ನವದೆಹಲಿ:ಮಾಸಿಕ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು 2021ರ ಫೆಬ್ರವರಿ ಮಾಸಿಕದಲ್ಲಿ ಶೇ 4.17 (ತಾತ್ಕಾಲಿಕ) ಆಗಿದ್ದು, ಹಿಂದಿನ ವರ್ಷ ಇದೇ ತಿಂಗಳಲ್ಲಿ ಶೇ 2.26ರಷ್ಟಿತ್ತು ಎಂದು ಸರ್ಕಾರದ ಅಧಿಕೃತ ಅಂಕಿಅಂಶಗಳು ತಿಳಿಸಿವೆ. ಇದು ಕಳೆದ 27 ತಿಂಗಳ ಅವಧಿಯಲ್ಲಿ ದಾಖಲಾದ ಗರಿಷ್ಠ ಹಣದುಬ್ಬರವಾಗಿದೆ.
ಸರಕುಗಳ ಬೆಲೆ ಏರಿಕೆ ಆಗಿದ್ದರಿಂದ ಭಾರತದಲ್ಲಿ ಸಗಟು ಹಣದುಬ್ಬರವು ಎರಡು ವರ್ಷಗಳಿಗಿಂತ ಹೆಚ್ಚು ಅವಧಿಯಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು 2021ರ ಫೆಬ್ರವರಿಯಲ್ಲಿ ಶೇ 4.17ರಷ್ಟಿದೆ. 2018ರ ನವೆಂಬರ್ನಲ್ಲಿ ಗರಿಷ್ಠ ಪ್ರಮಾಣದಲ್ಲಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶದಲ್ಲಿ ಹೇಳಿದೆ.
2021ರ ಫೆಬ್ರವರಿ ಆಂತರಿಕ ಹಣದುಬ್ಬರ:
ತಯಾರಿಸಿದ ಉತ್ಪನ್ನಗಳ ಹಣದುಬ್ಬರವು ಜನವರಿಯಲ್ಲಿನ ಶೇ 5.13ರಷ್ಟಕ್ಕೆ ಹೋಲಿಸಿದರೆ ಶೇ 5.81ರಷ್ಟಿದೆ.