ಕರ್ನಾಟಕ

karnataka

ETV Bharat / business

9 ತಿಂಗಳು ತೆರಿಗೆ ಮುಂದೂಡಿ: ನಿರ್ಮಲಾ ಸೀತಾರಾಮನ್​ಗೆ ಗೂಗಲ್, ಅಮೆಜಾನ್, ನೆಟ್​ಫ್ಲಿಕ್ಸ್ ಮನವಿ - ಕೋವಿಡ್-19

ಅಮೆರಿಕ-ಇಂಡಿಯಾ ಬಿಸಿನೆಸ್ ಕೌನ್ಸಿಲ್, ಮಾಹಿತಿ ತಂತ್ರಜ್ಞಾನ ಉದ್ಯಮ ಮಂಡಳಿ, ಜಪಾನ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಉದ್ಯಮಗಳ ಸಂಘ, ಏಷ್ಯಾ-ಪೆಸಿಫಿಕ್ ಎಂಎಸ್​ಎಂಇ ವಹಿವಾಟು ಒಕ್ಕೂಟ ಮತ್ತು ಡಿಜಿಟೇಷನ್ ಯುರೋಪ್ ಸೇರಿದಂತೆ ಒಂಬತ್ತು ಉದ್ಯಮ ಸಂಸ್ಥೆಗಳ ಸಮೂಹವು ಈ ಆರ್ಥಿಕ ವರ್ಷದಲ್ಲಿ ಸರ್ಕಾರ ವಿಧಿಸುವ ಸಮೀಕರಣ ಚಂದಾ ತೆರಿಗೆ (ಇಕ್ವಲೈಸೇಷನ್​ ಲೆವಿ) ಶೇ 2ರಷ್ಟು ಸುಂಕ ಕುರಿತು ಸಮಾಲೋಚನೆ ನಡೆಸುವಂತೆ ಕೋರಿವೆ.

Equalisation Levy
ತೆರಿಗೆ

By

Published : Apr 29, 2020, 4:48 PM IST

ನವದೆಹಲಿ: ಅಂತರರಾಷ್ಟ್ರೀಯ ಉದ್ಯಮ ಸಂಸ್ಥೆಗಳ ಒಕ್ಕೂಟದ ಸದಸ್ಯತ್ವದ ಜಾಗತಿಕ ಕಂಪನಿಗಳಾದ ವಾಲ್ಮಾರ್ಟ್, ಅಮೆಜಾನ್, ಗೂಗಲ್, ನೆಟ್​ಫ್ಲಿಕ್ಸ್ ಸೇರಿದಂತೆ ಇತರೆ ಕಂಪನಿಗಳು ಕೋವಿಡ್-19 ಪ್ರೇರೇಪಿತ ಬಿಕ್ಕಟ್ಟಿನಿಂದ ಒಂಬತ್ತು ತಿಂಗಳವರೆಗೆ ಅನಿವಾಸಿ ಇ-ಕಾಮರ್ಸ್ ಕಂಪನಿಗಳ ಮೇಲೆ ವಿಧಿಸುವ ಶೇ 2ರಷ್ಟು ತೆರಿಗೆ ಮುಂದೂಡುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೋರಿವೆ.

ಅಮೆರಿಕ-ಇಂಡಿಯಾ ಬಿಸಿನೆಸ್ ಕೌನ್ಸಿಲ್, ಮಾಹಿತಿ ತಂತ್ರಜ್ಞಾನ ಉದ್ಯಮ ಮಂಡಳಿ, ಜಪಾನ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಉದ್ಯಮಗಳ ಸಂಘ, ಏಷ್ಯಾ-ಪೆಸಿಫಿಕ್ ಎಂಎಸ್​ಎಂಇ ವಹಿವಾಟು ಒಕ್ಕೂಟ ಮತ್ತು ಡಿಜಿಟೇಷನ್ ಯುರೋಪ್ ಸೇರಿದಂತೆ ಒಂಬತ್ತು ಉದ್ಯಮ ಸಂಸ್ಥೆಗಳ ಸಮೂಹವು ಈ ಆರ್ಥಿಕ ವರ್ಷದಲ್ಲಿ ಸರ್ಕಾರ ವಿಧಿಸುವ ಸಮೀಕರಣ ಚಂದಾ ತೆರಿಗೆ (ಇಕ್ವಲೈಸೇಷನ್​ ಲೆವಿ) ಶೇ 2ರಷ್ಟು ಸುಂಕ ಕುರಿತು ಸಮಾಲೋಚನೆ ನಡೆಸುವಂತೆ ಕೋರಿವೆ.

ಸಚಿವರಿಗೆ ಉದ್ಯಮಿ ಒಕ್ಕೂಟ ಜಂಟಿಯಾಗಿ ಪತ್ರ ಬರೆದಿವೆ. ಬಹುತೇಕ ಅಮೆರಿಕ, ಯುರೋಪಿಯನ್, ಆಸ್ಪ್ರೇಲಿಯಾ ಮತ್ತು ಏಷ್ಯನ್ ವಿದೇಶಿ ಕಂಪನಿಗಳನ್ನು ಪ್ರತಿನಿಧಿಸುವ ಉದ್ಯಮ ಸಂಸ್ಥೆಗಳು ಮುಕ್ತ, ನ್ಯಾಯಸಮ್ಮತ, ತಾರತಮ್ಯವಿಲ್ಲದ ಪಾರದರ್ಶಕ, ಸ್ಥಿರ ವ್ಯಾಪಾರ ಹಾಗೂ ಹೂಡಿಕೆಯ ವಾತಾವರಣವನ್ನು ಅರಿಯಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಿ20 ನಾಯಕರ ಬದ್ಧತೆ ಮತ್ತು ಜಾಗತಿಕ ಮಾರುಕಟ್ಟೆಗಳನ್ನು ತೆರೆದುಕೊಳ್ಳುವತ್ತ ಗಮನಹರಿಸಿ ಎಂದು ಉಲ್ಲೇಖಿಸಿದ್ದಾರೆ.

ಅಂತಾರಾಷ್ಟ್ರೀಯ ಬದ್ಧತೆಯ ಮನೋಭಾವದಲ್ಲಿ ಸಮೀಕರಣ ಚಂದಾ ತೆರಿಗೆ ವಿಧಿಸುವ ವಿಸ್ತರಣೆಯ ಬಗ್ಗೆ ಔಪಚಾರಿಕವಾಗಿ ಸಮಾಲೋಚನೆ ಮಾಡುವಂತೆ ಗೌರವಯುತವಾಗಿ ವಿನಂತಿಸಿ ನಾವು ಈ ಪತ್ರ ಬರೆಯುತ್ತೇವೆ. ಕೇಂದ್ರ ಬಜೆಟ್ 2020ರ ಕಲಂ 165ಎ ಅನುಷ್ಠಾನದ ಕನಿಷ್ಠ ಒಂಬತ್ತು ತಿಂಗಳವರೆಗೆ ವಿಳಂಬ ಮಾಡುವಂತೆ ಕೋರಿವೆ.

ABOUT THE AUTHOR

...view details