ನವದೆಹಲಿ: ಭಾರತವು 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಶೇ 23.9ರಷ್ಟು ಕುಸಿತದ ಬಳಿಕ ಪ್ರತಿಕ್ರಿಯೆ ನೀಡಿದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್, 'ಈ ಆರ್ಥಿಕತೆಯ ಕುಸಿತವು ಜಾಗತಿಕ ವೀತ್ತಿಯೆತೆಗೆ ಅನುಗುಣವಾಗಿದೆ. ಒಂದೂವರೆ ಶತಮಾನದಲ್ಲಿ ಒಮ್ಮೆ ಇಂತಹದ್ದ ಸಂಭವಿಸುತ್ತೆ' ಎಂದು ಸ್ಪಷ್ಟನೆ ಕೊಟ್ಟರು.
ಜಿಡಿಪಿ ಕುಸಿತದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸುಬ್ರಮಣಿಯನ್, ಜಿಡಿಪಿಯಲ್ಲಿನ ಋಣಾತ್ಮಕ ಬೆಳವಣಿಗೆಯ ದರವು ಇತರ ದೇಶಗಳಂತೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸಂಪೂರ್ಣ ಲಾಕ್ಡೌನ್ ಇದ್ದಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿದೆ ಎಂದರು.
ಕಳೆದ ತ್ರೈಮಾಸಿಕದಲ್ಲಿ ಕೆಟ್ಟ ಆರ್ಥಿಕ ಕಾರ್ಯಕ್ಷಮತೆಯನ್ನು "ಜಾಗತಿಕವಾಗಿ ಅನುಭವಿಸಿದ ಒಂದು ಬಾಹ್ಯ ಆಘಾತ"ವೆಂದು, ಇದು ಸಾಂಕ್ರಾಮಿಕ ಮತ್ತು ಅದರ ಪರಿಣಾಮವಾದ ಲಾಕ್ಡೌನ್ನಿಂದ ಸಂಭವಿಸಿತ್ತು ಎಂದು ವ್ಯಾಖ್ಯಾನಿಸಿದರು.