ನವದೆಹಲಿ:ಸಾಂಕ್ರಾಮಿಕ ರೋಗ ಪೀಡಿತ ಆರ್ಥಿಕತೆ ಮುನ್ನಡೆಸಲು ಮತ್ತು ಬೆಳವಣಿಗೆ ಹೆಚ್ಚಿಸಲು ಸರ್ಕಾರ ಎದುರು ನೋಡುತ್ತಿದ್ದು, ಭಾರತ ಹಿಂದೆಂದೂ ನೋಡಿರದಂತಹ ಬಜೆಟ್ ನಿಮ್ಮ ಮುಂದೆ ಇಡುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ರ ಆಯವ್ಯಯದ ಬಗ್ಗೆ ಭರವಸೆ ನೀಡಿದ್ದಾರೆ.
ಆರೋಗ್ಯ, ವೈದ್ಯಕೀಯ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ (ಆರ್ & ಡಿ) ಹೂಡಿಕೆ ಮತ್ತು ಟೆಲಿಮೆಡಿಸಿನ್ ನಿರ್ವಹಣೆಗೆ ಹೆಚ್ಚಿನ ಕೌಶಲ್ಯಗಳ ಅಭಿವೃದ್ಧಿ, ವೃತ್ತಿಪರ ತರಬೇತಿ ಹಾಗೂ ಕೌಶಲ್ಯ ಅಭಿವೃದ್ಧಿಯ ಬಗ್ಗೆ ಹೊಸ ದೃಷ್ಟಿಕೋನ ಬಿತ್ತುವ ಸವಾಲುಗಳಿವೆ.
ಸಿಐಐಐ ಪಾಲುದಾರಿಕೆ ಶೃಂಗಸಭೆ 2020 ಉದ್ದೇಶಿಸಿ ಮಾತನಾಡಿದ ಸೀತಾರಾಮನ್, ನಿಮ್ಮ ಆಲೋಚನೆಗಳನ್ನು ನನಗೆ ಕಳುಹಿಸಿ, ಇದರಿಂದಾಗಿ ನಾವು ಹಿಂದೆಂದೂ ಕಾಣದಂತಹ ಬಜೆಟ್ ನೋಡಬಹುದು. 100 ವರ್ಷಗಳ ಭಾರತವು ಸಾಂಕ್ರಾಮಿಕ ರೋಗದ ನಂತರದ ಇಂತದೊಂದು ಬಜೆಟ್ ಬರುತ್ತದೆ ಎಂಬುದನ್ನು ಕಂಡಿರುವುದಿಲ್ಲ. ನಾನು ನಿಮ್ಮ ಆಲೋಚನೆ ಮತ್ತು ಹಾರೈಕೆ ಪಡೆಯದ ಹೊರತು ಅದು ಸಾಧ್ಯವೂ ಆಗುವುದಿಲ್ಲ. ನನ್ನ ಮುಂದೆ ಬರುವ ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಅವಲೋಕನ ಮಾಡುತ್ತೇನೆ. ಅದಲ್ಲದೆ, ಈ ಬಜೆಟ್ನಂತೆ ಬೇರೆ ಯಾವುದನ್ನಾದರೂ ಕರಡು ಮಾಡುವುದು ನನಗೆ ಅಸಾಧ್ಯ. ಸಾಂಕ್ರಾಮಿಕ ರೋಗದ ಬಳಿಕ ತಯಾರಿಸುತ್ತಿರುವ ಬಜೆಟ್ ಇದಾಗಿದೆ ಎಂದರು.