ಕರ್ನಾಟಕ

karnataka

ETV Bharat / business

ರಾಜ್ಯಗಳಿಗೆ ಹೆಚ್ಚುವರಿಯಾಗಿ 47,541 ಕೋಟಿ ತೆರಿಗೆ ಹಣ ಬಿಡುಗಡೆಗೆ ಸೂಚನೆ - ಸಚಿವೆ ಸೀತಾರಾಮನ್‌ - ಕೇಂದ್ರ ಹಣಕಾಸು ಸಚಿವೆ

ರಾಜ್ಯಗಳ ಅಭಿವೃದ್ಧಿಯ ದೃಷ್ಟಿಯಿಂದ ನಿಗದಿಗಿಂತ ಮುಂಚಿತವಾಗಿಯೇ ಹೆಚ್ಚುವರಿಯಾಗಿ 47,541 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

FM Nirmala Sitharaman press meetig after on the subject of economic recovery post-COVID pandemic
ರಾಜ್ಯಗಳಿಗೆ ಹೆಚ್ಚುವರಿಯಾಗಿ 47,541 ಕೋಟಿ ತೆರಿಗೆ ಹಣ ರೂ.ಬಿಡುಗಡೆಗೆ ಸೂಚನೆ - ಸಚಿವೆ ಸೀತಾರಾಮನ್‌

By

Published : Nov 16, 2021, 4:40 AM IST

Updated : Nov 16, 2021, 4:57 AM IST

ನವದೆಹಲಿ: ನವೆಂಬರ್‌ 22 ರಂದು ರಾಜ್ಯಗಳಿಗೆ 47,541 ರೂಪಾಯಿ ತೆರಿಗೆ ಹಣ ಹಂಚಬೇಕಿತ್ತು. ಆದರೆ ಹೆಚ್ಚುವರಿಯಾಗಿ 47,541 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಹಣಕಾಸು ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಕೋವಿಡ್‌ ಅಲೆ ಬಳಿಕ ಆರ್ಥಿಕ ಉತ್ತೇಜನ ಕುರಿತು 15 ರಾಜ್ಯಗಳ ಮುಖ್ಯಮಂತ್ರಿಗಳು, ಜಮ್ಮು-ಕಾಶ್ಮೀರದ ಲೆ.ಗವರ್ನರ್‌ ಹಾಗೂ ಇತರೆ ರಾಜ್ಯಗಳ ಹಣಕಾಸು ಸಚಿವರ ಸಭೆ ಬಳಿಕ ಸಚಿವೆ ಸೀತಾರಾಮನ್‌ ಮಾತನಾಡಿದರು. ನಿನ್ನೆ ನಡೆದ ಸಭೆಯಲ್ಲಿ ಅಧಿಕಾರ ವಿಕೇಂದ್ರೀಕರಣದ ಮೊತ್ತವನ್ನು ಹೊರತುಪಡಿಸಿ, ರಾಜ್ಯಗಳಿಗೆ ಇನ್ನೂ ಒಂದು ಕಂತು ನೀಡಲಾಗುತ್ತದೆ ಎಂದು ವಿವರಿಸಿದರ.

ಬೆಳವಣಿಗೆಗಾಗಿ ಹಲವು ರಾಜ್ಯಗಳು ಹೊಸ ಆಲೋಚನೆಗಳನ್ನು ಹುಡುಕುತ್ತಿವೆ. ಏಕೆಂದರೆ ಹೂಡಿಕೆ, ಅಭಿವೃದ್ಧಿ ಮತ್ತು ಉತ್ಪಾದನೆಯಂತಹ ಹೆಚ್ಚಿನ ವಿಷಯಗಳಲ್ಲಿ ರಾಜ್ಯಗಳು ಮುಂಚೂಣಿಯಲ್ಲಿ ನಿಂತು ಮಾಡುತ್ತವೆ. ಇದಕ್ಕೆ ಕೇಂದ್ರದ ಬೆಂಬಲ ಯಾವಾಗಲೂ ಇರುತ್ತದೆ. ಕೆಲವು ಸಿಎಂಗಳು ರಾಜ್ಯಗಳ ಬಂಡವಾಳ ವೆಚ್ಚವನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ತೆರಿಗೆ ವಿಕೇಂದ್ರೀಕರಣದ ಒಂದು ಭಾಗವನ್ನು ಪಡೆಯಲು ಇದು ಸಹಾಯಕವಾಗಿದೆ. ಹೀಗಾಗಿ ಇದನ್ನು ತಕ್ಷಣವೇ ಮಾಡುವಂತೆ ಹಣಕಾಸು ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಪೆಟ್ರೋಲ್‌ 5 ರೂಪಾಯಿ ಹಾಗೂ ಡೀಸೆಲ್‌ ಬೆಲೆಯಲ್ಲಿ 10 ರೂಪಾಯಿ ಅಬಕಾರಿ ಸುಂಕ ಕಡಿತ ಮಾಡಲಾಗಿದೆ. ಇದರ ಸಂಪೂರ್ಣ ಹೊರೆಯನ್ನು ಕೇಂದ್ರ ಸರ್ಕಾರ ಭರಿಸುತ್ತದೆ.ಅಬಕಾರಿ ಸುಂಕ ಕಡಿತದಿಂದ ಯಾವುದೇ ರಾಜ್ಯ ಸರ್ಕಾರಕ್ಕೆ ನಷ್ಟವಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ 15 ರಾಜ್ಯಗಳ ಸಿಎಂಗಳು, ಜಮ್ಮು-ಕಾಶ್ಮೀರದ ಲೆ.ಗವರ್ನರ್‌ ಹಾಗೂ ಮೂರು ರಾಜ್ಯಗಳು ಡಿಸಿಎಂಗಳು ಸಭೆಯಲ್ಲಿ ಭಾಗಿಯಾಗಿದ್ದರು.

Last Updated : Nov 16, 2021, 4:57 AM IST

ABOUT THE AUTHOR

...view details