ಕರ್ನಾಟಕ

karnataka

ETV Bharat / business

ಭಾರತ್ ಪೆಟ್ರೋಲಿಯಂ ಖಾಸಗೀಕರಣ: ಶೇ. 52.98% ಷೇರು ಖರೀದಿಗೆ ಸೌದಿ, ಅಮೆರಿಕ, ರಷ್ಯಾ ಕಂಪನಿಗಳ ಒಲವು! - ಬಿಪಿಸಿಎಲ್​ ಖಾಸಗೀಕರಣ

ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನಲ್ಲಿ ಶೇ. 52.98ರಷ್ಟು ಷೇರು ಖರೀದಿಗೆ (ಇಒಐ) ಗಡುವು ಹತ್ತಿರವಾಗಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಹೊಂದಿರುವ ಕಂಪನಿಗಳು, ಭಾರತ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಲ್ಲಿ ಹೆಚ್ಚಿನ ಪಾಲು ತೆಗೆದುಕೊಳ್ಳಲು ಆಸಕ್ತಿ ತೋರಿಸುತ್ತಿವೆ.

BPCL
ಬಿಪಿಸಿಎಲ್

By

Published : Jul 16, 2020, 5:26 PM IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಅನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಈಗಾಗಲೇ ಚಾಲನೆ ನೀಡಿದ್ದು, ಕಂಪನಿಯಲ್ಲಿ ಹೊಂದಿರುವ ಶೇ.52.98ರಷ್ಟು ಷೇರು ಮಾರಾಟದ ಬಿಡ್‌ ಆಹ್ವಾನದ ಗಡುವು ಸಮೀಪಿಸುತ್ತಿದೆ.

ಬಿಪಿಸಿಎಲ್​ನಲ್ಲಿ ಶೇ.52.98ರಷ್ಟು ಷೇರು ಖರೀದಿಗೆ (ಇಒಐ) ಗಡುವು ಹತ್ತಿರವಾಗಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಹೊಂದಿರುವ ಕಂಪನಿಗಳು, ಭಾರತ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಲ್ಲಿ ಹೆಚ್ಚಿನ ಪಾಲು ತೆಗೆದುಕೊಳ್ಳಲು ಆಸಕ್ತಿ ತೋರಿಸುತ್ತಿವೆ.

ಅಧಿಕೃತ ಮೂಲಗಳ ಪ್ರಕಾರ, ಸೌದಿ ಅರಾಮ್ಕೊ, ಅಬುಧಾಬಿ ನ್ಯಾಷನಲ್ ಆಯಿಲ್ ಕೋ. (ಅಡ್ನೋಕ್), ರಷ್ಯಾದ ರೋಸ್ನೆಫ್ಟ್ ಮತ್ತು ಎಕ್ಸಾನ್ ಮೊಬಿಲ್ ಪಿಎಸ್‌ಯುಗಾಗಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉದ್ದೇಶಿಸಿವೆ.

ಇಒಐ ಸಲ್ಲಿಸುವ ಗಡುವನ್ನು ಎರಡು ಬಾರಿ ಮುಂದೂಡಲಾಗಿದೆ. ಪ್ರಸ್ತುತ ಗಡುವು ಜುಲೈ 31 ಕ್ಕೆ ಕೊನೆಗೊಳ್ಳುತ್ತದೆ. ಭಾರತೀಯ ಪ್ರಮುಖ ತೈಲ ಕಂಪನಿಗಳು ಆಸಕ್ತಿ ತಳೆಯುತ್ತಿವೆ. ಆಯಿಲ್-ಟು-ಟೆಲಿಕಾಂ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಬಿಡ್ಡಿಂಗ್​ ಆಸಕ್ತಿ ತೋರಿಸುತ್ತಿದೆ ಎಂಬುದು ತಿಳಿದುಬಂದಿದೆ.

ಬಿಡ್​ನಲ್ಲಿ ಪಾಲ್ಗೊಳ್ಳಲು ಕಂಪನಿಗಳು ಕನಿಷ್ಠ 10 ಶತಕೋಟಿ ಡಾಲರ್​ ನಿವ್ವಳ ಮೌಲ್ಯ ಹೊಂದಿರಬೇಕು ಎಂದಿದೆ.

ABOUT THE AUTHOR

...view details