ನವದೆಹಲಿ: ಕುಸಿಯುತ್ತಿರುವ ಆರ್ಥಿಕತೆಯನ್ನ ಮೇಲೆತ್ತಲು ವೈಯಕ್ತಿಕ ಆದಾಯ ತೆರಿಗೆ ದರ ಕಡಿತಗೊಳಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು ನೀಡಿದ್ದಾರೆ.
ವೈಯಕ್ತಿಕ ಆದಾಯ ತೆರಿಗೆ ದರ ಕಡಿತ.. ನಿರ್ಮಲಾ ಸೀತಾರಾಮನ್ ಸುಳಿವು - ಆದಾಯ ತೆರಿಗೆ ದರ ಕಡಿತದ ಸೂಚನೆ
ಮುಂಬರುವ ಕೇಂದ್ರ ಬಜೆಟ್ನಲ್ಲಿ ವೈಯಕ್ತಿಕ ಆದಾಯ ತೆರಿಗೆ ದರ ಕಡಿತಗೊಳಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ಸೂಚನೆ ನಿಡಿದ್ದಾರೆ.
![ವೈಯಕ್ತಿಕ ಆದಾಯ ತೆರಿಗೆ ದರ ಕಡಿತ.. ನಿರ್ಮಲಾ ಸೀತಾರಾಮನ್ ಸುಳಿವು ವೈಯಕ್ತಿಕ ಆದಾಯ ತೆರಿಗೆ ದರ ಕಡಿತ,hints at personal income tax rate cut](https://etvbharatimages.akamaized.net/etvbharat/prod-images/768-512-5303265-thumbnail-3x2-brm.jpg)
2019 ಹಿಂದುಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮಾವೇಶದಲ್ಲಿ ಮಾತನಾಡಿರುವ ಅವರು, ವೈಯಕ್ತಿಕ ಆದಾಯ ತೆರಿಗೆಯ ಕಡಿತ ನಾವು ನೋಡುತ್ತಿರುವ ಹಲವು ವಿಷಯಗಳಲ್ಲಿ ಒಂದು ಎಂದು ಹೇಳಿದ್ದಾರೆ. ಯಾವಾಗ ಆದಾಯ ತೆರಿಗೆ ಇಳಿಕೆಯಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಬಜೆಟ್ ವರೆಗೂ ಕಾಯಿರಿ ಎಂದಿದ್ದಾರೆ.
ಈ ಮೂಲಕ ಮುಂಬರುವ 2021ರ ಬಜೆಟ್ನಲ್ಲಿ ಆದಾಯ ತೆರಿಗೆ ಮೇಲಿನ ಕಡಿತದ ಬಗ್ಗೆ ಹಣಕಾಸು ಸಚಿವೆ ಸುಳಿವು ನಿಡಿದ್ದಾರೆ. ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರವು ಕಳೆದ ಆರು ವರ್ಷಗಳ ಕನಿಷ್ಠ ಶೇ 4.5ಕ್ಕೆ ಕುಸಿದಿದ್ದು, ಆರ್ಥಿಕ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನ ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ.