ಮುಂಬೈ: ಅತಿದೊಡ್ಡ ಇಂಧನ ಉತ್ಪಾದಕ ರಾಷ್ಟ್ರಗಳಾದ ಇರಾನ್ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟಿನಿಂದ ಭಾರತೀಯ ಸ್ಥಳೀಯ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.
ಅಮೆರಿಕ ಸೇನೆ ಡ್ರೋನ್ ಇರಾನ್ ಮೇಲೆ ದಾಳಿ ನಡೆಸಿ ಇರಾನಿನ ಉನ್ನತ ಸೇನಾಧಿಕಾರಿ ಜನರಲ್ ಕಸ್ಸೆಮ್ ಸುಲೈಮಾನಿ ಮತ್ತು ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಅಬು ಮಹ್ದಿ ಅಲ್ ಮುಹಂಡೇಸ್ ಅವರನ್ನು ಹತ್ಯೆಮಾಡಿತು. ಮಧ್ಯಪ್ರಾಚ್ಯದಲ್ಲಿನ ಈ ಬಿಕ್ಕಟ್ಟು ಜಾಗತಿಕ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದಕ್ಕೆ ಭಾರತ ಸಹ ಹೊರತಾಗಿಲ್ಲ.
ಮುಂಬೈ ಷೇರು ಮಾರುಕಟ್ಟೆಯು ಶುಕ್ರವಾರದ ವಹಿವಾಟಿನಲ್ಲಿ ಕುಸಿದಿದ್ದು, ಚಿಲ್ಲರೆ ಪೇಟೆಯಲ್ಲಿ ಚಿನ್ನ, ಬಂಗಾರ ಮತ್ತು ಇಂಧನದ ದರದಲ್ಲಿ ಏರಿಕೆಯಾಗಿದೆ. ಡಾಲರ್ ವಿರುದ್ಧ ಭಾರತೀಯ ರೂಪಾಯಿ 34 ಪೈಸೆಯಷ್ಟು ಕುಸಿದು ₹ 71.71ರಲ್ಲಿ ವಹಿವಾಟು ನಡೆಸಿತು.
ಬೆಂಚ್ ಮಾರ್ಕ್ ಸೆನ್ಸೆಕ್ಸ್ ಇಂದಿನ ವಹಿವಾಟಿನಂದು ಗರಿಷ್ಠ 230 ಅಂಶಗಳಷ್ಟು ಕುಸಿತ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಶೇ 4ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ 70 ಡಾಲರ್ನಲ್ಲಿ ಮಾರಾಟ ಆಗುತ್ತಿದೆ. ಇದರ ಜೊತೆಗೆ ಎನ್ವೈಎಂಎಕ್ಸ್ ಕಚ್ಚ ತೈಲ ಸಹ ಶೇ 4ರಷ್ಟು ಹೆಚ್ಚಳವಾಗಿ 63.84 ಬ್ಯಾರಲ್ನಲ್ಲಿ ವಹಿವಾಟು ನಿರತವಾಗಿದ್ದು, 2019ರ ಮೇ ಬಳಿಕ ಗರಿಷ್ಠ ದರ ಏರಿಕೆಯಾಗಿದೆ.
ಎಂಸಿಎಕ್ಸ್ ಚಿನ್ನದ ದರದಲ್ಲಿ ಶೇ 2ರಷ್ಟು ಏರಿಕೆಯಾಗಿದ್ದು, ಪ್ರತಿ 10 ಗ್ರಾಂ. ಚಿನ್ನ 39,993ರಲ್ಲಿ ಮಾರಾಟ ಆಗುತ್ತಿದೆ. ಬೆಳ್ಳಿಯ ಧಾರಣಿಯಲ್ಲಿ ಶೇ 1ರಷ್ಟು ಹೆಚ್ಚಳವಾಗಿದೆ.