ್ನಲ್ಲಿ 2021ರಲ್ಲಿ ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ದೃಢಪಡಿಸಿತು. ಮುಂಬರುವ ವಾರ ಅಥವಾ ಮತ್ತು ತಿಂಗಳಲ್ಲಿ ಸ್ಟೇಡಿಯಾ ಸ್ಟೋರ್ಗೆ ಬರಲಿರುವ ಗೇಮ್ಗಳ ಬಗ್ಗೆ ಗೂಗಲ್ ಬಹಿರಂಗಪಡಿಸಲಿದೆ.