ಕರ್ನಾಟಕ

karnataka

ETV Bharat / business

'ಆಹಾರ ಯೋಧ ರೈತ'ರನ್ನು ಮರೆತ ಕೇಂದ್ರ: ರೈತ ಸಂಘಟನೆಯಿಂದ ಮುಷ್ಕರ - ಆಹಾರ ಯೋಧರು

ಎಐಕೆಎಸ್‌ಸಿಸಿ ದೇಶಾದ್ಯಂತ 250ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಹೊಂದಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಅವಧಿಯಲ್ಲಿ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ನಿರಂತರವಾಗಿ ಕಡೆಗಣಿಸುತ್ತಾ ಬರುತ್ತಿದೆ. ಹೀಗಾಗಿ, ತಮ್ಮ ಬೇಡಿಕೆಗಳನ್ನುಈಡೇರಿಸುವಂತೆ ಆಗ್ರಹಿಸಿ ಸಾಮಾಜಿಕ ಮಾಧ್ಯಮ ಮೂಲಕ ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Kisan Sangharsh
ಕಿಸಾನ್ ಸಂಘರ್ಷ

By

Published : May 4, 2020, 7:33 PM IST

ನವದೆಹಲಿ: ಕೊರೊನಾದಂತಹ ಕಷ್ಟದ ಪರಿಸ್ಥಿತಿಯಲ್ಲಿ ದೇಶದ ರೈತರಿಂದ ಆಹಾರ ಪದಾರ್ಥಗಳ ಕೊರತೆಯಿಲ್ಲ. ಆದರೆ, ರೈತರಿಗೆ ಇದಕ್ಕೆ ತಕ್ಕುದಾದ ಗೌರವ ಸಿಗುತ್ತಿಲ್ಲ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಆಕ್ರೋಶ ವ್ಯಕ್ತಪಡಿಸಿದೆ.

ಎಐಕೆಎಸ್‌ಸಿಸಿ ದೇಶಾದ್ಯಂತ 250ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಹೊಂದಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಅವಧಿಯಲ್ಲಿ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ನಿರಂತರವಾಗಿ ಕಡೆಗಣಿಸುತ್ತಾ ಬರುತ್ತಿದೆ. ಹೀಗಾಗಿ, ತಮ್ಮ ಬೇಡಿಕೆಗಳನ್ನುಈಡೇರಿಸುವಂತೆ ಆಗ್ರಹಿಸಿ ಸಾಮಾಜಿಕ ಮಾಧ್ಯಮ ಮೂಲಕ ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಎಐಕೆಎಸ್‌ಸಿಸಿಯ ರಾಷ್ಟ್ರೀಯ ಕನ್ವೀನರ್ ಸರ್ದಾರ್ ಬಿಎಂ ಸಿಂಗ್ ಮಾತನಾಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ರೈತರೂ ಮುಂಚೂಣಿಯಲ್ಲಿದ್ದಾರೆ. ಆದರೆ, ಸರ್ಕಾರ ಇಲ್ಲಿಯವರೆಗೆ ಅವರನ್ನು ಕಡೆಗಣಿಸಿದೆ. ಹಠಾತ್ತನೆ ಲಾಕ್​ಡೌನ್​ ವಿಧಿಸಿದ್ದರಿಂದ ರೈತರು ಸಾಕಷ್ಟು ತೊಂದರೆಗಳನ್ನು ಎದುರಿಸಿದರು. ಕೊಯ್ಲು ಮಾಡುವ ವೇಳೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಅನುಸರಿಸಿದ ರೈತರು ಮತ್ತು ಕಾರ್ಮಿಕರಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದರು.

ಎಲ್ಲಾ ಪ್ರತಿಕೂಲ ಸಂದರ್ಭಗಳ ಹೊರತಾಗಿಯೂ ದೇಶದಲ್ಲಿ ಎಲ್ಲಿಯೂ ಆಹಾರ ಧಾನ್ಯಗಳ ಹಾಗೂ ಆಹಾರ ಪದಾರ್ಥಗಳ ಕೊರತೆಯಿಲ್ಲ. ರೈತರ ಶ್ರಮದ ಫಲವೇ ಇಂದು ದೇಶದಲ್ಲಿ ಸಾಕಷ್ಟು ಆಹಾರವಿದೆ. ಆದರೆ, ರೈತರಿಗೆ ಸರ್ಕಾರದಿಂದ ಯಾವುದೇ ಮಾನ್ಯತೆ ಸಿಗುತ್ತಿಲ್ಲ. ಅವರನ್ನು ಆಹಾರ ಯೋಧರೆಂದು ಗುರುತಿಸಬೇಕಾಗಿತ್ತು ಎಂದು ಸಿಂಗ್ ಒತ್ತಾಯಿಸಿದರು.

ABOUT THE AUTHOR

...view details