ವಿಶ್ವಸಂಸ್ಥೆ :ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ 2020ರಲ್ಲಿ ಜಾಗತಿಕ ಆರ್ಥಿಕತೆಯು ಶೇ.1ರಷ್ಟು ಕುಗ್ಗಬಹುದು. ಇದು ಹಿಂದಿನ ಅಂದಾಜು ಶೇ.2.5ರಷ್ಟು ಬೆಳವಣಿಗೆಯಿಂದ ಹಿಮ್ಮುಖವಾಗಿದೆ. ನಿರ್ಬಂಧಗಳಿದ್ದಲ್ಲಿ ಇನ್ನೂ ಹೆಚ್ಚಿನ ಸಂಕುಚಿತಗೊಳ್ಳಬಹುದು ಎಂದು ವಿಶ್ವ ಸಂಸ್ಥೆ ಹೇಳಿದೆ.
ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ (ಡೆಸಾ) ವಿಶ್ಲೇಷಣೆಯು ಕೋವಿಡ್-19 ಸಾಂಕ್ರಾಮಿಕವು ಜಾಗತಿಕ ಪೂರೈಕೆ ಸರಪಳಿ ಮತ್ತು ಅಂತಾರಾಷ್ಟ್ರೀಯ ವ್ಯಾಪಾರವನ್ನು ಅಡ್ಡಿಪಡಿಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು 100 ದೇಶಗಳು ರಾಷ್ಟ್ರೀಯ ಗಡಿಗಳನ್ನು ಮುಚ್ಚುತ್ತಿರುವುದರಿಂದ ಜನರ ಚಲನೆ ಮತ್ತು ಪ್ರವಾಸೋದ್ಯಮ ನಿಂತು ಹೋಗಿದೆ ಎಂದಿದೆ. ಈ ದೇಶಗಳಲ್ಲಿನ ಲಕ್ಷಾಂತರ ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಜಾಗತಿಕ ಆರ್ಥಿಕತೆಯನ್ನು ಆರ್ಥಿಕ ಹಿಂಜರಿತದ ಕೂಪಕ್ಕೆ ತಳ್ಳುವಂತಿದೆ. ತಮ್ಮ ಆರ್ಥಿಕತೆಯ ತೀವ್ರ ಕುಸಿತವನ್ನು ತಪ್ಪಿಸಲು ಸರ್ಕಾರಗಳು ದೊಡ್ಡ ಮಟ್ಟದ ಸುಧಾರಣ ಪ್ಯಾಕೇಜ್‌ಗಳನ್ನು ಘೋಷಿಸುತ್ತಿವೆ.
ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ವಿಶ್ವ ಆರ್ಥಿಕತೆಯು 2020ರಲ್ಲಿ ಶೇ 0.9ರಷ್ಟು ಸಂಕುಚಿತಗೊಳ್ಳಬಹುದು. 2009ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶ್ವ ಆರ್ಥಿಕತೆಯು ಶೇ. 1.7ರಷ್ಟು ಸಂಕುಚಿತಗೊಂಡಿದೆ ಎಂದು ಡೆಸಾ ಹೇಳಿದೆ. ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಮುಂದಾಲೋಚನೆ 2020ವರದಿ ಅನ್ವಯ, ಕೋವಿಡ್-19 ಸ್ಫೋಟಗೊಳ್ಳುವ ಮೊದಲು ವಿಶ್ವ ಉತ್ಪಾದನೆಯು 2020ರಲ್ಲಿ ಶೇ. 2.5ರಷ್ಟು ಸಾಧಾರಣ ವೇಗದಲ್ಲಿ ವಿಸ್ತರಿಸುವ ನಿರೀಕ್ಷೆಯಿದೆ ಎಂದು ವಿಶ್ಲೇಷಿಸಿತ್ತು.
ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಂಡು, ವಿಶ್ವ ಸಂಸ್ಥೆಯ ಡೆಸಾದ ವಿಶ್ವ ಆರ್ಥಿಕ ಮುನ್ಸೂಚನೆ ಮಾದರಿ 2020ರಲ್ಲಿ ಜಾಗತಿಕ ಬೆಳವಣಿಗೆಯ ಉತ್ತಮ ಮತ್ತು ಕೆಟ್ಟ ಸಂದರ್ಭಗಳನ್ನು ಅಂದಾಜು ಮಾಡಿದೆ. ಖಾಸಗಿ ಬಳಕೆ, ಹೂಡಿಕೆ ಮತ್ತು ರಫ್ತುಗಳಲ್ಲಿ ಮಧ್ಯಮ ಕುಸಿತ ಮತ್ತು ಜಿ -7 ದೇಶಗಳಲ್ಲಿನ ಸರ್ಕಾರಿ ಖರ್ಚಿನಲ್ಲಿ ಸರಿದೂಗಿಸುವಿಕೆ ಮತ್ತು ಚೀನಾದ ಜಾಗತಿಕ ಬೆಳವಣಿಗೆಯನ್ನು 2020ರಲ್ಲಿ ಶೇ. 1.2ಕ್ಕೆ ಇಳಿಯಲಿದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಜಾಗತಿಕ ಉತ್ಪಾದನೆಯು 2020ರಲ್ಲಿ ಶೇ.2.5ರಷ್ಟು ಬೆಳೆಯುವ ಬದಲು ಶೇ.0.9ರಷ್ಟು ಕುಗ್ಗುತ್ತದೆ ಎಂದು ಹೇಳಿದೆ. ಚೀನಾ, ಜಪಾನ್, ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಯುರೋಪ್ ವಿಭಿನ್ನ ಪ್ರಮಾಣದ ಆಘಾತಗಳನ್ನು ಎದುರಿಸಲಿವೆ.