ಕರ್ನಾಟಕ

karnataka

ETV Bharat / business

ಕೆಟ್ಟ ಸಾಲದಿಂದ ಬ್ಯಾಂಕ್​ಗಳಿಗೆ ಅಲ್ಪ ಮುಕ್ತಿ: ತುಸು ನಿಟ್ಟುಸಿರು ಬಿಟ್ಟ ಆರ್​ಬಿಐ! - ಆರ್​ಬಿಐನ ಬ್ಯಾಂಕಿಂಗ್ ಪ್ರಗತಿ ವರದಿ

ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್​ಗಳ (ಎಸ್‌ಸಿಬಿ) ಒಟ್ಟು ನಿಷ್ಕ್ರಿಯ ಆಸ್ತಿ ಅಥವಾ ಕೆಟ್ಟ ಸಾಲ (ಜಿಎನ್‌ಪಿಎ) ಅನುಪಾತವು 2019ರ ಮಾರ್ಚ್ ಅಂತ್ಯದ ವೇಳೆಗಿನ 9.1 ಪ್ರತಿಶತದಿಂದ 2020ರ ಮಾರ್ಚ್ ಅಂತ್ಯದ ವೇಳೆಗೆ ಶೇ 8.2ಕ್ಕೆ ಇಳಿದಿದೆ. ಮುಂದುವರಿದು 2020ರ ಸೆಪ್ಟೆಂಬರ್ ಅಂತ್ಯಕ್ಕೆ ಶೇ 7.5ಕ್ಕೆ ಕುಸಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ( ಆರ್‌ಬಿಐ) ತನ್ನ ಭಾರತದಲ್ಲಿ 2019-20ರ ಟ್ರೆಂಡ್ ಮತ್ತು ಪ್ರಗತಿಯ ವರದಿಯಲ್ಲಿ ತಿಳಿಸಿದೆ.

RBI
ಆರ್​ಬಿಐ

By

Published : Dec 29, 2020, 6:59 PM IST

ನವದೆಹಲಿ:ಅನುತ್ಪಾದಕ ಆಸ್ತಿಯನ್ನು ಸಂಪಾದಿಸಲು ಇಲ್ಲವೇ ಯಾವುದೇ ಅನುತ್ಪಾದಕ ಕೆಲಸಗಳಿಗೆ ಸಾಲ ಮಾಡಿ ಮರು ಪಾವತಿಸದೇ ಇದ್ದಾಗ ಅದು ಬ್ಯಾಂಕ್​ಗಳಿಗೆ ಕೆಟ್ಟ ಸಾಲ ಅಥವಾ ನಿಷ್ಕ್ರಿಯ ಆಸ್ತಿ (ನಾನ್ ಪರ್ಫಾಮಿಂಗ್ ಅಸೆಟ್) ಆಗುತ್ತದೆ. ಇದು ಬ್ಯಾಂಕ್​ಗಳಿಗೆ ದೊಡ್ಡ ಹೊರೆಯಾಗಿ ಅವುಗಳ ಸಾಲ ನೀಡಿಕೆಯನ್ನು ಕುಗ್ಗಿಸುತ್ತದೆ. ಜೊತೆಗೆ ಆಸ್ತಿ ಮೌಲ್ಯಕ್ಕೆ ಧಕ್ಕೆ ತರುತ್ತದೆ. ಅಲ್ಪ ಸಮಾಧಾನ ಎಂಬುವಂತೆ ಆರ್​ಬಿಐ ಇಂದು ಬಿಡುಗಡೆ ಮಾಡಿದ ವರದಿಯಲ್ಲಿ ಸಂತಸದ ಸುದ್ದಿ ಹೊರ ಬಿದ್ದಿದೆ.

ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್​ಗಳ (ಎಸ್‌ಸಿಬಿ) ಒಟ್ಟು ನಿಷ್ಕ್ರಿಯ ಆಸ್ತಿ ಅಥವಾ ಕೆಟ್ಟ ಸಾಲ (ಜಿಎನ್‌ಪಿಎ) ಅನುಪಾತವು 2019ರ ಮಾರ್ಚ್ ಅಂತ್ಯದ ವೇಳೆಗಿನ 9.1 ಪ್ರತಿಶತದಿಂದ 2020ರ ಮಾರ್ಚ್ ಅಂತ್ಯದ ವೇಳೆಗೆ ಶೇ 8.2ಕ್ಕೆ ಇಳಿದಿದೆ. ಮುಂದುವರಿದು 2020ರ ಸೆಪ್ಟೆಂಬರ್ ಅಂತ್ಯಕ್ಕೆ ಶೇ 7.5ಕ್ಕೆ ಕುಸಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ( ಆರ್‌ಬಿಐ) ತನ್ನ ಭಾರತದಲ್ಲಿ 2019-20ರ ಟ್ರೆಂಡ್ ಮತ್ತು ಪ್ರಗತಿಯ ವರದಿಯಲ್ಲಿ ತಿಳಿಸಿದೆ.

ಎಸ್‌ಸಿಬಿಗಳ 'ಬಂಡವಾಳ ಪರ್ಯಾಪ್ತತಾ ಅನುಪಾತ' (ಕ್ಯಾಪಿಟಲ್‌ ಟು ರಿಸ್ಕ್‌ ವೇಟೆಡ್‌ ಅಸೆಟ್ಸ್‌ ರೆಶೋ: ಸಿಆರ್‌ಎಆರ್) ಅನುಪಾತವು 2019ರ ಮಾರ್ಚ್ ಅಂತ್ಯದ ವೇಳೆಗೆ 14.3 ಪ್ರತಿಶತದಿಂದ 2020ರ ಮಾರ್ಚ್ ಅಂತ್ಯದ ವೇಳೆಗೆ 14.7ಕ್ಕೆ ತಲುಪಿದೆ. 2020ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ 15.8ಕ್ಕೆ ಬಲಗೊಂಡಿದೆ. ಸಾರ್ವಜನಿಕ ವಲಯದ ಮರು ಬಂಡವಾಳೀಕರಣದಿಂದ ಭಾಗಶಃ ನೆರವು ಪಡೆದಿದ್ದು, ಸಾರ್ವಜನಿಕ (ಪಿಎಸ್​​ಬಿ) ಮತ್ತು ಖಾಸಗಿ ವಲಯದ ಬ್ಯಾಂಕ್​ಗಳು ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಣೆ ಮಾಡುತ್ತಿವೆ ಎಂದು ಆರ್‌ಬಿಐ ಹೇಳಿದೆ.

ಇದನ್ನೂ ಓದಿ: ಏರ್​ ಇಂಡಿಯಾ ಖಾಸಗೀಕರಣದ 2ನೇ ಹಂತ ಶುರು: ಅರ್ಹ ಬಿಡ್​ದಾರರ ಹೆಸರು ಜ.1ಕ್ಕೆ ಬಹಿರಂಗ

ಹಿಂದಿನ ಎರಡು ವರ್ಷಗಳಲ್ಲಿ ನಷ್ಟದ ಬಳಿಕ ಎಸ್‌ಸಿಬಿಗಳ ನಿವ್ವಳ ಲಾಭವು 2019-20ರಲ್ಲಿ ಚೇತರಿಸಿಕೊಸಿಕೊಂಡಿದೆ. ಅರ್ಧವಾರ್ಷಿಕದ 2020 - 21ರಲ್ಲಿ ನಿಷೇಧ, ಆಸ್ತಿ ವರ್ಗೀಕರಣದ ಸ್ಥಗಿತ ಮತ್ತು ಲಾಭಾಂಶದ ಹಿಂತಳಿತ ಅವುಗಳ ಆರ್ಥಿಕ ಸಾಧನೆ ಹೆಚ್ಚಾಗುವಂತೆ ಮಾಡಿದೆ ಎಂದು ಆರ್‌ಬಿಐ ವರದಿ ತಿಳಿಸಿದೆ.

ಆರ್‌ಬಿಐನ ಟ್ರೆಂಡ್​ ಮತ್ತು ಪ್ರಗತಿ ವರದಿಯು ಇದುವರೆಗೆ 2019 - 20 ಮತ್ತು 2020-21ರ ಅವಧಿಯಲ್ಲಿ ಸಹಕಾರಿ ಬ್ಯಾಂಕ್​ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯಕ್ಷಮತೆ ಪ್ರಸ್ತುತಪಡಿಸುತ್ತದೆ. ಈ ವರದಿಯು ಭಾರತದ ಹಣಕಾಸು ಕ್ಷೇತ್ರದ ವಿಕಾಸದ ದೃಷ್ಟಿಕೋನದ ಬಗ್ಗೆ ವಿವರಣೆ ನೀಡುತ್ತದೆ.

ಕೋವಿಡ್​-19 ಸಾಂಕ್ರಾಮಿಕದ ಪರಿಣಾಮ ತಗ್ಗಿಸಲು ಆರ್‌ಬಿಐ ಒಂದು ಶ್ರೇಣಿ ನೀತಿಗಳನ್ನು ಕೈಗೊಂಡಿತ್ತು. ತನ್ನ ನಿಯಂತ್ರಕ ವ್ಯಾಪ್ತಿಯನ್ನು ಕಾನೂನು ತಿದ್ದುಪಡಿಗಳಿಂದ ಬಲಪಡಿಸಿದೆ. ಇದು ಸಹಕಾರಿ ಬ್ಯಾಂಕ್​, ಎನ್‌ಬಿಎಫ್‌ಸಿ ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳ (ಎಚ್‌ಎಫ್‌ಸಿ) ಮೇಲೆ ಹೆಚ್ಚಿನ ಅಧಿಕಾರ ನೀಡಿತು. ತನ್ನ ಮೇಲ್ವಿಚಾರಣಾ ಚೌಕಟ್ಟು ಹೆಚ್ಚಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ ಎಂದು ವರದಿ ಹೇಳಿದೆ.

ABOUT THE AUTHOR

...view details