ಕರ್ನಾಟಕ

karnataka

ETV Bharat / business

ತಮಿಳುನಾಡಿನ ಆರ್ಥಿಕ ಪುನಶ್ಚೇತನ ಸಮಿತಿಗೆ RBI ಮಾಜಿ ಗವರ್ನರ್​ ​​ರಂಗರಾಜನ್ ಕ್ಯಾಪ್ಟನ್​ - ವಾಣಿಜ್ಯ ಸುದ್ದಿ

ಸಿ.ರಂಗರಾಜನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಅರ್ಥಶಾಸ್ತ್ರಜ್ಞರು, ಕೈಗಾರಿಕೋದ್ಯಮಿಗಳು, ಉಪಕುಲಪತಿಗಳು, ಬ್ಯಾಂಕರ್‌ಗಳು, ಸರ್ಕಾರಿ ಅಧಿಕಾರಿಗಳು ಮತ್ತು ಇತರೆ ಉದ್ದಿಮೆ ತಜ್ಞರನ್ನು ಒಳಗೊಂಡಿರಲಿದೆ. ಸಮಿತಿಯು ತನ್ನ ಅಂತಿಮ ವರದಿಯನ್ನು ಮೂರು ತಿಂಗಳಲ್ಲಿ ಸಲ್ಲಿಸಬೇಕು.

RBI Governor C. Rangarajan
ಆರ್‌ಬಿಐ ಮಾಜಿ ಗವರ್ನರ್ ಸಿ. ರಂಗರಾಜನ್

By

Published : May 9, 2020, 11:57 PM IST

Updated : May 10, 2020, 6:59 AM IST

ಚೆನ್ನೈ:ಕೋವಿಡ್​-19 ಸಂಕಷ್ಟದಿಂದ ರಾಜ್ಯ ಎದುರಿಸುತ್ತಿರುವ ಹಣಕಾಸಿನ ಸವಾಲು ಮತ್ತು ಮುಂದಿನ ಆರ್ಥಿಕ ನಿರ್ಧಾರದ ಬಗ್ಗೆ ಗಮನ ಹರಿಸಲು ಆರ್‌ಬಿಐನ ಮಾಜಿ ಗವರ್ನರ್ ಸಿ.ರಂಗರಾಜನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

ಸಮಿತಿ ಅರ್ಥಶಾಸ್ತ್ರಜ್ಞರು, ಕೈಗಾರಿಕೋದ್ಯಮಿಗಳು, ಉಪಕುಲಪತಿಗಳು, ಬ್ಯಾಂಕರ್‌ಗಳು, ಸರ್ಕಾರಿ ಅಧಿಕಾರಿಗಳು ಮತ್ತು ಇತರೆ ಉದ್ದಿಮೆ ತಜ್ಞರನ್ನು ಒಳಗೊಂಡಿರಲಿದೆ. ಸಮಿತಿಯು ತನ್ನ ಅಂತಿಮ ವರದಿಯನ್ನು ಮೂರು ತಿಂಗಳಲ್ಲಿ ಸಲ್ಲಿಸಬೇಕು. ಇದರ ಜೊತೆಗೆ ಸೂಕ್ತವೆಂದು ಪರಿಗಣಿಸಬಹುದಾದ ಅಂಶಗಳ ಮಧ್ಯಂತರ ವರದಿ ಸಹ ನೀಡಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸಮಿತಿಯ ಉಲ್ಲೇಖಗಳ ನಿಯಮಗಳು:

* ಲಾಕ್​ಡೌನ್​ನ ಹೆಚ್ಚುವರಿ ವೆಚ್ಚ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಇತರ ಮುನ್ನೆಚ್ಚರಿಕೆ ಕ್ರಮಗಳಿಂದ ವಿವಿಧ ಕ್ಷೇತ್ರಗಳ ಮೇಲೆ ಉಂಟಾಗುವ ತಕ್ಷಣದ ಮತ್ತು ಮಧ್ಯಮ ಅವಧಿಯ ಪರಿಣಾಮಗಳನ್ನು ನಿರ್ಣಯಿಸುವುದು

* ಅಲ್ಪ ಮತ್ತು ಮಧ್ಯಮ ಅವಧಿಗೆ ಎದುರಾಗುವ ಅವಕಾಶ ಮತ್ತು ಅಡೆತಡೆಗಳನ್ನು ಕಂಡುಕೊಳ್ಳುವುದು

* ಕೋವಿಡ್ -19 ಸಾಂಕ್ರಾಮಿಕ ರೋಗ ನಿವಾರಿಸಲು ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಿಗೆ ನೆರವಾಗುವ ಕ್ರಮಗಳು

* ಆರ್ಥಿಕತೆಯ ಪ್ರಮುಖ ಕ್ಷೇತ್ರಗಳ ಬೆಳವಣಿಗೆಗೆ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ಸಲಹೆ

* ರಾಜ್ಯ ಸರ್ಕಾರದ ಹಣಕಾಸಿನ ಮೇಲೆ ಕೋವಿಡ್-19 ಪ್ರಭಾವದ ಅಂದಾಜು ಮತ್ತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ತೆಗೆದುಕೊಳ್ಳಬೇಕಾದ ಸಮಸ್ಯೆಗಳಿಗೆ ಪರಿಹಾರ ಪತ್ತೆ ಹಚ್ಚವುದು

* ಮೂಲಸೌಕರ್ಯ ಯೋಜನೆಗಳು, ಸಣ್ಣ ಮತ್ತು ಇತರ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಧನಸಹಾಯದ ಸಂಭವನೀಯ ಮೂಲ ಗುರುತಿಸುವುದು

Last Updated : May 10, 2020, 6:59 AM IST

ABOUT THE AUTHOR

...view details