ಕರ್ನಾಟಕ

karnataka

ETV Bharat / business

ಶೀಘ್ರದಲ್ಲಿ ಲಸಿಕೆ ಲಭ್ಯವಾಗಿ ಕೊರೊನಾ & ಆರ್ಥಿಕ ಯುದ್ಧ ಗೆಲ್ಲುತ್ತೇವೆ : ಸಚಿವ ಗಡ್ಕರಿ ವಿಶ್ವಾಸ

ನಾವು ಈಗಾಗಲೇ ಚೀನಾದಿಂದ ನಮ್ಮ ಆಮದನ್ನು ಕಡಿಮೆ ಮಾಡಿದ್ದು, ಭಾರತದ ರಫ್ತು ಪ್ರಮಾಣ ಹೆಚ್ಚುತ್ತಿದೆ. ಪ್ರವೃತ್ತಿಗಳು ಸಕಾರಾತ್ಮಕವಾಗಿ ಸಾಗುತ್ತಿವೆ. ಈ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದೇನೆ..

Gadkari
ಗಡ್ಕರಿ

By

Published : Nov 30, 2020, 4:30 PM IST

ನವದೆಹಲಿ :ಭಾರತಕ್ಕೆ ಕೋವಿಡ್​-19 ಲಸಿಕೆ ಆದಷ್ಟು ಬೇಗ ಸಿಗಲಿದೆ. ಸಾಂಕ್ರಾಮಿಕ ರೋಗ ತಂದೊಡ್ಡಿರುವ ಆರ್ಥಿಕ ಯುದ್ಧವನ್ನು ಗೆಲುತ್ತೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಹುತೇಕ ರಾಷ್ಟ್ರಗಳು ಚೀನಾ ಜತೆಗೆ ವಹಿವಾಟು ನಡೆಸುವ ಆಸಕ್ತಿ ಹೊಂದಿಲ್ಲ. ಭಾರತದಲ್ಲಿ ಅವರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಭಾರತದಿಂದ ರಫ್ತು ವೃದ್ಧಿಸಲು ದೇಶದ ಉತ್ಪಾದನಾ ವಲಯವು ತನ್ನ ಸಾಮರ್ಥ್ಯವನ್ನು ದ್ವಿಗುಣಗೊಳಿಸಿಕೊಳ್ಳಲು ಈಗಿನ ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ಹೇಳಿದರು.

ದಿವಾಳಿಯಾಗುವತ್ತ ಪಾಕಿಸ್ತಾನ : ವಿಶ್ವದಲ್ಲೇ ಅತಿಹೆಚ್ಚು ಹಣದುಬ್ಬರ

ನಾವು ಆದಷ್ಟು ಬೇಗ ಲಸಿಕೆ ಪಡೆಯುತ್ತೇವೆ ಮತ್ತು ಶೇ.100ರಷ್ಟು ನಾವು ಕೋವಿಡ್​-19 ವಿರುದ್ಧದ ಈ ಯುದ್ಧ ಗೆಲ್ಲುತ್ತೇವೆ. ಇದರ ಜೊತೆಗೆ ಆರ್ಥಿಕ ಯುದ್ಧವನ್ನೂ ಸಹ ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಗಡ್ಕರಿ ಅವರು ಡನ್ & ಬ್ರಾಡ್‌ಸ್ಟ್ರೀಟ್ ಆಯೋಜಿಸಿದ ವರ್ಚ್ಯುವಲ್​ ಕಾರ್ಯಕ್ರಮದಲ್ಲಿ ಹೇಳಿದರು.

ಈ ಹಿಂದೆ ಕೇಂದ್ರವು ಘೋಷಿಸಿದ ವ್ಯವಹಾರಗಳಿಗೆ 3 ಲಕ್ಷ ಕೋಟಿ ರೂ. ಮೇಲಾಧಾರ ರಹಿತ ಸ್ವಯಂಚಾಲಿತ ಸಾಲ ಪೈಕಿ, 1.48 ಲಕ್ಷ ಕೋಟಿ ರೂ. ಸಾಲ ವಿತರಣೆಯನ್ನು ಪೂರ್ಣಗೊಳಿಸಲಾಗಿದೆ.

ನಾವು ಈಗಾಗಲೇ ಚೀನಾದಿಂದ ನಮ್ಮ ಆಮದನ್ನು ಕಡಿಮೆ ಮಾಡಿದ್ದು, ಭಾರತದ ರಫ್ತು ಪ್ರಮಾಣ ಹೆಚ್ಚುತ್ತಿದೆ. ಪ್ರವೃತ್ತಿಗಳು ಸಕಾರಾತ್ಮಕವಾಗಿ ಸಾಗುತ್ತಿವೆ. ಈ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.

ABOUT THE AUTHOR

...view details