ಕರ್ನಾಟಕ

karnataka

ETV Bharat / business

ದೇಶಾದ್ಯಂತ ಕೊರೊನಾ ಪಾಸಿಟಿವ್​: 9 ಬ್ಯಾಂಕ್​ಗಳಿಗೆ ನೆಗೆಟಿವ್​ ಅಭಿಪ್ರಾಯ ಕೊಟ್ಟ ಫಿಚ್ ಏಜೆನ್ಸಿ - ಎಸ್​ಬಿಐ

ಫಿಚ್​ ರೇಟಿಂಗ್ ಏಜೆನ್ಸಿಯು ರಫ್ತು-ಆಮದು ಬ್ಯಾಂಕ್ ಆಫ್ ಇಂಡಿಯಾ (ಎಕ್ಸಿಮ್), ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಬರೋಡಾ (ನ್ಯೂಜಿಲೆಂಡ್), ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್‌ಗಳ ರೇಟಿಂಗ್​ ಪರಿಷ್ಕರಿಸಿದೆ.

Fitch
ಫಿಚ್

By

Published : Jun 22, 2020, 6:32 PM IST

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿದಂತೆ ಒಂಭತ್ತು ಬ್ಯಾಂಕ್​ಗಳ ರೇಟಿಂಗ್​ ಪರಿಷ್ಕರಿಸಲಾಗಿದೆ ಎಂದು ರೇಟಿಂಗ್​ ಏಜೆನ್ಸಿ ಫಿಚ್​ ತಿಳಿಸಿದೆ.

ಕೊರೊನಾ ವೈರಸ್ ಸಾಂಕ್ರಾಮಿಕವು ದೇಶದ ಆರ್ಥಿಕತೆ ಮೇಲೆ ಈಗಾಗಲೇ ಗಂಭೀರ ಪರಿಣಾಮ ಬೀರಿದೆ. ದೇಶಾದ್ಯಂತ ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದ ಸಾವರಿನ್​ ರೇಟಿಂಗ್ ಕಡಿಮೆಗೊಳಿಸಿದ ಬಳಿಕ ರೇಟಿಂಗ್ ಏಜೆನ್ಸಿ ಫಿಚ್​, ಭಾರತದ ಪ್ರಮುಖ ಬ್ಯಾಂಕ್​ಗಳ ಬಗ್ಗೆ ನೆಗೆಟಿವ್ ಅಭಿಪ್ರಾಯ ನೀಡಿದೆ.

ರೇಟಿಂಗ್ ಏಜೆನ್ಸಿಯು ರಫ್ತು-ಆಮದು ಬ್ಯಾಂಕ್ ಆಫ್ ಇಂಡಿಯಾ (ಎಕ್ಸಿಮ್), ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಬರೋಡಾ (ನ್ಯೂಜಿಲೆಂಡ್), ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್‌ಗಳ ರೇಟಿಂಗ್​ ಪರಿಷ್ಕರಿಸಿದೆ.

ಐಡಿಬಿಐ ಬ್ಯಾಂಕ್ ಲಿಮಿಟೆಡ್ (ಐಡಿಬಿಐ) ರೇಟಿಂಗ್ ದೃಢಪಡಿಸಿದ್ದರೂ ದೃಷ್ಟಿಕೋನವನ್ನು ನೆಗೆಟಿವ್​ನಲ್ಲಿ ಇರಿಸಿದೆ.

ಭಾರತದ ಆರ್ಥಿಕತೆಯ ಮೇಲೆ ಹೆಚ್ಚುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕದ ಪ್ರಭಾವದಿಂದಾಗಿ 2020ರ ಜೂನ್ 18ರಂದು ದೇಶದ 'ಬಿಬಿಬಿ-' ರೇಟಿಂಗ್​ಅನ್ನು ಸ್ಥಿರದಿಂದ ಋಣಾತ್ಮಕವಾಗಿ ಪರಿಷ್ಕರಿಸಿತ್ತು. ಇತ್ತೀಚೆಗೆ ಆರ್​ಬಿಐ ಬಡ್ಡಿ ದರಗಳನ್ನು ಕಡಿತಗೊಳಿಸಿ, ಎಲ್ಲಾ ಬ್ಯಾಂಕ್​ಗಳಿಗೆ ಅದನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿತ್ತು. ಬಹುತೇಕ ಬ್ಯಾಂಕ್​ಗಳು ಕೇಂದ್ರೀಯ ಬ್ಯಾಂಕ್ ಅನ್ವಯ ಬಡ್ಡಿ ದರ ಪರಿಷ್ಕರಣೆ ಮಾಡಿದ್ದವು.

ABOUT THE AUTHOR

...view details