ನವದೆಹಲಿ :ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ 9.38 ಲಕ್ಷ ಕೋಟಿ ರೂಪಾಯಿಗಳ ವಿತ್ತೀಯ ಕೊರತೆ ಎದುರಾಗಲಿದೆ ಎಂದು ನಿಯಂತ್ರಕ ಜನರಲ್ ಆಫ್ ಅಕೌಂಟ್ಸ್-ಸಿಜಿಎ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಲ್ಲಿ ಹೇಳಲಾಗಿದೆ.
ಈ ಕೊರತೆಯೂ ವಾರ್ಷಿಕ ಗುರಿಯ ಶೇ.58.9ರಷ್ಟು ಆಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2022-23ನೇ ಸಾಲಿನ ಬಜೆಟ್‌ನಲ್ಲಿನ ಪರಿಷ್ಕೃತ ಅಂದಾಜಿನ ಪ್ರಕಾರ 15.91 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
ವಿತ್ತ ಸಚಿವರು ಈ ಹಿಂದೆ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು 15.07 ಲಕ್ಷ ಕೋಟಿ ರೂ. ಅಂದರೆ ಜಿಡಿಪಿಯ ಶೇ.6.8ರಷ್ಟು ಎಂದು ಅಂದಾಜಿಸಿದ್ದರು. ಪರಿಷ್ಕೃತ ಅಂದಾಜಿನಲ್ಲಿ, ಪ್ರಸಕ್ತ ಹಣಕಾಸು ವರ್ಷದ ವಿತ್ತೀಯ ಕೊರತೆಯನ್ನು 19.91 ಲಕ್ಷ ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ, ಇದು ಜಿಡಿಪಿಯ ಶೇ. 6.9ರಷ್ಟು ಆಗಿದೆ.
ವಿತ್ತೀಯ ಕೊರತೆಯು ಸರ್ಕಾರದ ಆದಾಯ ಮತ್ತು ವೆಚ್ಚದ ನಡುವಿನ ವ್ಯತ್ಯಾಸವಾಗಿದೆ. ಈ ವರ್ಷದ ಪರಿಷ್ಕೃತ ಅಂದಾಜಿನಲ್ಲಿ ಖರ್ಚು, ವೆಚ್ಚಗಳು 34.83 ಲಕ್ಷ ಕೋಟಿ ರೂ. ಆಗಲಿದೆ. ಆದರೆ, ಹಣಕಾಸು ಸಚಿವರು ತಮ್ಮ ಬಜೆಟ್‌ನಲ್ಲಿ 37.7 ಲಕ್ಷ ಕೋಟಿ ರೂ. ಎಂದು ಅಂದಾಜಿಸಿದ್ದಾರೆ. ಬಜೆಟ್ ಗಾತ್ರದ ಮೊತ್ತ 2.87 ಲಕ್ಷ ಕೋಟಿ ರೂ.ಹೆಚ್ಚಾಗಲಿದೆ.
ವೆಚ್ಚ ಮತ್ತು ಅದರ ಆದಾಯ ಸಂಗ್ರಹದ ನಡುವಿನ ಕೊರತೆಯನ್ನು ಪೂರೈಸಲು ಸರ್ಕಾರವು ಮಾರುಕಟ್ಟೆಗಳು ಮತ್ತು ಭಾರತದ ಸಾರ್ವಜನಿಕ ಖಾತೆಯ ಭಾಗವಾಗಿರುವ ಸಣ್ಣ ಉಳಿತಾಯ ಖಾತೆಗಳಂತಹ ಇತರ ಮೂಲಗಳಿಂದ ಹಣವನ್ನು ಎರವಲು ಪಡೆಯುತ್ತದೆ.
ಮಾರುಕಟ್ಟೆಯಿಂದ ಎರವಲು