ಕರ್ನಾಟಕ

karnataka

ETV Bharat / business

₹ 12,000 ಕೋಟಿಯಷ್ಟಿದ್ದ ಕೃಷಿ ಬಜೆಟ್​ ₹ 1.34 ಲಕ್ಷ ಕೋಟಿಗೆ ಹೆಚ್ಚಿಸಿದ್ದೇವೆ: ಕೇಂದ್ರ ಸಚಿವ

ಕೃಷಿ ಸಚಿವಾಲಯದ ಬಜೆಟ್ 2009-10ರಲ್ಲಿ ಕೇವಲ 12,000 ಕೋಟಿ ರೂ. ಆಗಿತ್ತು. ರೈತರು ಮತ್ತು ಕೃಷಿಯ ಬಗ್ಗೆ ಪ್ರಧಾನ ಮಂತ್ರಿಗಳ ಬದ್ಧತೆಯಿಂದಾಗಿ ಇದನ್ನು 11 ಪಟ್ಟು ಅಂದರೆ 1.34 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.

Farm
ಕೃಷಿ

By

Published : Oct 3, 2020, 7:39 PM IST

ನವದೆಹಲಿ:ಯುಪಿಎ ಆಡಳಿತದಲ್ಲಿ 2009-10ರಲ್ಲಿ ಕೃಷಿ ಸಚಿವಾಲಯದ ಬಜೆಟ್ ಅನ್ನು 12-10 ಸಾವಿರ ಕೋಟಿ ರೂ.ಗಳಿಂದ 11 ಪಟ್ಟ ಏರಿಕೆ ಮಾಡಿ 1.34 ಲಕ್ಷ ಕೋಟಿ ರೂ.ಯಷ್ಟು ಹೆಚ್ಚಿಸಲಾಗಿದೆ. ಇದು ರೈತರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆ ಪ್ರತಿಬಿಂಬಿಸುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.

ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಸ್ವಾತಂತ್ರ್ಯ ನೀಡುವ ಗುರಿ ಹೊಂದಿರುವ ಹೊಸ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದೆ. ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಿಗುವುದಿಲ್ಲ ಎಂಬ ಆತಂಕವಿದೆ. ಇದನ್ನು ವೀರೋಧಿಸಿ ಕೃಷಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದು ಸರಿಯಲ್ಲ, ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲೇ ಕಾನೂನು ಜಾರಿಗೆ ತಂದಿದೆ ಎಂಬುದು ಸರ್ಕಾರದ ಸಮರ್ಥನೆ ಆಗಿದೆ

ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಗ್ರಾಮಗಳ, ರೈತರ, ಬಡವರ ಮತ್ತು ಕೃಷಿಯಲ್ಲಿ ನಿರಂತರ ಪ್ರಗತಿಯಾಗುತ್ತಿದೆ ಎಂದು ಕಾರ್ಮಿಕ ಸಚಿವರು ಹೇಳಿದ್ದಾರೆ.

ಕೃಷಿ ಸಚಿವಾಲಯದ ಬಜೆಟ್ 2009-10ರಲ್ಲಿ ಕೇವಲ 12,000 ಕೋಟಿ ರೂ. ಆಗಿತ್ತು. ರೈತರು ಮತ್ತು ಕೃಷಿಯ ಬಗ್ಗೆ ಪ್ರಧಾನ ಮಂತ್ರಿಗಳ ಬದ್ಧತೆಯಿಂದಾಗಿ ಇದನ್ನು 11 ಪಟ್ಟು ಅಂದರೆ 1.34 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದರು.

ಪಿಚಿಡಿಸಿಸಿ ಆಯೋಜಿಸಿದ್ದ ವರ್ಚ್ಯುವಲ್​​ ಸಮಾವೇಶದಲ್ಲಿ 'ಕ್ಯಾಪಿಟಲ್ ಮಾರ್ಕೆಟ್​ ಆ್ಯಂಡ್ ಕಮೊಡಿಟ್ ಮಾರ್ಕೆಟ್​: ಆತ್ಮನಿರ್ಭರ ಭಾರತ ನಿರ್ಮಿಸುವಲ್ಲಿ ಹಣಕಾಸು ಮಾರುಕಟ್ಟೆಗಳ ಪಾತ್ರ' ಕುರಿತು ಮಾತನಾಡಿದ ಸಚಿವರು, ಹೊಸ ಕೃಷಿ ಕಾನೂನುಗಳಿಂದ ರೈತರು ಅಪಾರ ಪ್ರಯೋಜನ ಪಡೆಯುತ್ತಾರೆ. ಅವರು ತಮ್ಮ ಉತ್ಪನ್ನಗಳನ್ನು ಇತರ ರಾಜ್ಯಗಳಲ್ಲಿಯೂ ಉತ್ತಮ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದರು.

ಯುಪಿಎ ಆಡಳಿತಕ್ಕೆ ಹೋಲಿಸಿದರೆ ಬೆಳೆಗಳ ಬೆಂಬಲ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಎಂಎಸ್​ಪಿ ರದ್ದುಪಡಿಸುವ ಆತಂಕವನ್ನು ಸಚಿವರು ದೂರ ಮಾಡಿದರು.

ಸಂಸತ್ತು ಅಂಗೀಕರಿಸಿದ ಸಾಮಾಜಿಕ ಭದ್ರತೆ, ಕೈಗಾರಿಕಾ ಸ್ನೇಹಿ ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು ಮೂರು ಪ್ರಮುಖ ಕಾರ್ಮಿಕ ಸಂಹಿತೆಗಳ ಕುರಿತು ಅವರು ಮಾತನಾಡಿದರು. ಈ ಸುಧಾರಣೆಗಳು ಮುಂಬರುವ ದಿನಗಳಲ್ಲಿ ಕಾರ್ಮಿಕರು ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ABOUT THE AUTHOR

...view details