ಕರ್ನಾಟಕ

karnataka

ETV Bharat / business

ಕರ್ನಾಟಕವನ್ನು ಮತ್ತೆ ಕಡೆಗಣಿಸಿದ ಕೇಂದ್ರ.. 14 ರಾಜ್ಯಗಳಿಗೆ ₹6,195 ಕೋಟಿ ಅನುದಾನ

ಈ ಅನುದಾನ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಆ ರಾಜ್ಯಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಟ್ವೀಟ್​ನಲ್ಲಿ ತಿಳಿಸಿದೆ.

Finance Ministry
ಹಣಕಾಸು ಸಚಿವಾಲಯ

By

Published : Jun 10, 2020, 9:36 PM IST

ನವದೆಹಲಿ :ನೆರೆ ಪರಿಹಾರ ಸೇರಿದಂತೆ ಇತರೆ ವಿಚಾರಗಳಲ್ಲಿ ಕರ್ನಾಟಕವನ್ನು ಕಡೆಗಣಿಸಿಕೊಂಡು ಬರುತ್ತಿರುವ ಕೇಂದ್ರದ ಮಲತಾಯಿ ಧೋರಣೆ ಮತ್ತೆ ಮುಂದುವರಿದಿದೆ. ಕೊರೊನಾ ಮತ್ತು ಲಾಕ್​ಡೌನ್​ನಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದಂತೆ ಕಂಡು ಬರುತ್ತಿದೆ.

15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದಂತೆ ಆದಾಯ ಕೊರತೆ ಅನುದಾನದ 3ನೇ ಸಮ ಮಾಸಿಕ ಕಂತಿನಡಿ 2020ರ ಜೂನ್ 10ರಂದು 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಈ ಅನುದಾನ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಆ ರಾಜ್ಯಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಟ್ವೀಟ್​ನಲ್ಲಿ ತಿಳಿಸಿದೆ.

ಇದಕ್ಕೂ ಮೊದಲು ಏಪ್ರಿಲ್ 3 ಮತ್ತು ಮೇ 11ರಂದು ಹಣಕಾಸು ಸಚಿವಾಲಯವು ಆಂಧ್ರಪ್ರದೇಶ, ಅಸ್ಸೋಂ, ಹಿಮಾಚಲಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ 14 ರಾಜ್ಯಗಳಿಗೆ ಹಂಚಿಕೆಯ ನಂತರದ ಆದಾಯ ಕೊರತೆ ಅನುದಾನದ ಮೊದಲ ಮತ್ತು 2ನೇ ಕಂತಿನ ಮೊತ್ತ ಬಿಡುಗಡೆ ಮಾಡಿದೆ.

ABOUT THE AUTHOR

...view details