ಕರ್ನಾಟಕ

karnataka

ETV Bharat / business

6 ಮ್ಯೂಚುವಲ್ ಫಂಡ್ ಯೋಜನೆ ನಿಲ್ಲಿಸಿ 8,302 ಕೋಟಿ ರೂ. ಪಡೆದ ಫ್ರ್ಯಾಂಕ್ಲಿನ್​ ಟೆಂಪಲ್ಟನ್​! - Franklin Templeton MF generate Rs 8302

ಏಪ್ರಿಲ್​ 24ರಿಂದ ಅಕ್ಟೋಬರ್​ 15ರ ತನಕದ ಅವಧಿಯಲ್ಲಿ ಯೋಜನೆಯ ವಾಯ್ದೆ ಮುಕ್ತಾಯದ (ಮೆಚ್ಯುರಿಟಿ) ಮುಂಗಡ ಪಾವತಿ ಹಾಗೂ ಕೂಪನ್​ ಪಾವತಿಯ ಮೂಲಕ ಈ ಪ್ರಮಾಣದ ಹಣ ಹರಿದುಬಂದಿದೆ ಎಂದು ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ತಿಳಿಸಿದೆ.

Franklin Templeton
ಫ್ರ್ಯಾಂಕ್ಲಿನ್​ ಟೆಂಪಲ್ಟನ್​

By

Published : Oct 18, 2020, 7:27 AM IST

ನವದೆಹಲಿ:ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ತನ್ನ ಆರು ಮ್ಯೂಚುವಲ್​ ಫಂಡ್​ ಯೋಜನೆಗಳು ಏಪ್ರಿಲ್​ನಲ್ಲಿ ಸ್ಥಗಿತಗೊಳಿಸಿದ ಬಳಿಕ ಇಲ್ಲಿಯವರೆಗೆ 8,302 ಕೋಟಿ ರೂ. ಪಡೆದುಕೊಂಡಿದೆ.

ಮೆಚ್ಯುರಿಟಿ, ಪೂರ್ವ ಪಾವತಿ ಮತ್ತು ಕೂಪನ್ ಪಾವತಿಗಳ ಒತ್ತಡ ಮತ್ತು ಬಾಂಡ್ ಮಾರುಕಟ್ಟೆಯಲ್ಲಿನ ದ್ರವ್ಯತೆಯ ಕೊರತೆ ಉಲ್ಲೇಖಿಸಿ ಫ್ರಾಂಕ್ಲಿನ್ ಟೆಂಪಲ್ಟನ್ ಏಪ್ರಿಲ್ 23ರಂದು ಆರು ಸಾಲ ಮ್ಯೂಚುವಲ್ ಫಂಡ್ ಯೋಜನೆಗಳನ್ನು ನಿಲ್ಲಿಸಿತ್ತು.

ಏಪ್ರಿಲ್​ 24ರಿಂದ ಅಕ್ಟೋಬರ್​ 15ರ ತನಕದ ಅವಧಿಯಲ್ಲಿ ಯೋಜನೆಯ ವಾಯ್ದೆ ಮುಕ್ತಾಯದ (ಮೆಚ್ಯುರಿಟಿ) ಮುಂಗಡ ಪಾವತಿ ಹಾಗೂ ಕೂಪನ್​ ಪಾವತಿಯ ಮೂಲಕ ಈ ಪ್ರಮಾಣದ ಹಣ ಹರಿದುಬಂದಿದೆ ಎಂದು ತಿಳಿಸಿದೆ.

ತಾನು ಮಾಡಿದ ಸಾಲದ ಮೊತ್ತವನ್ನು ಮರುಪಾವತಿಸಲು ಇದನ್ನು ಬಳಸಿಕೊಳ್ಳಲಾಗುವುದು. ಆರು ಯೋಜನೆಗಳ ಬಗೆಗಿನ ವಿಚಾರಣೆಯು ಕರ್ನಾಟಕ ಹೈಕೋರ್ಟ್​ನಲ್ಲಿದ್ದು, ವಾದ- ಪ್ರತಿವಾದ ಮುಗಿದಿದ್ದು, ತೀರ್ಪು ಮಾತ್ರವೇ ಬಾಕಿ ಇದೆ.

For All Latest Updates

TAGGED:

company News

ABOUT THE AUTHOR

...view details