ವಾಷಿಂಗ್ಟನ್: ಜಾಗತಿಕ ಸಾರ್ವಜನಿಕ ಸಾಲವು 2020ರ ಅಂತ್ಯದ ವೇಳೆಗೆ ಜಿಡಿಪಿಯ ಶೇ 98ನ್ನು ಮುಟ್ಟಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಇತ್ತೀಚಿನ ಹಣಕಾಸಿನ ಮಾನಿಟರ್ ಪರಿಷ್ಕೃತ ವರದಿಯಲ್ಲಿ ತಿಳಿಸಿದೆ.
ಐಎಂಎಫ್ ಅಂದಾಜಿನ ಪ್ರಕಾರ, ಭಾರತದ ಸರ್ಕಾರದ ಸಾಲವು ಜಿಡಿಪಿಯ ಶೇ 83ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದಿದೆ. ಕೋವಿಡ್ನಿಂದ ಏರಿಕೆಯಾದ ಸರ್ಕಾರದ ವೆಚ್ಚದಿಂದಾಗಿ ಭಾರತದ ಒಟ್ಟು ಸಾಲದ ಪ್ರಮಾಣವು ಮುಂದಿನ ವರ್ಷದ ವೇಳೆಗೆ 170 ಲಕ್ಷ ಕೋಟಿ ರೂ. ಮುಟ್ಟುವ ಸಾಧ್ಯತೆಯಿದೆ. ಇದು ಒಟ್ಟಾರೆ ಜಿಡಿಪಿಯ ಶೇ 87.6ರಷ್ಟು ಇರಲಿದೆ ಎಂದು ಎಸ್‌ಬಿಐ ಇಕೋವ್ರಾಪ್ ಜುಲೈನಲ್ಲಿ ಅಂದಾಜಿಸಿತ್ತು.
ಐಎಂಎಫ್‌ನ ಅಂದಾಜು ಎಸ್ಬಿಐಗಿಂತ ತುಸು ಕಡಿಮೆಯಾಗಿದೆ. 2019-20ರ ಹಣಕಾಸು ವರ್ಷದಲ್ಲಿ ಭಾರತದ ಸಾಲವು 146.9 ಲಕ್ಷ ಕೋಟಿ ರೂ. ಮೂಲಕ ಜಿಡಿಪಿಯ ಶೇ.72.2ರಷ್ಟಿದೆ. 2012ರ ಹಣಕಾಸು ವರ್ಷದಲ್ಲಿನ 58.8 ಲಕ್ಷ ಕೋಟಿ ರೂ.ಗಳಿಂದ ಏರಿಕೆ ಆಗುತ್ತಲೇ ಸಾಗಿ ಈಗ ಶೇ 80ರ ಗಡಿದಾಟಿದ. ಭಾರತದ ಜನಸಂಖ್ಯೆ ಅಂದಾಜು 136 ಕೋಟಿ ಇದೆ, ಎಂದರೆ ಭಾರತದ ಪ್ರತಿಯೊಬ್ಬ ಪ್ರಜೆಯ ಮೇಲೆ ಸುಮಾರು ಸುಮಾರು 12 ಲಕ್ಷ ರೂ.ಗೂ ಅಧಿಕ ಸಾಲದ ಹೊರೆಯಾಗಲಿದೆ.
ಕೋವಿಡ್-19 ಸಾಂಕ್ರಾಮಿಕವು ಸಾರ್ವಜನಿಕ ಹಣಕಾಸಿನ ಖರ್ಚುಗಳಿಗೆ ತೀವ್ರ ಸವಾಲೊಡ್ಡಿದೆ. ತುರ್ತಾಗಿ ಜೀವಗಳನ್ನು ರಕ್ಷಿಸುವುದರ ಜೊತೆಗೆ ಉತ್ಪಾದನೆಯಲ್ಲಿನ ಸಂಕೋಚನ ಮತ್ತು ಆದಾಯದ ಕುಸಿತವು ಸರ್ಕಾರದ ನಗದು ಕೊರತೆ ಮತ್ತು ಸಾಲ ಪ್ರಮಾಣ ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ.
ಸರ್ಕಾರದ ಆದಾಯವು ಎಲ್ಲೆಡೆ ಕುಸಿದಿದೆ. ಸಾರ್ವಜನಿಕ ಸಾಲವು ಶೇ 98ಕ್ಕೆ ಏರಿದೆ. ಕೋವಿಡ್ಗಿಂತ ಮುಂಚಿತ ಅವಧಿಗೆ ಹೋಲಿಸಿದರೆ ಶೇ 84ರಿಂದ ಹೆಚ್ಚಳವಾಗಿದೆ ಎಂದು ಐಎಂಎಫ್‌ನ ಹಣಕಾಸು ವ್ಯವಹಾರಗಳ ವಿಭಾಗದ ನಿರ್ದೇಶಕ ವಿಟರ್ ಗ್ಯಾಸ್‌ಪರ್ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ್ದರು.