ಕರ್ನಾಟಕ

karnataka

ETV Bharat / business

ಸೌರ ಫಲಕಗಳ ಮೇಲೆ ಶೇ 40ರಷ್ಟು ಕಸ್ಟಮ್ ಸುಂಕ ವಿಧಿಸಲು ಹಣಕಾಸು ಸಚಿವಾಲಯ ಅಸ್ತು - ಸೌರ ಫಲಕಗಳ ಮೇಲೆ ಕಸ್ಟಮ್ಸ್ ಸುಂಕ

2022ರ ಮಾರ್ಚ್ 31ರವರೆಗೆ ಸೌರ ಮಾಡ್ಯೂಲ್‌ ಮತ್ತು ಕೋಶಗಳ ಮೇಲೆ ಬಿಸಿಡಿ ದರ ಶೂನ್ಯವಾಗಿರುತ್ತದೆ. 2022ರ ಏಪ್ರಿಲ್ 1ರಿಂದ ಬಿಸಿಡಿ ದರ ಕ್ರಮವಾಗಿ ಶೇ 40 ಮತ್ತು ಶೇ 20ರಷ್ಟು ಇರುತ್ತದೆ ಎಂದಿದೆ.

Finance ministry
Finance ministry

By

Published : Mar 10, 2021, 8:01 PM IST

ನವದೆಹಲಿ:2022ರ ಏಪ್ರಿಲ್ 1 ರಿಂದ ಸೌರ ಫಲಕಗಳ (ಮಾಡ್ಯೂಲ್‌) ಮೇಲೆ ಶೇ 40ರಷ್ಟು ಮತ್ತು ಸೌರ ಕೋಶ​ಗಳ (ಸೇಲ್) ಮೇಲೆ ಶೇ 20ರಷ್ಟು ಮೂಲ ಕಸ್ಟಮ್ಸ್​ ಸುಂಕ (ಬಿಸಿಡಿ) ವಿಧಿಸುವ ಪ್ರಸ್ತಾಪಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) ತಿಳಿಸಿದೆ.

ಸೌರ ಕೋಶಗಳು ಮತ್ತು ಮಾಡ್ಯೂಲ್‌ಗಳ ಮೇಲೆ ಬಿಸಿಡಿ ವಿಧಿಸುವ ಪ್ರಸ್ತಾಪವನ್ನು ಹಣಕಾಸು ಸಚಿವಾಲಯವು ಒಪ್ಪಿಕೊಂಡಿದೆ ಎಂದು ಎಂಎನ್‌ಆರ್‌ಇಯ ಹೇಳಿದೆ.

2022ರ ಮಾರ್ಚ್ 31ರವರೆಗೆ ಸೌರ ಮಾಡ್ಯೂಲ್‌ಮತ್ತು ಕೋಶಗಳ ಮೇಲೆ ಬಿಸಿಡಿ ದರ ಶೂನ್ಯವಾಗಿರುತ್ತದೆ. 2022ರ ಏಪ್ರಿಲ್ 1ರಿಂದ ಬಿಸಿಡಿ ದರ ಕ್ರಮವಾಗಿ ಶೇ 40 ಮತ್ತು ಶೇ 20ರಷ್ಟು ಇರುತ್ತದೆ ಎಂದಿದೆ.

ಇದನ್ನೂ ಓದಿ: 11 ತಿಂಗಳಲ್ಲಿ 2 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಮರು ಪಾವತಿ

ಎಲ್ಲಾ ಆರ್‌ಇ (ನವೀಕರಿಸಬಹುದಾದ ಇಂಧನ) ಅನುಷ್ಠಾನಗೊಳಿಸುವ ಏಜೆನ್ಸಿಗಳು ಮತ್ತು ಇತರ ಸ್ಟೇಕ್​ಹೋಲ್ಡರ್​​ಗಳಿಗೆ ಕಸ್ಟಮ್ಸ್​ ದರಗಳನ್ನು ಗಮನಿಸಲು ಮತ್ತು ನಿಬಂಧನೆಗಳನ್ನು ತಿಳಿದುಕೊಳ್ಳಲು ಸಚಿವಾಲಯ ನಿರ್ದೇಶಿಸಿದೆ.

ABOUT THE AUTHOR

...view details