ನವದೆಹಲಿ: ರಷ್ಯಾ - ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಬೆಲೆಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿ ದರ ಶೇ.10.3ರಿಂದ ಶೇ.8.5ಕ್ಕೆ ಕುಸಿತವಾಗಲಿದೆ ಎಂದು ರೇಟಿಂಗ್ ಏಜೆನ್ಸಿ ಫಿಚ್ ಮುನ್ಸೂಚನೆ ನೀಡಿದೆ.
ಕೋವಿಡ್ ರೂಪಾಂತರಿ ಓಮಿಕ್ರಾನ್ ತ್ವರಿತವಾಗಿ ಕಡಿಮೆಯಾಗುವುದರೊಂದಿಗೆ ಆರ್ಥಿಕತೆ ಹಳಿಗೆ ಮರಳುತ್ತಿದೆ. ಇದರಿಂದಾಗಿ ಈ ವರ್ಷದ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ವೇಗವಾಗಿ ವೃದ್ಧಿಸಲು ಸಹಕಾರಿಯಾಗಿದೆ ಎಂದು ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ದರದ ಶೇಕಡವಾರು ಅಂಕಗಳು 0.6 ರಿಂದ ಶೇ.8.7 ಏರಿಕೆಯಾಗಲಿದೆ ಎಂದು ಅಂದಾಜಿಸಿದೆ. ತೈಲ ಬೆಲೆ ಹೆಚ್ಚುತ್ತಿರುವುದರಿಂದ 2022-23ರ ಹಣಕಾಸು ವರ್ಷದ ಬೆಳವಣಿಗೆಯ ಮುನ್ಸೂಚನೆಯನ್ನು ಶೇ.8.5(-1.8)ಕ್ಕೆ ಕಡಿಮೆ ಮಾಡಲಾಗಿದೆ ಎಂದು ಪಿಚ್ ಹಣದುಬ್ಬರದ ಪರಿಷ್ಕರಣೆಯಲ್ಲಿ ತಿಳಿಸಿದೆ.