ನವದೆಹಲಿ :ಫೆಬ್ರವರಿ 15ರ ಮಧ್ಯರಾತ್ರಿಯಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲ್ಲ ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಏನಿದು ಫಾಸ್ಟ್ ಟ್ಯಾಗ್? ಇದನ್ನು ಖರೀದಿಸಲು ಏನು ಮಾಡಬೇಕು? ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಸರಣಿ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರಗಳು.
ಏನಿದು ಫಾಸ್ಟ್ ಟ್ಯಾಗ್?:ಟೋಲ್ ಪ್ಲಾಜಾಗಳಲ್ಲಿನ ಟ್ರಾಫಿಕ್ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಸೌಲಭ್ಯ ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್ ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಟೋಲ್ ಶುಲ್ಕವನ್ನು ನಗದು ರಹಿತವಾಗಿ ಪಾವತಿಸಬಹುದು.
ಶುಲ್ಕ ಪಾವತಿ ಮತ್ತು ಕಾರ್ಯನಿರ್ವಹಣೆ ಹೇಗೆ?:ರೆಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್(ಆರ್ಎಫ್ಐಡಿ) ಆಧಾರಿತ ಫಾಸ್ಟ್ ಟ್ಯಾಗ್ ವಾಹನದ ಮುಂಭಾಗದ ಗ್ಲಾಸ್‍ಗೆ ಅಂಟಿಸಬೇಕು. ಇದು ರೆಡಿಯೋ ಫ್ರಿಕ್ವೆನ್ಸಿ ಮೂಲಕ ಸ್ಕ್ಯಾನ್ ಆಗಿ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗಲಿದೆ.
ಇದರಿಂದ ಏನು ಲಾಭ?:ನೂತನ ವ್ಯವಸ್ಥೆಯಿಂದ ಟೋಲ್ ಪ್ಲಾಜಾದಲ್ಲಿ ವಾಹನಗಳು ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಹೆದ್ದಾರಿಗಳಲ್ಲಿ ಸಂಭವಿಸುವ ಸಂಚಾರ ದಟ್ಟಣೆ ಇಲ್ಲವಾಗುತ್ತದೆ. ಇದರಿಂದ ಚಾಲಕರ ಸಮಯ ಉಳಿತಾಯವಾಗಲಿದೆ. ವಾಣಿಜ್ಯ ವಾಹನಗಳ ಸಂಚಾರ ಮಾಹಿತಿ ಲಭ್ಯವಾಗಿ ತೆರಿಗೆ ವಂಚನೆಗೆ ಕಡಿವಾಣ ಬೀಳಲಿದೆ.
* ಟೋಲ್ ವಹಿವಾಟಿಗೆ ಹಣ ಸಾಗಿಸುವ ಅಗತ್ಯವಿಲ್ಲ
* ಸುಲಭ ಪಾವತಿ
* ಸಮಯದ ಉಳಿತಾಯ
* ಆನ್‌ಲೈನ್ ರೀಚಾರ್ಜ್
* ಟೋಲ್ ವಹಿವಾಟು ಇಳಿಕೆ
* ಕಡಿಮೆ ಬ್ಯಾಲೆನ್ಸ್ಗೆ ಇಮೇಲ್, ಎಸ್ಎಂಎಸ್ ಎಚ್ಚರಿಕೆ
* ಆನ್‌ಲೈನ್ ಪೋರ್ಟಲ್
ಫಾಸ್ಟ್ ಟ್ಯಾಗ್ ಖರೀದಿ ಎಲ್ಲಿ? :ಫಾಸ್ಟ್ ಟ್ಯಾಗ್‌ನ ವಿವಿಧ ಬ್ಯಾಂಕ್ಗಳು, ಐಹೆಚ್‌ಎಂಸಿಎಲ್/ಎನ್‌ಹೆಚ್‌ಎಐ ಸ್ಥಾಪಿಸಿದ 28,500ಕ್ಕೂ ಹೆಚ್ಚು ಪಾಯಿಂಟ್ ಆಫ್ ಸೇಲ್ನಂತಹ (ಪಿಒಪಿ) ಸ್ಥಳಗಳಿಂದ ಖರೀದಿಸಬಹುದು. ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಪ್ಲಾಜಾ, ಆರ್‌ಟಿಒ, ಸಾಮಾನ್ಯ ಸೇವಾ ಕೇಂದ್ರ, ಸಾರಿಗೆ ಕೇಂದ್ರ, ಬ್ಯಾಂಕ್ ಶಾಖೆ, ಆಯ್ದ ಪೆಟ್ರೋಲ್ ಪಂಪ್‌ಗಳಲ್ಲೂ ಲಭ್ಯವಿದೆ.
ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮುಂತಾದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ಗಳ 12,000ಕ್ಕೂ ಹೆಚ್ಚು ಶಾಖೆಗಳಲ್ಲಿ ದೊರೆಯುತ್ತದೆ. ಹತ್ತಿರದ ಪಾಯಿಂಟ್-ಆಫ್-ಸೇಲ್ ಸ್ಥಳಗಳಿಗಾಗಿ ಹುಡುಕಲು 'ಮೈ ಫಾಸ್ಟ್‌ಟ್ಯಾಗ್ ಅಪ್ಲಿಕೇಷನ್' (My FASTag App) ಡೌನ್‌ಲೋಡ್ ಮಾಡಬಹುದು ಅಥವಾ www.ihmcl.comಗೆ ಭೇಟಿ ನೀಡಿ ಅಥವಾ 1033 NH ಸಂಖ್ಯೆಗೆ ಕರೆ ಮಾಡಬಹುದು.
ಶುಲ್ಕ
ವಂತಿಕೆ ಶುಲ್ಕ: ₹ 100
ಮರುಪಾವತಿಯ ಭದ್ರತಾ ಠೇವಣಿ: ₹ 200-400
ಮರುಪಾವತಿಯ ಭದ್ರತಾ ಠೇವಣಿಯು ವಾಹನದ ಗಾತ್ರ ಅವಲಂಬಿಸಿ ₹ 400 ಇರಲಿದೆ
ಫಾಸ್ಟ್ ಟ್ಯಾಗ್ ರೀಚಾರ್ಜ್ ಮಾಡುವುದು ಹೇಗೆ?:ರೀಚಾರ್ಜ್ ಸೌಲಭ್ಯಕ್ಕಾಗಿ ಎನ್‌ಹೆಚ್‌ಎಐ/ಐಹೆಚ್ಎಂಸಿಎಲ್ಯು ಯುಪಿಐ ರೀಚಾರ್ಜ್ ಸೌಲಭ್ಯವನ್ನು My FASTag App ಅಥವಾ ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್, ಯುಪಿಐ ಮತ್ತು ಇತರೆ ಪಾವತಿ ವಿಧಾನಗಳ ಮೂಲಕ ಆಯಾ ಬ್ಯಾಂಕ್ನ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ರೀಚಾರ್ಜ್ ಮಾಡಬಹುದು.
ದಂಡ ಪಾವತಿ ಎಷ್ಟು? :ಫೆಬ್ರವರಿ 15ರ ಮಧ್ಯರಾತ್ರಿಯಿಂದ ಫಾಸ್ಟ್‌ಟ್ಯಾಗ್ ಇರದ ವಾಹನಗಳ ಮಾಲೀಕರು. ಚಾಲಕರು ಟೋಲ್ ಮೊತ್ತದ ಎರಡು ಪಟ್ಟು ದಂಡ ಶುಲ್ಕ ಪಾವತಿಸಬೇಕಾಗುತ್ತದೆ.
ಬೇಕಾದ ದಾಖಲಾತಿಗಳು? :
ವಾಹನ ನೋಂದಣಿ ದಾಖಲೆ ಪತ್ರ
ವಾಹನ ಮಾಲೀಕರ ಪಾಸ್ ಪೋರ್ಟ್ ಸೈಜ್ ಫೋಟೋ
ವಾಹನ ಮಾಲೀಕತ್ವಕ್ಕೆ ನೀಡಿದ ಕೆವೈಸಿ ದಾಖಲೆ
ಇತರೆ ದಾಖಲೆಗಳು :
ಭಾವಚಿತ್ರ ಹೊಂದಿರುವ ವಿಳಾಸ ದಾಖಲೆ
ವಾಹನ ಪರವಾನಿಗೆ, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಮತದಾನದ ಗುರುತಿನ ಚೀಟಿ, ಆಧಾರ್ ಕಾರ್ಡ್
ಫಾಸ್ಟ್ ಟ್ಯಾಗ್ ಬಣ್ಣಗಳು
ಕಾರು/ಜೀಪ್/ವ್ಯಾನ್- ವ್ಯಾಲೆಟ್
ಟಾಟಾ ಏಸ್ ಮತ್ತು ಮಿನಿ ಲೈಟ್ ಕಮರ್ಷಿಯಲ್ ವೆಹಿಕಲ್- ವೈಲೆಟ್