ಕರ್ನಾಟಕ

karnataka

ETV Bharat / business

ಭಾರತದ ರಫ್ತು ಪ್ರಮಾಣ ಸತತ 3ನೇ ತಿಂಗಳು ಕುಸಿತ: $ 3.15 ಬಿಲಿಯನ್​​ ವ್ಯಾಪಾರ ಕೊರತೆ - ಭಾರತದ ಆಮದು

ಕೊರೊನಾ ವೈರಸ್ ದೇಶದ ಆಮದು ಮತ್ತು ರಪ್ತು ಉದ್ಯಮದ ಮೇಲೆ ತೀವ್ರ ಪೆಟ್ಟು ನೀಡಿದೆ. ಕಳೆದ ನಾಲು ದಶಕಗಳಲ್ಲಿ ರಪ್ತು ಮತ್ತು ಆಮದು ಪ್ರಮಾಣದಲ್ಲಿ ತೀವ್ರ ಏರುಪೇರುಗಳು ಸಂಭವಿಸಿ, ಈ ಸಂಬಂಧಿ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿವೆ.

India exports
ಭಾರತದ ರಫ್ತು

By

Published : Jun 15, 2020, 11:32 PM IST

ನವದೆಹಲಿ: ಸತತ ಮೂರನೇ ತಿಂಗಳ ಕೂಡ ಭಾರತದ ರಫ್ತು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಇದಕ್ಕೆ ಕಾರಣ ಕೊರೊನಾ ವೈರಸ್ ಪ್ರೇರೇಪಿತ ಲಾಕ್​ಡೌನ್​.

ಮೇ ತಿಂಗಳಲ್ಲಿ ಶೇ 36.47 ರಷ್ಟು ಇಳಿದ ರಫ್ತು ಪ್ರಮಾಣ, 19.05 ಶತಕೋಟಿ ಡಾಲರ್‌ಗೆ ತಲುಪಿದೆ. ಪೆಟ್ರೋಲಿಯಂ, ಜವಳಿ, ಎಂಜಿನಿಯರಿಂಗ್, ರತ್ನಗಳು ಮತ್ತು ಆಭರಣಗಳಂತಹ ಪ್ರಮುಖ ವಲಯಗಳಲ್ಲಿ ಸಾಗಣೆ ಪ್ರಮಾಣ ಕಡಿಮೆಯಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಆಮದು ಪ್ರಮಾಣ 51 ಪ್ರತಿಶತದಷ್ಟು ಕುಸಿದಿದೆ. ಮೇ ತಿಂಗಳಲ್ಲಿ 22.2 ಶತಕೋಟಿ ಡಾಲರ್‌ಗೆ ಇಳಿದಿದ್ದು, 3.15 ಬಿಲಿಯನ್ ಡಾಲರ್‌ ವ್ಯಾಪಾರ ಕೊರತೆ ದಾಖಲಾಗಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ 15.36 ಬಿಲಿಯನ್ ಡಾಲರ್‌ಗಳಿಷ್ಟಿತ್ತು.

2020ರ ಏಪ್ರಿಲ್-ಮೇ ಅವಧಿಯಲ್ಲಿ ರಫ್ತು ಶೇ 47.54 ರಷ್ಟು ಕುಸಿದು 29.41 ಬಿಲಿಯನ್ ಡಾಲರ್‌ಗೆ ತಲುಪಿದ್ದರೇ ಆಮದು ಶೇ 5.67ರಷ್ಟು ಕುಸಿದು 39.32 ಬಿಲಿಯನ್ ಡಾಲರ್‌ಗೆ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದ ಎರಡು ತಿಂಗಳಲ್ಲಿ ವ್ಯಾಪಾರ ಕೊರತೆ 9.91 ಬಿಲಿಯನ್ ಡಾಲರ್​ನಷ್ಟು ಆಗಿದೆ.

ತೈಲ ಆಮದು ಮೇ ತಿಂಗಳಲ್ಲಿ 3.49 ಬಿಲಿಯನ್ ಯುಎಸ್ ಡಾಲರ್ ಆಗಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ 12.44 ಬಿಲಿಯನ್ ಯುಎಸ್ ಡಾಲರ್​ಗೆ ಹೋಲಿಸಿದರೆ ಶೇ 71.98ರಷ್ಟು ತುಟ್ಟಿಯಾಗಿದೆ. ಚಿನ್ನದ ಆಮದು ಸಹ ಶೇ 98.4ರಷ್ಟು ಇಳಿದು 76.31 ಮಿಲಿಯನ್ ಡಾಲರ್‌ಗೆ ತಲುಪಿದೆ.

ಕೊರೊನಾ ವೈರಸ್ ದೇಶದ ಆಮದು ಮತ್ತು ರಪ್ತು ಉದ್ಯಮದ ಮೇಲೆ ತೀವ್ರ ಪೆಟ್ಟು ನೀಡಿದೆ. ಕಳೆದ ನಾಲು ದಶಕಗಳಲ್ಲಿ ರಪ್ತು ಮತ್ತು ಆಮದು ಪ್ರಮಾಣದಲ್ಲಿ ತೀವ್ರ ಏರುಪೇರುಗಳು ಸಂಭವಿಸಿ, ಈ ಸಂಬಂಧಿ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿವೆ.

ಅಕ್ಕಿ, ಮಸಾಲೆ, ಉಕ್ಕು, ಔಷಧಗಳು ಮೇ ತಿಂಗಳಲ್ಲಿ ರಫ್ತಿನಲ್ಲಿ ಧನಾತ್ಮಕ ಬೆಳವಣಿಗೆ ದಾಖಲಿಸಿದೆ. ಆಮದು ಮಾಡಿಕೊಂಡ ವಸ್ತುಗಳ ಪೈಕಿ ಕಬ್ಬಿಣದ ಪೈರೈಟ್‌, ಯೋಜನಾ ಸರಕುಗಳು ನಿರೀಕ್ಷಿತ ಬೆಳವಣಿಗೆ ಕಂಡಿವೆ. ಉಳಿದಂತೆ ಇತರ ಎಲ್ಲ ಬಗೆಯ ರಪ್ತು ಆಮದು ನೆಲ ಕಚ್ಚಿದೆ. ಸುಮಾರು 2 ತಿಂಗಳ ಅವಧಿಯ ರಾಷ್ಟ್ರವ್ಯಾಪಿ ಲಾಕ್‌ಡೌನ್ ದೇಶದ ವಹಿವಾಟನ್ನು ಸಂಕಷ್ಟಕ್ಕೆ ನೂಕಿದೆ. ಈ ಎಲ್ಲ ಏರುಪೇರುಗಳು ಭಾರತ ಆರ್ಥಿಕತೆ ಕುಸಿಯುತ್ತಿರುವ ಸೂಚನೆಗಳಾಗಿವೆ.ನವದೆಹಲಿ: ಸತತ ಮೂರನೇ ತಿಂಗಳ ಕೂಡ ಭಾರತದ ರಫ್ತು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಇದಕ್ಕೆ ಕಾರಣ ಕೊರೊನಾ ವೈರಸ್ ಪ್ರೇರೇಪಿತ ಲಾಕ್​ಡೌನ್​.

ಮೇ ತಿಂಗಳಲ್ಲಿ ಶೇ 36.47 ರಷ್ಟು ಇಳಿದ ರಫ್ತು ಪ್ರಮಾಣ, 19.05 ಶತಕೋಟಿ ಡಾಲರ್‌ಗೆ ತಲುಪಿದೆ. ಪೆಟ್ರೋಲಿಯಂ, ಜವಳಿ, ಎಂಜಿನಿಯರಿಂಗ್, ರತ್ನಗಳು ಮತ್ತು ಆಭರಣಗಳಂತಹ ಪ್ರಮುಖ ವಲಯಗಳಲ್ಲಿ ಸಾಗಣೆ ಪ್ರಮಾಣ ಕಡಿಮೆಯಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಆಮದು ಪ್ರಮಾಣ 51 ಪ್ರತಿಶತದಷ್ಟು ಕುಸಿದಿದೆ. ಮೇ ತಿಂಗಳಲ್ಲಿ 22.2 ಶತಕೋಟಿ ಡಾಲರ್‌ಗೆ ಇಳಿದಿದ್ದು, 3.15 ಬಿಲಿಯನ್ ಡಾಲರ್‌ ವ್ಯಾಪಾರ ಕೊರತೆ ದಾಖಲಾಗಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ 15.36 ಬಿಲಿಯನ್ ಡಾಲರ್‌ಗಳಿಷ್ಟಿತ್ತು.

2020ರ ಏಪ್ರಿಲ್-ಮೇ ಅವಧಿಯಲ್ಲಿ ರಫ್ತು ಶೇ 47.54 ರಷ್ಟು ಕುಸಿದು 29.41 ಬಿಲಿಯನ್ ಡಾಲರ್‌ಗೆ ತಲುಪಿದ್ದರೇ ಆಮದು ಶೇ 5.67ರಷ್ಟು ಕುಸಿದು 39.32 ಬಿಲಿಯನ್ ಡಾಲರ್‌ಗೆ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದ ಎರಡು ತಿಂಗಳಲ್ಲಿ ವ್ಯಾಪಾರ ಕೊರತೆ 9.91 ಬಿಲಿಯನ್ ಡಾಲರ್​ನಷ್ಟು ಆಗಿದೆ.

ತೈಲ ಆಮದು ಮೇ ತಿಂಗಳಲ್ಲಿ 3.49 ಬಿಲಿಯನ್ ಯುಎಸ್ ಡಾಲರ್ ಆಗಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ 12.44 ಬಿಲಿಯನ್ ಯುಎಸ್ ಡಾಲರ್​ಗೆ ಹೋಲಿಸಿದರೆ ಶೇ 71.98ರಷ್ಟು ತುಟ್ಟಿಯಾಗಿದೆ. ಚಿನ್ನದ ಆಮದು ಸಹ ಶೇ 98.4ರಷ್ಟು ಇಳಿದು 76.31 ಮಿಲಿಯನ್ ಡಾಲರ್‌ಗೆ ತಲುಪಿದೆ.

ಕೊರೊನಾ ವೈರಸ್ ದೇಶದ ಆಮದು ಮತ್ತು ರಪ್ತು ಉದ್ಯಮದ ಮೇಲೆ ತೀವ್ರ ಪೆಟ್ಟು ನೀಡಿದೆ. ಕಳೆದ ನಾಲು ದಶಕಗಳಲ್ಲಿ ರಪ್ತು ಮತ್ತು ಆಮದು ಪ್ರಮಾಣದಲ್ಲಿ ತೀವ್ರ ಏರುಪೇರುಗಳು ಸಂಭವಿಸಿ, ಈ ಸಂಬಂಧಿ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿವೆ.

ಅಕ್ಕಿ, ಮಸಾಲೆ, ಉಕ್ಕು, ಔಷಧಗಳು ಮೇ ತಿಂಗಳಲ್ಲಿ ರಫ್ತಿನಲ್ಲಿ ಧನಾತ್ಮಕ ಬೆಳವಣಿಗೆ ದಾಖಲಿಸಿದೆ. ಆಮದು ಮಾಡಿಕೊಂಡ ವಸ್ತುಗಳ ಪೈಕಿ ಕಬ್ಬಿಣದ ಪೈರೈಟ್‌, ಯೋಜನಾ ಸರಕುಗಳು ನಿರೀಕ್ಷಿತ ಬೆಳವಣಿಗೆ ಕಂಡಿವೆ. ಉಳಿದಂತೆ ಇತರ ಎಲ್ಲ ಬಗೆಯ ರಪ್ತು ಆಮದು ನೆಲ ಕಚ್ಚಿದೆ. ಸುಮಾರು 2 ತಿಂಗಳ ಅವಧಿಯ ರಾಷ್ಟ್ರವ್ಯಾಪಿ ಲಾಕ್‌ಡೌನ್ ದೇಶದ ವಹಿವಾಟನ್ನು ಸಂಕಷ್ಟಕ್ಕೆ ನೂಕಿದೆ. ಈ ಎಲ್ಲ ಏರುಪೇರುಗಳು ಭಾರತ ಆರ್ಥಿಕತೆ ಕುಸಿಯುತ್ತಿರುವ ಸೂಚನೆಗಳಾಗಿವೆ.

ABOUT THE AUTHOR

...view details