ಕರ್ನಾಟಕ

karnataka

ETV Bharat / business

ಹದಗೆಟ್ಟ ಆರ್ಥಿಕತೆಗೆ ಅಮೆರಿಕದ ಫೆಡರಲ್ ಹೊಸ ಚುಚ್ಚುಮದ್ದು ಘೋಷಣೆ ಸಾಧ್ಯತೆ!

ಅಧ್ಯಕ್ಷ ಜೆರೋಮ್ ಪೊವೆಲ್ ಆರ್ಥಿಕ ವ್ಯವಸ್ಥೆಗೆ ನೆರವಿನ ಪ್ರಯತ್ನವಾಗಿ ಹಾಗೂ ವೈರಸ್ ಪ್ರೇರಿತ ಹಿಂಜರಿತ ಎದುರಿಸಲು ಕಡಿಮೆ ದರದ ಒಂಬತ್ತು ಸಾಲ ನೀಡಿಕೆಯ ಕಾರ್ಯಕ್ರಮಗಳ ಜೊತೆ ಇನ್ನಷ್ಟು ವಿವರಣೆ ಸೇರಿಸುವ ಸಾಧ್ಯತೆ ಇದೆ.

Federal Reserve
ಫೆಡರಲ್ ರಿಸರ್ವ್

By

Published : Apr 29, 2020, 6:00 PM IST

Updated : Apr 29, 2020, 6:57 PM IST

ವಾಷಿಂಗ್ಟನ್: 1930ರ ದಶಕದ ನಂತರ ಅಮೆರಿಕದ ಆರ್ಥಿಕತೆ ಅತ್ಯಂತ ಹೀನಾಯ ಬಿಕ್ಕಟ್ಟಿಗೆ ತಲುಪಿದೆ. ಫೆಡರಲ್ ರಿಸರ್ವ್​ನ ವಿತ್ತೀಯ ನೀತಿ ನಿರೂಪಕರು, ಈಗಿನ ಹಾನಿ ಇನ್ನಷ್ಟು ಹದಗೆಡದಂತೆ ತಡೆಯಲು ಅಗತ್ಯ ನೆರವು ಘೋಷಿಸುವ ಭರವಸೆ ಇರಿಸಿಕೊಳ್ಳಲಾಗಿದೆ.

ಇಷ್ಟೆಲ್ಲಾ ಆದರೂ ಫೆಡ್, ಯಾವುದೇ ಹೊಸ ತುರ್ತು ಕಾರ್ಯಕ್ರಮಗಳನ್ನು ಅನಾವರಣ ಮಾಡುವ ಸಾಧ್ಯತೆ ಇಲ್ಲ. ಆದರೂ ಅಧ್ಯಕ್ಷ ಜೆರೋಮ್ ಪೊವೆಲ್ ಆರ್ಥಿಕ ವ್ಯವಸ್ಥೆಗೆ ನೆರವಿನ ಪ್ರಯತ್ನವಾಗಿ ಹಾಗೂ ವೈರಸ್ ಪ್ರೇರಿತ ಹಿಂಜರಿತ ಎದುರಿಸಲು ಕಡಿಮೆ ದರದ ಒಂಬತ್ತು ಸಾಲ ನೀಡಿಕೆಯ ಕಾರ್ಯಕ್ರಮಗಳ ಜೊತೆ ಇನ್ನಷ್ಟು ವಿವರಣೆ ಸೇರಿಸುವ ಸಾಧ್ಯತೆ ಇದೆ.

ಕೇಂದ್ರೀಯ ಬ್ಯಾಂಕ್ ಈಗಾಗಲೇ ತನ್ನ ಮಾನದಂಡದ ಬಡ್ಡಿ ದರ ಸೊನ್ನೆಯ ಸಮೀಪಕ್ಕೆ ಇಳಿಕೆ ಮಾಡಿದೆ. ಸಾಲದ ಹರಿವು ಸರಾಗವಾಗಿಸಲು ಹಣಕಾಸು ಮಾರುಕಟ್ಟೆಗಳಿಗೆ ನಗದು ಪಂಪ್ ಮಾಡಲು ಖಜಾನೆ ಮತ್ತು ಅಡಮಾನ ಬೆಂಬಲಿತ ಭದ್ರತಾ ಪತ್ರಗಳ ಖರೀದಿ ಮಾಡಿದೆ. ಕಾರ್ಪೊರೇಟ್ ಬಾಂಡ್​ಗಳು ಖರೀದಿಸಲಿದೆ. ಬಳಿಕ ರಾಜ್ಯಗಳಿಗೆ ಮತ್ತು ನಗರಗಳಿಗೆ ಸಾಲ ನೀಡಲಿದೆ ಎಂದು ಹೇಳಿತ್ತು.

ಮಾರ್ಚ್ ಮಧ್ಯಭಾಗದಲ್ಲಿ ಅಮೆರಿಕ ಆರ್ಥಿಕತೆಯ ಬಹಳಷ್ಟು ಭಾಗಗಳಲ್ಲಿ ಸೋಂಕಿನ ಪರಿಣಾಮ ಹಬ್ಬಿದ ಕಾರಣ, 26,000,000(2.6ಕೋಟಿ)ಗೂ ಅಧಿಕ ಅಮೆರಿಕನ್ನರು ನಿರುದ್ಯೋಗ ಪ್ರಯೋಜನಗಳಿಗೆ ಅರ್ಜಿ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ಚಿಲ್ಲರೆ ವಹಿವಾಟು ಸಹ ದಾಖಲೆಯ ಪ್ರಮಾಣದಲ್ಲಿ ಇಳಿಕೆಯಾಯಿತು. ಮನೆ ಮಾರಾಟ ಸಹ ಪಾತಾಳ ಕಂಡಿತ್ತು.

ಪ್ರಸಕ್ತ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ 30- ಶೇ 40ರಷ್ಟು ನಡುವೆ ವಾರ್ಷಿಕ ದರದಲ್ಲಿ ಕುಂಠಿತ ಆಗಬಹುದು. ನಿರುದ್ಯೋಗ ದರವು ಏಪ್ರಿಲ್​ಗೆ ಶೇ 20ರಷ್ಟು ಏರಿಕೆ ಆಗಬಹುದು ಎಂದು ಅರ್ಥಶಾಸ್ತ್ರಜ್ಞರು ಮುನ್ಸೂಚನೆ ನೀಡಿದ್ದಾರೆ.

ಈ ತಿಂಗಳ ಹಿಂದೆ 2,3 ಟ್ರಿಲಿಯನ್ ಡಾಲರ್​ ಸಾಲ ನೀಡಿಕೆ ಕಾರ್ಯಕ್ರಮದ ಅಡಿ 500 ಬಿಲಿಯನ್ ಡಾಲರ್​ರವರೆಗೆ ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಹೊರಡಿಸಿರುವ ಮುನ್ಸಿಪಲ್ ಬಾಂಡ್​ಗಳನ್ನು ಖರೀದಿಸುವುದಾಗಿ ಫೆಡ್ ಹೇಳಿದೆ. ಅಲ್ಲದೇ ಒಂದು ಮುಖ್ಯ ಸ್ಟ್ರೀಟ್ ಲೆಂಡಿಂಗ್ ಯೋಜನೆ ಆವಿಷ್ಕರಿಸಿತು. 10,000 ಉದ್ಯೋಗಿಗಳ ಪೈಕಿ ಮಧ್ಯಮ ಗಾತ್ರದ ಕಂಪನಿಗಳಿಗೆ 600 ಬಿಲಿಯನ್ ಡಾಲರ್​ ಸಾಲ ನೀಡಲಿದೆ ಎಂದಿತ್ತು. ಈ ಸಾಲಗಳು ಸರ್ಕಾರದ ಸಣ್ಣ ಉದ್ಯಮ ಸಾಲ ನೀಡುವ ಯೋಜನೆಗಳ ದೊಡ್ಡ ಕಂಪನಿಗಳನ್ನು ಬೆಂಬಲಿಸಲು 500ಕ್ಕಿಂತ ಕಡಿಮೆ ಕೆಲಸಗಾರರನ್ನು ಗುರಿಯಾಗಿಸಿಕೊಂಡಿತ್ತು.

Last Updated : Apr 29, 2020, 6:57 PM IST

ABOUT THE AUTHOR

...view details