ಕರ್ನಾಟಕ

karnataka

ETV Bharat / business

ಪ್ಯಾಕೇಜ್ಡ್​ ಕುಡಿಯುವ ನೀರಿಗೆ ಬಿಐಎಸ್​ ಮಾರ್ಕ್​​ ಕಡ್ಡಾಯ - ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್

ವ್ಯವಹಾರ ಪ್ರಾರಂಭಿಸುವ ಮೊದಲು ಆಹಾರ ವ್ಯವಹಾರ ನಿರ್ವಾಹಕರು (ಎಫ್‌ಬಿಒ) ಪರವಾನಗಿ / ಪ್ರಮಾಣೀಕರಣ ಪಡೆಯಬೇಕು. ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ನಿಷೇಧ, ಮಾರಾಟದ ಮೇಲಿನ ನಿರ್ಬಂಧ) ನಿಯಮಗಳು -2011ರ ಅನ್ವಯ, ಯಾವುದೇ ವ್ಯಕ್ತಿಯು ಬಿಐಎಸ್ ಪ್ರಮಾಣೀಕರಣವಿಲ್ಲದೆ ಪ್ಯಾಕೇಜ್ ಮಾಡಿದ ಕುಡಿಯುವ ನೀರು ಅಥವಾ ಖನಿಜಯುಕ್ತ ನೀರನ್ನು ಮಾರಾಟ ಮಾಡಬಾರದು.

drinking water
drinking water

By

Published : Mar 27, 2021, 12:00 PM IST

ನವದೆಹಲಿ: ಪ್ಯಾಕೇಜ್ ಮಾಡಿದ ಕುಡಿಯುವ ನೀರು ಮತ್ತು ಮಿನರಲ್​ ನೀರು ತಯಾರಕರ ಪರವಾನಗಿ/ ನೋಂದಣಿಗೆ ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಮಾರ್ಕ್ ಪ್ರಮಾಣೀಕರಣ ಕಡ್ಡಾಯವಾಗಿದೆ ಎಂದು ಆಹಾರ ನಿಯಂತ್ರಕ ಎಫ್‌ಎಸ್‌ಎಸ್‌ಎಐ (ಫುಡ್ ಸೇಫ್ಟಿ ಆ್ಯಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ) ತಿಳಿಸಿದೆ.

ಈ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ. 2021ರ ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಹೇಳಿದೆ.

ಎಫ್‌ಎಸ್‌ಎಸ್ ಕಾಯ್ದೆ -2008ರ ಸೆಕ್ಷನ್ 31ರ ಪ್ರಕಾರ, ವ್ಯವಹಾರ ಪ್ರಾರಂಭಿಸುವ ಮೊದಲು ಆಹಾರ ವ್ಯವಹಾರ ನಿರ್ವಾಹಕರು (ಎಫ್‌ಬಿಒ) ಪರವಾನಗಿ / ಪ್ರಮಾಣೀಕರಣ ಪಡೆಯಬೇಕು. ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ನಿಷೇಧ, ಮಾರಾಟದ ಮೇಲಿನ ನಿರ್ಬಂಧ) ನಿಯಮಗಳು -2011ರ ಅನ್ವಯ, ಯಾವುದೇ ವ್ಯಕ್ತಿಯು ಬಿಐಎಸ್ ಪ್ರಮಾಣೀಕರಣವಿಲ್ಲದೆ ಪ್ಯಾಕೇಜ್ ಮಾಡಿದ ಕುಡಿಯುವ ನೀರು ಅಥವಾ ಖನಿಜಯುಕ್ತ ನೀರನ್ನು ಮಾರಾಟ ಮಾಡಬಾರದು ಎಂದು ಎಫ್‌ಎಸ್‌ಎಸ್‌ಎ ತಾಕೀತು ಮಾಡಿದೆ.

ಇದನ್ನೂ ಓದಿ: SBI ಜತೆ ಟಾಟಾ ಮೋಟಾರ್ಸ್​ ಒಪ್ಪಂದ : ವಾಣಿಜ್ಯ ವಾಹನಗಳ ಸಾಲ ಇನ್ನಷ್ಟು ಸರಳ

ಕೆಲವು ತಯಾರಕರು ಪ್ರಸ್ತುತ ಎಫ್‌ಎಸ್‌ಎಐ ಪರವಾನಗಿಗಳೊಂದಿಗೆ ಪ್ಯಾಕೇಜ್ ಮಾಡಿದ ಕುಡಿಯುವ ನೀರು ಮತ್ತು ಖನಿಜಯುಕ್ತ ನೀರಿನ ವ್ಯವಹಾರವನ್ನು ನಡೆಸುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಎಫ್‌ಐಎಸ್ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸುವಾಗ ಬಿಐಎಸ್ ಪರವಾನಗಿ ಕಡ್ಡಾಯ ಎಂದು ಎಫ್‌ಎಸ್‌ಎಸ್‌ಎಐ ವಿವರಿಸಿದೆ.

ABOUT THE AUTHOR

...view details