ಕರ್ನಾಟಕ

karnataka

ETV Bharat / business

ಪಾಲಿಸಿದಾರರಿಗೆ ಗುಡ್ ನ್ಯೂಸ್​.. ಜೀವ ವಿಮೆ ಕಂತು 30 ದಿನ ಹೆಚ್ಚುವರಿ ಕಾಲಾವಕಾಶ - Insurance Regulatory and Development Authority of India

ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಿನಲ್ಲಿ ನವೀಕರಣ ಮಾಡಬೇಕಾಗಿದ್ದ ಪಾಲಿಸಿಗಳ ಕಂತು ಪಾವತಿಗೆ ಒಂದು ತಿಂಗಳ ಹೆಚ್ಚಿನ ಕಾಲಾವಧಿ ಒದಗಿಸಿ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಆದೇಶ ಹೊರಡಿಸಿದೆ.

life insurance premium
ಜೀವ ವಿಮೆ

By

Published : Apr 6, 2020, 5:41 PM IST

ನವದೆಹಲಿ :ಕೋವಿಡ್-19 ಸೋಂಕಿನಿಂದ ವಿಧಿಸಲಾಗಿರುವ ಲಾಕ್​ಡೌನ್​ನಿಂದಾಗಿ ಜೀವವಿಮೆ ಪಾಲಿಸಿಗಳ ಕಂತು ಪಾವತಿ ಮಾಡಲು ಗ್ರಾಹಕರಿಗೆ 30 ದಿನಗಳ ಹೆಚ್ಚುವರಿ ಕಾಲಾವಕಾಶ ಒದಗಿಸಲಾಗಿದೆ.

ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಿನಲ್ಲಿ ನವೀಕರಣ ಮಾಡಬೇಕಾಗಿದ್ದ ಪಾಲಿಸಿಗಳ ಕಂತು ಪಾವತಿಗೆ ಒಂದು ತಿಂಗಳ ಹೆಚ್ಚಿನ ಕಾಲಾವಧಿ ಒದಗಿಸಿ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಆದೇಶ ಹೊರಡಿಸಿದೆ.

ಪಾಲಿಸಿದಾರರಿಗೆ ನಿರ್ದಿಷ್ಟ ಪಾಲಿಸಿಯಂತಹ ಆಯ್ಕೆ ಅಸ್ತಿತ್ವದಲ್ಲಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೇ ಈ ಒಂದು ಬಾರಿ ಆಯ್ಕೆ ಅನ್ವಯವಾಗುತ್ತದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಇರ್ಡೈ) ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ಪ್ರೀಮಿಯಂ ಪಾವತಿಗಳಿಗೆ 30 ದಿನಗಳ ಹೆಚ್ಚುವರಿ ಕಾಲಾವಕಾಶ ಒದಗಿಸಲು ನಿಯಂತ್ರಕವು ಸೂಚನೆಗಳನ್ನು ನೀಡಿತು. ಜೀವ ವಿಮೆದಾರರು ಮತ್ತು ಜೀವ ವಿಮಾ ಮಂಡಳಿಗಳು ನೀಡಿದ ಪ್ರಾತಿನಿಧ್ಯಗಳಿಗೆ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದೆ.

ABOUT THE AUTHOR

...view details