ನವದೆಹಲಿ: ಕೋವಿಡ್ 19 ಸೋಂಕು ತಂದಿಟ್ಟ ಬಿಕ್ಕಟ್ಟು ಎದುರಿಸಲು ಕೇಂದ್ರ ಹಣಕಾಸು ಸಚಿವಾಲಯ ರಾಜ್ಯಗಳಿಗೆ 17,287 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಈ ಮೊತ್ತದಲ್ಲಿ 11,092 ಕೋಟಿ ರೂ. ಎಲ್ಲಾ ರಾಜ್ಯಗಳಿಗೆ ರಾಜ್ಯ ವಿಪತ್ತು ಪ್ರತಿಕ್ರಿಯೆ ತಗ್ಗಿಸುವ ನಿಧಿ (ಎಸ್‌ಡಿಆರ್‌ಎಂಎಫ್) ಒದಗಿಸಲಾಗಿದೆ.
ಆಂಧ್ರಪ್ರದೇಶ, ಅಸ್ಸೋಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡದ 14 ರಾಜ್ಯಗಳಿಗೆ 6,195 ಕೋಟಿ ರೂ. ಅನ್ನು 'ಪೋಸ್ಟ್ ಡಿವಲ್ಯೂಷನ್ ಕಂದಾಯ ಕೊರತೆ ಅನುದಾನ' ಬಿಡುಗಡೆ ಮಾಡಲಾಗಿದೆ.
ಕೋವಿಡ್19 ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಹಣಕಾಸು ಸಂಪನ್ಮೂಲವನ್ನು ಹೆಚ್ಚಿಸಲು ಭಾತದ ವಿವಿಧ ರಾಜ್ಯಗಳಿಗೆ ಇಂದು ಒಟ್ಟು 17,287.08 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
14 ರಾಜ್ಯಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸುಗಳ ಅಡಿ 'ಆದಾಯ ಕೊರತೆ ಅನುದಾನ' ಕಾರಣ 6,195.08 ಕೋಟಿ ರೂ. ನೀಡಲಾಗಿದೆ.
ಎಸ್‌ಡಿಆರ್‌ಎಂಎಫ್‌ನ ಮೊದಲ ಕಂತಿನ ಕೇಂದ್ರ ಪಾಲಿನ ಸುಧಾರಿತ ಪಾವತಿಯಾಗಿ ಉಳಿದ 11,092 ಕೋಟಿ ರೂ.ಯಲ್ಲಿ ಮಹಾರಾಷ್ಟ್ರಕ್ಕೆ 1,611 ಕೋಟಿ ರೂ., ಉತ್ತರ ಪ್ರದೇಶಕ್ಕೆ 966 ಕೋಟಿ ರೂ., ಮಧ್ಯಪ್ರದೇಶಕ್ಕೆ 910 ಕೋಟಿ ರೂ., ಬಿಹಾರಕ್ಕೆ 708 ಕೋಟಿ ರೂ, ಒಡಿಶಾಗೆ 802 ಕೋಟಿ ರೂ., ರಾಜಸ್ಥಾನಕ್ಕೆ 740.50 ಕೋಟಿ ರೂ. ಮತ್ತು ಪಶ್ಚಿಮ ಬಂಗಾಳಕ್ಕೆ 505.50 ಕೋಟಿ ರೂ. ನೀಡಲಾಗಿದೆ.