ಕರ್ನಾಟಕ

karnataka

ETV Bharat / business

ಜನವರಿ ಅಂತ್ಯದ ವೇಳೆಗೆ ಹಣಕಾಸು ಕೊರತೆ 12.34 ಲಕ್ಷ ಕೋಟಿ ರೂ.ಗೆ ಏರಿಕೆ! - ಜನವರಿಯಲ್ಲಿ ಹಣಕಾಸಿನ ಕೊರತೆ

ಮಹಾಲೆಕ್ಕ ಪರಿಶೋಧಕರು (ಸಿಜಿಎ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಹಣಕಾಸಿನ ಕೊರತೆಯು 2021ರ ಜನವರಿ ಕೊನೆಯಲ್ಲಿ 12,34,004 ಕೋಟಿ ರೂ.ಯಷ್ಟಿದೆ. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ವಿಧಿಸಲಾದ ಲಾಕ್‌ಡೌನ್, ವ್ಯವಹಾರಿಕ ಚಟುವಟಿಕೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿತ್ತು. ಆದಾಯದ ಪ್ರಮಾಣವನ್ನು ನಿಧಾನಗೊಳಿಸಲು ಕಾರಣವಾಯಿತು.

Fiscal deficit
Fiscal deficit

By

Published : Feb 26, 2021, 7:53 PM IST

ನವದೆಹಲಿ:ಕೇಂದ್ರ ಸರ್ಕಾರದ ಹಣಕಾಸು ಕೊರತೆಯು ಪ್ರಸಕ್ತ ಹಣಕಾಸು ವರ್ಷದ ಜನವರಿ ಅಂತ್ಯಕ್ಕೆ 12.34 ಲಕ್ಷ ಕೋಟಿ ರೂ.ಯಷ್ಟು ಅಥವಾ ಪರಿಷ್ಕೃತ ಬಜೆಟ್ ಅಂದಾಜಿನ ಶೇ 66.8ಯಷ್ಟಿದೆ.

ಹಿಂದಿನ ಹಣಕಾಸು ವರ್ಷದ ಜನವರಿ ಅಂತ್ಯದಲ್ಲಿ ಹಣಕಾಸಿನ ಕೊರತೆಯು ಪರಿಷ್ಕೃತ ಅಂದಾಜು (ಆರ್‌ಇ) ಶೇ 128.5 ರಷ್ಟಿತ್ತು. ಮಾರ್ಚ್ ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣಕಾಸಿನ ಕೊರತೆಯು 18.48 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ 9.5ಕ್ಕೆ ತಲುಪುವ ಸಾಧ್ಯತೆಯಿದೆ.

ಮಹಾಲೆಕ್ಕ ಪರಿಶೋಧಕರು (ಸಿಜಿಎ) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಹಣಕಾಸು ಕೊರತೆಯು 2021ರ ಜನವರಿ ಕೊನೆಯಲ್ಲಿ 12,34,004 ಕೋಟಿ ರೂ.ಯಷ್ಟಿದೆ. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ವಿಧಿಸಲಾದ ಲಾಕ್‌ಡೌನ್, ವ್ಯವಹಾರಿಕ ಚಟುವಟಿಕೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿತ್ತು. ಆದಾಯದ ಪ್ರಮಾಣವನ್ನು ನಿಧಾನಗೊಳಿಸಲು ಕಾರಣವಾಯಿತು.

ಹಣಕಾಸು ಕೊರತೆ ಅಥವಾ ಖರ್ಚು ಮತ್ತು ಆದಾಯದ ನಡುವಿನ ಅಂತರವು ಈ ಹಣಕಾಸು ವರ್ಷದಲ್ಲಿ ಜುಲೈ ತಿಂಗಳಲ್ಲಿ ವಾರ್ಷಿಕ ಗುರಿ ಮಿರಿದೆ. 2021ರ ಜನವರಿ ತನಕ ಸರ್ಕಾರವು 12.83 ಲಕ್ಷ ಕೋಟಿ ರೂ. ಪಡೆದುಕೊಂಡಿದ್ದು, ಇದು ಆರ್‌ಇ 2020-21ರ ಶೇ 80ರಷ್ಟಿದೆ. ಇದು 11.01 ಲಕ್ಷ ಕೋಟಿ ರೂ. ತೆರಿಗೆ ಆದಾಯ ಹೊಂದಿದೆ.

ಇದನ್ನೂ ಓದಿ: ಈಗಿನ ಹಣದುಬ್ಬರ ಗುರಿ ಮುಂದಿನ 5 ವರ್ಷಗಳ ತನಕ ಸೂಕ್ತವಾಗಿದೆ: ಆರ್‌ಬಿಐ ವರದಿ

ತೆರಿಗೆ ಆದಾಯ ಸಂಗ್ರಹವು 2020-21ರ ಆರ್‌ಇಯ ಶೇ 82ರಷ್ಟಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 66.3ರಷ್ಟು ಆರ್‌ಇ (2019-20) ರಷ್ಟಿತ್ತು. ತೆರಿಗೆ ರಹಿತ ಆದಾಯವು ಆರ್‌ಇಯ ಶೇ 67ರಷ್ಟಿತ್ತು. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಅದು ಶೇ 73ರಷ್ಟಿತ್ತು.

ಸಿಜಿಎ ಅಂಕಿ- ಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಖರ್ಚು 25.17 ಲಕ್ಷ ಕೋಟಿ ರೂ. ಅಥವಾ ಆರ್‌ಇಯ ಶೇ 73ರಷ್ಟಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು ಇದೇ ಅವಧಿಯಲ್ಲಿ ಆರ್‌ಇಯ ಶೇ 84.1ರಷ್ಟಿತ್ತು.

ಈ ಹಣಕಾಸು ವರ್ಷದಲ್ಲಿ ಸರ್ಕಾರವು 2020ರ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಹಣಕಾಸಿನ ಕೊರತೆ ಆರಂಭದಲ್ಲಿ 7.96 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ 3.5ರಷ್ಟರಲ್ಲ ಇರಿಸಿಕೊಂಡಿದೆ.

2021-22ರ ಬಜೆಟ್​​ನಲ್ಲಿ ಪರಿಷ್ಕೃತ ಅಂದಾಜಿನ ಪ್ರಕಾರ, ಮಾರ್ಚ್ ಅಂತ್ಯದ ವರ್ಷದ ಹಣಕಾಸಿನ ಕೊರತೆಯು ಜಿಡಿಪಿಯ ಶೇ 9.5ರಷ್ಟು ಅಥವಾ 18,48,655 ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಕೋವಿಡ್​-19 ಸೋಂಕು ಮತ್ತು ಆದಾಯದಲ್ಲಿ ಮಿತವಾಗಿ ಇರುವುದರಿಂದ ಖರ್ಚಿನಲ್ಲಿ ವ್ಯಾಪಕ ಹೆಚ್ಚಳವಾಗಿದೆ. ಹಣಕಾಸಿನ ಕೊರತೆಯು 2019-20ರಲ್ಲಿ ಏಳು ವರ್ಷಗಳ ಗರಿಷ್ಠ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ 4.6ಕ್ಕೆ ಏರಿತು.

ABOUT THE AUTHOR

...view details