ನವದೆಹಲಿ :ಹಿರಿಯ ಬ್ಯಾಂಕರ್ ಉದಯ್ ಕೊಟಾಕ್ ಅವರು ಸಾಲ ನಿಷೇಧದ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿದೆ. 'ಇದು ಬ್ಯಾಂಕ್ಗಳು ತೆಗೆದುಕೊಳ್ಳಬೇಕಾದ ವಾಣಿಜ್ಯ ನಿರ್ಧಾರ' ಎಂದು ಹೇಳಿದ್ದಾರೆ.
ಕೊನೆಯದಾಗಿ ಪ್ರಜ್ಞೆ ಮೇಲುಗೈ ಸಾಧಿಸಿದೆ. ಇದೊಂದು ವಾಣಿಜ್ಯಾತ್ಮಕ ನಿರ್ಧಾರವಾಗಿದೆ. ಅದನ್ನು ಬ್ಯಾಂಕ್ಗಳಿಗೆ ಬಿಡಬೇಕು ಎಂದು ಕೊಟಾಕ್ ಮಹೀಂದ್ರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಟಿವಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
2020ರ ಆಗಸ್ಟ್ 31ರ ನಂತರ ಸಾಲದ ನಿಷೇಧ ವಿಸ್ತರಿಸದಿರುವ ಕೇಂದ್ರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ನಿರಾಕರಿಸಿದೆ. ಇದು ಪಾಲಿಸಿ ನಿರ್ಧಾರ ಎಂದು ಕೋರ್ಟ್ ಹೇಳಿದೆ.