ನವದೆಹಲಿ:ಕಳೆದ ಒಂದು ವಾರದಿಂದ ದೇಶದ ಜನತೆ ಹಾಗೂ ಉದ್ಯಮ ವಲಯಗಳು ಎದುರುನೋಡುತ್ತಿದ್ದ ಕೇಂದ್ರ ಕೊರೊನಾ ವೈರಸ್ ಪ್ಯಾಕೇಜ್ ಘೋಷಣೆಯಾಗಿದೆ.
ಮಾಧ್ಯಮಗಳು ಹಾಗೂ ದೇಶವನ್ನು ಉದ್ದೇಶಿಸಿ ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಧಾನ ಮಂತ್ರಿ ಬಡವರ ಕಲ್ಯಾಣ ಯೋಜನೆ ಅಡಿ ಮುಂದಿನ 3 ತಿಂಗಳುಗಳವರೆಗೆ ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರಿಗೂ ಇಪಿಎಫ್ ಕೊಡುಗೆಯನ್ನು ಸರ್ಕಾರ ಪಾವತಿಸುತ್ತದೆ. 100 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ 90 ಪ್ರತಿಶತದಷ್ಟು ಮಾಸಿಕ 15,000 ರೂ.ಗಿಂತ ಕಡಿಮೆ ಆದಾಯ ಗಳಿಸುವವರಿಗೆ ನೀಡಲಾಗುವುದು ಎಂದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ಮಹಿಳೆಯರಿಗೆ ಮೇಲಾಧಾರ ಸಾಲವನ್ನು ದ್ವಿಗುಣಗೊಳಿಸಲಾಗುವುದು. ಉಜ್ವಲ್ ಯೋಜನಾ ಮಹಿಳೆಯರಿಗೆ ಮುಂದಿನ 3 ತಿಂಗಳವರೆಗೆ ಉಚಿತ ಸಿಲಿಂಡರ್ ನೀಡಲಾಗುವುದು. ಇದರಿಂದ 8.3 ಕೋಟಿ ಬಿಪಿಎಲ್ ಕುಟುಂಬಗಳಿಗೆ ಲಾಭವಾಗಲಿದೆ ಎಂದು ಹೇಳಿದರು.