ಕರ್ನಾಟಕ

karnataka

ETV Bharat / business

ಮತ್ತೊಂದು ಸುತ್ತಿನ ವಿತ್ತೀಯ ಸುಧಾರಣೆ ಸುಳಿವು ನೀಡಿದ ಹಣಕಾಸು ಸಚಿವೆ..

ಕಾರ್ಪೊರೇಟ್​ ತೆರಿಗೆ ಕಡಿತ, ಬ್ಯಾಂಕ್​ಗಳ ವಿಲೀನ, ಬ್ಯಾಂಕ್​ಗಳಿಗೆ ಬಂಡವಾಳ ನಿಧಿ ಘೋಷಣೆಯ ಬಳಿಕ ಮತ್ತೊಂದು ಸುತ್ತಿನ ಆರ್ಥಿಕ ಸುಧಾರಣೆ ತರುವುದಾಗಿ ವಿತ್ತ ಸಚಿವೆ ಭಾರತ-ಸ್ವೀಡನ್​ ಆರ್ಥಿಕ ಶೃಂಗಸಭೆಯಲ್ಲಿ ಸುಳಿವು ನೀಡಿದ್ದಾರೆ.

Finance Minister
ಹಣಕಾಸು ಸಚಿವೆ

By

Published : Dec 3, 2019, 3:04 PM IST

ನವದೆಹಲಿ: ಭಾರತವನ್ನು ಆಕರ್ಷಕ ಮತ್ತು ಹೂಡಿಕೆಯ ಸ್ನೇಹಿ ತಾಣವನ್ನಾಗಿಸಲು ಹೆಚ್ಚಿನ ಸುಧಾರಣೆಗಳಿಗೆ ಸರ್ಕಾರವು ಮುಕ್ತವಾಗಿದೆ ಎಂದುಕೇಂದ್ರಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರತ-ಸ್ವೀಡನ್​ ವ್ಯವಹಾರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆ ಕಡಿತ ಸೇರಿ ಇತರೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪುನರುಚ್ಚರಿಸಿದರು.

ಮುಂದಿನ ದಿನಗಳಲ್ಲಿ ಕೇಂದ್ರವು ಬ್ಯಾಂಕಿಂಗ್, ಗಣಿಗಾರಿಕೆ, ವಿಮೆಯಂತಹ ಇತರ ಕ್ಷೇತ್ರಗಳ ಸುಧಾರಣೆಗಳಿಗೆ ಬದ್ಧವಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ಸ್ವೀಡಿಷ್ ಸಂಸ್ಥೆಗಳನ್ನು ಆಹ್ವಾನಿಸಿದರು. 'ಕೇಂದ್ರವು ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಸುಮಾರು 100 ಲಕ್ಷ ಕೋಟಿ ರೂ. ವಿನಿಯೋಗಿಸಲಿದೆ' ಎಂದು ತಿಳಿಸಿದರು.

ABOUT THE AUTHOR

...view details