ನವದೆಹಲಿ:ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ 2021-22ರ ಆರ್ಥಿಕ ಸಮೀಕ್ಷಾ ವರದಿಯನ್ನು ಬಜೆಟ್ ಅಧಿವೇಶನದ ಮೊದಲ ದಿನದ ಕಲಾಪದಲ್ಲಿಂದು ಮಂಡಿಸಿದರು. 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 2022 ರಿಂದ ಮಾರ್ಚ್ 2023ರವರೆಗೆ) ಶೇ.8 ರಿಂದ 8.5 ರಷ್ಟು ಬೆಳವಣಿಗೆಯ ದರ ಅಂದಾಜಿಸಲಾಗಿದೆ. ಒಟ್ಟು ದೇಶೀಯ ಉತ್ಪನ್ನ-ಜಿಡಿಪಿ ಶೇ.9.2ಕ್ಕೆ ಏರಿಕೆಯಾಗಲಿದೆ ಎಂದು ರಾಷ್ಟ್ರೀಯ ಅಂಕಿ- ಅಂಶ ಕಚೇರಿ-ಎನ್‌ಎಸ್‌ಒ ಅಂದಾಜು ಮಾಡಿದೆ.
ಆರ್ಥಿಕ ಸಮೀಕ್ಷೆ 2021-22ರ ಸಮೀಕ್ಷೆಯಲ್ಲಿ ಆರ್ಥಿಕತೆಯ ವಿವಿಧ ವಲಯಗಳ ಸ್ಥಿತಿ ಮತ್ತು ಬೆಳವಣಿಗೆಯನ್ನು ವೇಗಗೊಳಿಸಲು ಕೈಗೊಳ್ಳಬೇಕಾದ ಸುಧಾರಣೆಗಳನ್ನು ವಿವರಿಸಲಾಗಿದೆ. 2020-21ರಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ.7.3 ರಷ್ಟು ಸಂಕುಚಿತಗೊಂಡಿದೆ. ಸಮೀಕ್ಷೆಯು ಭಾರತದ ಆರ್ಥಿಕತೆಯ ಸ್ಥಿತಿ ಸುಧಾರಿಸಲು ಪೂರೈಕೆ - ಭಾಗದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದೆ.