ನವದೆಹಲಿ:ಕೊರೊನಾ ಬಿಕ್ಕಟ್ಟಿನಿಂದಾಗಿ 2019-20ಕ್ಕೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 15.7ರಷ್ಟು ಕುಸಿದಿದೆ ಎಂದು ಬ್ಯಾಂಕ್ ಆಫ್ ಅಮೆರಿಕ ಸೆಕ್ಯುರಿಟೀಸ್ ತನ್ನ ವರದಿಯಲ್ಲಿ ಅಂದಾಜಿಸಿದೆ.
5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗುವ ಭಾರತದ ಬೆಳವಣಿಗೆಯ ಗುರಿ ತಲುಪಲು ಹೆಚ್ಚವರಿಯಾಗಿ ಮೂರು ವರ್ಷಗಳು ಅಂದರೆ 2031-32ಕ್ಕೆ ಪೂರ್ಣಗೊಳ್ಳಬಹುದು ಎಂದಿದೆ. ಭಾರತವು ಪ್ರಸ್ತುತ ಜರ್ಮನಿಯ ನಂತರ ಐದನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದೆ. 5 ಟ್ರಿಲಿಯನ್ ಡಾಲರ್ನೊಂದಿಗೆ 2030ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲು ಸರ್ಕಾರ ಉದ್ದೇಶಿಸಿದೆ. 2031-32ರ ವೇಳೆಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ. ಈ ಮೊದಲು ಅದು 2028-29ರ ವೇಳೆಗೆ ಬೆಳೆಯುವ ನಿರೀಕ್ಷೆಯಿತ್ತು. ಕೊರೊನಾ ಬಿಕ್ಕಟ್ಟು ನಕಾರಾತ್ಮಕ ಪರಿಣಾಮ ಬೀರಿದೆ.
ಬ್ಯಾಂಕ್ ಆಫ್ ಅಮೆರಿಕ ಸೆಕ್ಯುರಿಟೀಸ್ ಪ್ರಕಾರ, ಜಪಾನ್‌ನ ಜಿಡಿಪಿ (ಡಾಲರ್ ಪರಿಭಾಷೆ) 2031ರ ವೇಳೆಗೆ ಶೇ 9ರಷ್ಟು ಮತ್ತು 2030ರ ವೇಳೆಗೆ ಶೇ 10ರಷ್ಟು ಬೆಳವಣಿಗೆ ಮುಟ್ಟಲಿದೆ. ಆದರೆ, ವರದಿಯು ಆರ್ಥಿಕತೆಯ ಗಾತ್ರದ ವಿವರಗಳನ್ನು ಬಹಿರಂಗಪಡಿಸಿಲ್ಲ.